ಪ್ರಧಾನಿ ಮೋದಿ ಕೊಲ್ಲಂಗೆ

ಕೊಲ್ಲಂ, ಎ.10: ಅಗ್ನಿ ದುರಂತ ಸಂಭವಿಸಿದ ಕೇರಳದ ಪುತಿಂಗಲ್ ನ ಮುಕಾಂಬಿಕ ದೇವಸ್ಥಾನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ವಾಯುಪಡೆಯ ವಿಶೇಷ ವಿಮಾನದಲ್ಲಿ ಆಗಮಿಸಿದ್ದಾರೆ.
ಪ್ರಧಾನಿ ಮೋದಿ ವಿಮಾನದಲ್ಲಿ ತಿರುವನಂತಪುರ ಆಗಮಿಸಿ ಹೆಲಿಕಾಪ್ಟರ್ ಮೂಲಕ ಕೊಲ್ಲಂಗೆ ತೆರಳಿದರು.
ಅಗ್ನಿ ದುರಂತ ಸಂಭವಿಸಿದ ದೇವಸ್ಥಾ ನದ ಆವರಣದಲ್ಲಿ ಪರಿಶೀಲಿಸಿದರು. ಮೃತ ಪಟ್ಟವರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
15 ಮಂದಿ ವೈದರ ತಂಡ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆಪಿ ನಡ್ಡಾ ಪ್ರಧಾನಿ ಮೋದಿ ಜೊತೆ ಕೊಲ್ಲಂಗೆ ತೆರಳಿದ್ದಾರೆ.
Next Story





