ಮಂಗಳೂರು : 14ರಿಂದ ಉಚಿತ ಬೇಸಿಗೆ ಫುಟ್ಬಾಲ್ ತರಬೇತಿ

ಮಂಗಳೂರು, ಎ.10: ಉಳ್ಳಾಲ ಮಾಸ್ತಿಕಟ್ಟೆಯ ಯೂತ್ ಸ್ಪೋರ್ಟ್ಸ್ ಅತಾಡಮಿಯ 14ನೆ ವರ್ಷದ ಪ್ರಯುಕ್ತ ಎಪ್ರಿಲ್ 14ರಿಂದ ಮೇ 28ರವರೆಗೆ ಉಚಿತ ಫುಟ್ಬಾಲ್ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ಉಳ್ಳಾಲದ ಭಾರತ್ ಪ್ರೌಢ ಶಾಲಾ ಮೈದಾನದಲ್ಲಿ ಬೆಳಗ್ಗೆ 7 ಗಂಟೆಯಿಂದ ಬೆಳಗ್ಗೆ 9:30ರವರೆಗೆ ನ ಡೆಯಲಿದೆ. ಆಸಕ್ತರು ಶಿಬಿರದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಅಕಾಡಮಿಯ ಅಧ್ಯಕ್ಷ ಸಾಜಿದ್ ಉಳ್ಳಾಲ (9900410900) ಹಾಗೂ ನಿರ್ದೇಶಕ ತುಕರಾಮ್ (9035084023) ಇವರನ್ನು ಸಂಪರ್ಕಿಸಲು ಕೋರಲಾಗಿದೆ.
Next Story





