ಪ್ರತಿದಿನ Pears ತಿನ್ನಿ : BP , ಹೃದಯ ಸಮಸ್ಯೆ ದೂರ ಇಡಿ

ಪ್ರತಿದಿನ ಪಿಯರ್ಸ್ ಹಣ್ಣು ತಿನ್ನಿ. ಇದು ಮಧ್ಯವಯಸ್ಕರ ರಕ್ತದ ಒತ್ತಡ, ಹೃದಯ ಕವಾಟದ ಚಟುವಟಿಕೆಯನ್ನು ಉತ್ತಮಪಡಿಸುತ್ತದೆ. ಜೀರ್ಣಕ್ರಿಯೆಗೂ ಇದು ಸಹಕಾರಿ ಎನ್ನುವುದನ್ನು ಇತ್ತೀಚಿನ ಅಧ್ಯಯನವೊಂದು ಹೇಳಿದೆ.
ವಿಶ್ವದಲ್ಲಿ ಅತ್ಯಂತ ಹೆಚ್ಚು ಜನಪ್ರಿಯವಾದ ಈ ಹಣ್ಣಿನಲ್ಲಿ ನಾರಿನ ಅಂಶ ಹಾಗೂ ವಿಟಮಿನ್ ಸಿ ಹೇರಳವಾಗಿದೆ. ಇದು ಕೇವಲ 100 ಕ್ಯಾಲೊರಿಯನ್ನಷ್ಟೇ ನೀಡುತ್ತದೆ.
ದೈನಂದಿನ ಅಗತ್ಯವಾದ 24 ಶೇಕಡ ಪೈಬರ್ ಒದಗಿಸುತ್ತದೆ. 45ರಿಂದ 65 ವರ್ಷ ವಯಸ್ಸಿನ 50 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಿ ಈ ಅಧ್ಯಯನ ನಡೆಸಲಾಗಿತ್ತು.
ಇವರಿಗೆ ಮಧ್ಯಮ ಗಾತ್ರದ ಎರಡು ಪಿಯರ್ಸ್ ಹಣ್ಣು ಅಥವಾ ಅದರ ಸುವಾಸನೆಯ ಪೇಯವನ್ನು 12 ವಾರಗಳ ಕಾಲ ನೀಡಲಾಯಿತು. ಬಳಿಕ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಹೃದ್ರೋಗಿಗಳಲ್ಲಿ ಗಣನೀಯ ಸುಧಾರಣೆ ಕಂಡುಬಂತು.
50 ಮಂದಿಯ ಪೈಕಿ 36 ಮಂದಿಯ ರಕ್ತದ ಒತ್ತಡ ಮತ್ತು ನಾಡಿ ಒತ್ತಡ ಕಡಿಮೆಯಾಗಿತ್ತು. ಇದೀಗ ಹೈಪರ್‌ಟೆನ್ಷನ್ ವಿರುದ್ಧ ಇದು ಬೀರುವ ಪರಿಣಾಮ ಮತ್ತು ಚಯಾಪಚಯ ಕ್ರಿಯೆ ಮೇಲೆ ಬೀರುವ ಪರಿಣಾಮದ ಬಗ್ಗೆಯೂ ಅಧ್ಯಯನ ನಡೆಯುತ್ತದೆ.
ಹಣ್ಣು ಮತ್ತು ತರಕಾರಿಗಳ ಆಹಾರ ಕ್ರಮದಿಂದ ಮೈಕ್ರೊ ಪೋಷಕಾಂಶಗಳು, ವಿಟಮಿನ್‌ಗಳು, ನಾರಿನ ಅಂಶ, ಪೊಟ್ಯಾಷಿಯಂ, ಪೈಥೊಕೆಮಿಕಲ್‌ಗಳು ಸಿಗುತ್ತವೆ ಎಂದು ಸಂಶೋಧಕರು ಹೇಳುತ್ತಾರೆ.







