ಶಕ್ತಿನಗರದಲ್ಲಿ ಬೆಂಕಿ ಆಕಸ್ಮಿಕ

ಮಂಗಳೂರು, ಎ. 10: ಶಕ್ತಿನಗರದ ರಾಮಭಜನಾ ಮಂದಿರ ಬಳಿಯ ಸುಬ್ರಾಯ ಕಾಮತ್ ಎಂಬವರಿಗೆ ಸೇರಿದ ಮನೆಯ ಕಾಂಪೌಂಡ್ ಒಳಗೆ ಇಂದು ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.
ಕಾಮತ್ ಅವರ ಮನೆಯ ಕಾಂಪೌಂಡ್ ಒಳಗೆ ಒಣಗಿದ ಗಿಡ, ಬಳ್ಳಿಗಳ ಸಹಿತ ಪೊದರುಗಳಿಗೆ ಬೆಂಕಿ ತಗುಲಿದ್ದು, ಮನೆ ಅಥವಾ ಮನೆ ಮಂದಿಗೆ ಯಾವುದೇ ಹಾನಿಯಾಗಿಲ್ಲ. ಕಾಂಪೌಂಡ್ ಒಳಗಿದ್ದ ಟ್ರಾನ್ಸ್‌ಫಾರ್ಮರ್‌ನಿಂದಾಗಿ ಈ ಬೆಂಕಿ ಹರಡಿರಬಹುದೆಂದು ಶಂಕಿಸಲಾಗಿದೆ. ಕದ್ರಿ ಅಗ್ನಿ ಶಾಮಕ ದಳದ ಸಿಬ್ಬಂದಿಯವರು ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.
Next Story





