ರಾಜ್ಯ ಸರಕಾರದ ವಿರುದ್ಧ ಸ್ಪೀಕರ್ ಚಾಟಿ

ಶಿವಮೊಗ್ಗ,ಎ.10: ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪರವರು ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮತ್ತೆ ಚಾಟಿ ಬೀಸಿದ್ದಾರೆ. ಬರ ಪರಿಹಾರ ನಿರ್ವಹಣೆ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಸರಕಾರದಲ್ಲಿ ಪಾರದರ್ಶಕತೆ ಆಡಳಿತ ಎಲ್ಲಿದೆ? ಎಂದು ಕಿಡಿಕಾರಿದ್ದಾರೆ. ರವಿವಾರ ನಗರದ ಸರಕಾರಿ ನೌಕರರ ಸಂಘದ ಸಭಾಂಗ ಣದಲ್ಲಿ ನಡೆದ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿದ ನಂತರ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ರಾಜ್ಯಾದ್ಯಂತ ಬರದ ಛಾಯೆ ಆವರಿಸಿದೆ. ಸುಮಾರು 133 ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಸರಕಾರದಿಂದ ಉತ್ತಮ ಸ್ಪಂದನೆಯ ನಿರೀಕ್ಷೆಯಿತ್ತು. ಆದರೆ ಬರ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡುತ್ತಿಲ್ಲ. ಅನುದಾನದ ಕೊರತೆಯಿದೆ. ಬರ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಈ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುವಂತೆ ಕೆಲ ಶಾಸಕರಿಗೆ ತಾವೇ ಸಲಹೆ ನೀಡಿದ್ದೆ. ಆದರೆ ಶಾಸಕ
ು ಸರಿಯಾಗಿ ವಿಧಾನಸಭೆ ಕಲಾಪಕ್ಕೆ ಬರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಕ್ಕೆ ಬರುತ್ತಿದ್ದಂತೆ ಆಡಳಿತದಲ್ಲಿ ಪಾರದರ್ಶಕತೆಗೆ ಒತ್ತು ನೀಡುವುದಾಗಿ ಮುಖ್ಯಮಂತ್ರಿ ಹೇಳಿದ್ದರು. ಆದರೆ ಎರಡು ವರ್ಷವಾದರೂ ಆಡಳಿತದಲ್ಲಿ ಪಾರದರ್ಶಕತೆ ಬಂದಿಲ್ಲವೇಕೆ? ಅಧಿಕಾರ ಹಿಡಿಯುವಾಗ ಪಾರದರ್ಶಕ ಆಡಳಿತ ತಲೆಯಲ್ಲಿತ್ತು. ಈಗೇಕೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್, ಆಡಳಿತದಲ್ಲಿ ಪಾರದರ್ಶಕತೆ ತರಲು ಕ್ರಮಕೈಗೊಳ್ಳುವಂತೆ ಸಿಎಂಗೆ ಸಲಹೆ ನೀಡಿದ್ದೇನೆ ಎಂದರು. ಸರಕಾರಕ್ಕೆ ಬರುವ ಸಮಸ್ಯೆಯ ಪತ್ರಗಳು ಸಮರ್ಪಕವಾಗಿ ವಿಲೇವಾರಿ ಯಾಗುತ್ತಿಲ್ಲ. ಪರಿಹಾರ ಸಿಗುತ್ತಿಲ್ಲ. ಇದ್ದಲ್ಲಿಯೇ ಆ ಪತ್ರಗಳು ಕೊಳೆಯುತ್ತಿವೆ. ಇನ್ನಾದರೂ ಆಡಳಿತದಲ್ಲಿ ಪಾರದರ್ಶಕತೆ ಬರಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳು ಸರಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು. ಟೋಪಿ:
ಪ್ರಸ್ತುತ ರಾಜಕಾರಣದಲ್ಲಿಗೆಲ್ಲುವ ಕುದುರೆಯನ್ನು ಅಖಾಡಕ್ಕೆ ನಿಲ್ಲಿಸಿ, ರಾಜಕೀಯದ ಟೋಪಿ ತೊಡಿಸಲಾಗುತ್ತಿದೆ. ಆದರೆ ತಾನು ಈ ರೀತಿಯ ಟೋಪಿ ತೊಟ್ಟು ಬಂದವನಲ್ಲ. ಹೋರಾಟದ ಹಿನ್ನೆಲೆಯಿಂದ ಬಂದವನು. ಸಮಾಜವಾದಿ ಹೋರಾಟಗಾರರಾದ ಲೋಹಿಯಾ, ಶಾಂತವೇರಿ ಗೋಪಾಲಗೌಡರಂತಹ ಮಾರ್ಗದರ್ಶನದಲ್ಲಿ ಬೆಳೆದವನು. ರಾಜಕಾರಣದಲ್ಲಿ ತಮ್ಮ ಹೋರಾಟ ನಿರಂತರವಾಗಿದೆ ಎಂದರು. ಮಹತ್ವದ್ದು: ಪತ್ರಿಕೋದ್ಯಮವು ಹೊ
ೀರಾಟದ ಕ್ಷೇತ್ರವಾಗಿದೆ. ಪತ್ರಕರ್ತರಿಗೆ ಸಾಮಾಜಿಕ ಕಳಕಳಿ, ಚಿಂತನೆಯಿರಬೇಕು. ಆಡಳಿತಕ್ಕೆ ಸಮಸ್ಯೆಗಳನ್ನು ಎತ್ತಿ ತೋರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ಹೇಳಿದರು. ಸರಕಾರ ಹಾಗೂ ವಿರೋಧ ಪಕ್ಷಗಳು ಮಾಡದಂತಹ ಮಹತ್ತರ ಕೆಲಸವನ್ನು ಪತ್ರಕರ್ತರು ಮಾಡುತ್ತಾರೆ. ಕಷ್ಟದ ಜೀವನದಲ್ಲಿಯೂ ಸಾಮಾಜಿಕ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿರುವ ಪತ್ರಕರ್ತರ ಸೇವೆ ನಿಜಕ್ಕೂ ಶ್ಲಾಘನೀಯವಾದುದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಪೀಕರ್ ಹುದ್ದೆ ಶಿಕ್ಷೆಯಾಗಿದೆ:
ತಾ
ನು ಯಾವುದೇ ಹುದ್ದೆ ಹುಡುಕಿ ಕೊಂಡು ಹೋದ ವನಲ್ಲ. ಇದೇ ರೀತಿಯ ಹುದ್ದೆ ಬೇಕೆಂದು ಬಾಯ್ಬಿಟ್ಟು ಕೇಳಿದವನಲ್ಲ. ಸ್ಪೀಕರ್ ಹುದ್ದೆ ಬಂದಿದ್ದರಿಂದ ಪಕ್ಷದಿಂದ ದೂರ ಇರುವಂತಾಗಿದೆ. ಸ್ಪೀಕರ್ ಹುದ್ದೆಯು ಸೂಕ್ಷ್ಮ ಸ್ಥಾನವಾಗಿದೆ. ತಮಗೆ ಒಂದು ರೀತಿ ಶಿಕ್ಷೆಯಾಗಿದೆ. ಆದಾಗ್ಯೂ ಆಗಾಗ್ಗೆ ಮಾತನಾಡುತ್ತಿರುತ್ತೇನೆ. ಇದು ಅನಿವಾರ್ಯ ಕೂಡ ಆಗಿದೆ.







