ಕಾರ್ಕಳ: ಗಾಂಜಾ ಮಾರುತ್ತಿದ್ದ ರೌಡಿ ಶೀಟರ್ ಬಂಧನ: 30 ಸಾವಿರ ಮೌಲ್ಯದ 1.9 ಕೆ.ಜಿ ಗಾಂಜಾ ವಶ

ಕಾರ್ಕಳ: ಬೆಳ್ಮಣ್ಣು ಸಮೀಪದ ನಂದಳಿಕೆ ಮಾವಿನಕಟ್ಟೆ ಎಂಬಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊರ್ವನನ್ನು ಕಾರ್ಕಳ ಎಎಸ್ಪಿ ಡಾ.ಸುಮನಾ ನೇತೃತ್ವದ ಪೊಲೀಸ್ ತಂಡ ಬಂಧಿಸಿ ಬಂಧಿತನಿಂದ ಸುಮಾರು 30 ಸಾವಿರ ಮೌಲ್ಯದ 1.9 ಕೆಜಿ ಗಾಂಜಾ ಹಾಗೂ ಸಾಗಾಟಕ್ಕೆ ಬಳಸಲಾದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ಸುರತ್ಕಲ್ ಕೃಷ್ಣಾಪುರ ನಿವಾಸಿ ರೌಡಿ ಶೀಟರ್ ಕೇಶವ ಸನಿಲ್(44) ಎಂಬಾತ ಬಂಧಿತ ಆರೋಪಿ. ಗಾಂಜಾ ಮಾರಾಟದ ದಂಧೆಯನ್ನು ನಡೆಸುತ್ತಿದ್ದ ಈತ ಭಾನುವಾರ ನಂದಳಿಕೆ ಗ್ರಾಮದ ಮಾವಿನಕಟ್ಟೆಗೆ ಗಾಂಜಾ ಮಾರಾಟ ಮಾಡಲು ಬರುತ್ತಿದ್ದಾನೆ ಎನ್ನುವ ಖಚಿತ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಿದ್ದಾರೆ.ಈತನ ವಿರುದ್ಧ ಸುರತ್ಕಲ್ ಪರಿಸರದಲ್ಲಿ ಸುಮಾರು 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವ ಹಿನ್ನಲೆಯಲ್ಲಿ ರೌಡಿ ಶೀಟರ್ ತೆರೆಯಲಾಗಿದೆ.
ಈತನ ವಿರುದ್ಧ ಗಾಂಜಾ ಮಾರಾಟದ ಕುರಿತು ಪಡುಬಿದ್ರೆ,ಪಣಂಬೂರು ಮುಂತಾದ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಸುಮುತ್ತಲಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಗಾಂಜಾ ಮಾರಾಟ ಮಾಡಲು ಬಂದಿದ್ದ ಎನ್ನಲಾಗಿದೆ.
ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





