ಎಸ್ಕೆಎಸ್ಸೆಸ್ಸೆಫ್ ಮರ್ಧಾಳ: ಸಮಸ್ತ ನೇತಾರರ ಅನುಸ್ಮರಣೆ
ಕಡಬ, ಎ.10: ಎಸ್ಕೆಎಸ್ಸೆಸ್ಸೆಫ್ ಮರ್ಧಾಳ ಕ್ಲಸ್ಟರ್ ಆಶ್ರಯದಲ್ಲಿ ಸಮಸ್ತ ನೇತಾರರ ಅನುಸ್ಮರಣೆ ಹಾಗೂ ಸೌಹಾರ್ದ ಸಂಗಮವು ಮರ್ಧಾಳ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲೆಯ ವಠಾರದಲ್ಲಿ ನಡೆಯಿತು.
ಪಿ.ಎಂ.ಇಬ್ರಾಹೀಂ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು. ಟಿ.ಎಚ್. ಶರೀಫ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ದಿಕ್ಸೂಚಿ ಭಾಷಣ ಮಾಡಿದರು. ನ್ಯಾಯವಾದಿ ಹನೀಫ್ ಹುದವಿ ದೇಲಂಪಾಡಿ ಮುಖ್ಯ ಪ್ರಭಾಷಣಗೈದರು. ಜಿಪಂ ಸದಸ್ಯರಾದ ಪಿ.ಪಿ.ವರ್ಗೀಸ್ ಧ್ವಜಾರೋಹಣಗೈದರು. ಜಾಬಿರ್ ಫೈಝಿ ಬನಾರಿ ದುಆ ನೆರವೇರಿಸಿದರು.
ಈ ಸಂದರ್ಭ ವಿಶೇಷ ಶಾಲೆಯ ಸಂಚಾಲಕ ರೆ. ಫಾ. ಆ್ಯಂಟನಿ ಒ.ಐ.ಸಿ., ತಾಪಂ ಸದಸ್ಯ ರಾದ ಗಣೇಶ್ ಕೈಕುರೆ, ಐತ್ತೂರು ಗ್ರಾಪಂ ಅಧ್ಯಕ್ಷ ಸತೀಶ್ ಕೆ., ಮರ್ಧಾಳ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುರ್ರಹ್ಮಾನ್, ಮರ್ಧಾಳ ಗ್ರಾಪಂ ಸದಸ್ಯ ಹರೀಶ್ ಕೋಡಂದೂರು, ಕುಟ್ರುಪ್ಪಾಡು ಗ್ರಾಪಂ ಸದಸ್ಯ ರಾದ ಮುಹಮ್ಮದ್ ಅಲಿ, ಅಶ್ರಫ್ ಕೊಳ್ಳೆಜಾಲ್, ಶರೀಫ್ ಫೈಝಿ ಪನ್ಯ, ಪುತ್ತುಮೋನು ಅನ್ನಡ್ಕ ಉಪಸ್ಥಿತರಿದ್ದರು.
ಅಶ್ರಫ್ ಶೇಡಿಗುಂಡಿ ಸ್ವಾಗತಿಸಿದರು. ಪಿ.ಎಂ.ಯಹ್ಯಾ ಮುಸ್ಲಿಯಾರ್ ವಂದಿಸಿದರು. ಪಿ.ಎ.ಮರ್ಧಾಳ ಕಾರ್ಯಕ್ರಮ ನಿರೂಪಿಸಿದರು.





