ಡಬ್ಲುಟಿಒ ನಿಯಮ ಉಲ್ಲಂಘನ: ಅಮೆರಿಕದ ವಿರುದ್ಧ ಶೀಘ್ರವೇ ಮೊಕದ್ದಮೆ

ಪುಣೆ, ಎ.10: ಸ್ವಚ್ಛ ಇಂಧನದ ಬಗ್ಗೆ ‘ಭಾರೀ ಮಾತನಾಡಿ, ಏನನ್ನೂ ಮಾಡದಿರುವ’ ಅಮೆರಿಕ ಸಹಿತ ಅಭಿವೃದ್ಧಿ ಹೊಂದಿದ ದೇಶಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಪೀಯೂಷ್ ಗೋಯಲ್, ವಿಶ್ವ ವ್ಯಾಪಾರ ಸಂಘಟನೆಯ ನಿಯಮಗಳನ್ನು ಉಲ್ಲಂಘಿಸಿ ಸೌರ ಫಲಕ ಉತ್ಪಾದಕರಿಗೆ ರಕ್ಷಣೆ ನೀಡುತ್ತಿರುವುದಕ್ಕಾಗಿ ತಾನು ಶೀಘ್ರವೇ ಅಮೆರಿಕದ ವಿರುದ್ಧ 16 ಪ್ರಕರಣಗಳನ್ನು ದಾಖಲಿಸಲಿದ್ದೇನೆಂದು ತಿಳಿಸಿದ್ದಾರೆ.
ಭಾರತವು ಅನುಕೂಲಕರ ಕ್ರಮವನ್ನು ಕೈಗೊಳ್ಳುತ್ತಿರುವಾಗ, ಅಮೆರಿಕವು ಅನನುಕೂಲಕರ ಸತ್ಯವನ್ನು ಹೇಳುತ್ತಿದೆ. ಅದು ಭಾರತಕ್ಕಿಂತ ತಲಾ 7 ಪಟ್ಟು ಹೆಚ್ಚು ಕಲ್ಲಿದ್ದಲು ಬಳಸುತ್ತಿದೆ.
ಸ್ವಚ್ಛ ಇಂಧನಕ್ಕೆ ನಿಧಿಯೊದಗಿಸುವ ಕುರಿತಾಗಿಯೂ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ಬಹಳಷ್ಟು ಮಾತನಾಡಿದೆ. ಆದರೆ, ಏನ್ನನ್ನೂ ಮಾಡಿಲ್ಲವೆಂದು ವಿದ್ಯುತ್, ಕಲಿದ್ದಲು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಹಾಯಕ ಸಚಿವರು ಆರೋಪಿಸಿದ್ದಾರೆ.
ಅವರು, ಪುಣೆ ಅಂತಾರಾಷ್ಟ್ರೀಯ ಕೇಂದ್ರದ ಆತಿಥೇಯತ್ವದಲ್ಲಿ ನಡೆದ ‘ಜಾಗತಿಕ ಸೌರ ಶಕ್ತಿ ಮೈತ್ರಿಕೂಟಕ್ಕೆ ಆಕಾರ ನೀಡುವಲ್ಲಿ ಭಾರತದ ಪ್ರಯತ್ನ’ ಎಂಬ ಕುರಿತಾದ ಉಪನ್ಯಾಸವೊಂದರ ವೇಳೆ ಮಾತನಾಡುತ್ತಿದ್ದರು.
ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟವನ್ನು ಹವಾಮಾನ ಬದಲಾವಣೆಯ ಸಮಸ್ಯೆಯ ಬಗ್ಗೆ ಭಾರತದ ಕಳವಳದ ಪ್ರದರ್ಶನವೆಂದು ವ್ಯಾಖ್ಯಾನಿಸಿದ ಗೋಯಲ್, ಸಂರಕ್ಷಣೆಯ ಪಾರಂಪರಿಕ ಸಿದ್ಧಾಂತಗಳು ಭಾರತವನ್ನು ಹವಾಮಾನ ಬದಲಾವಣೆಯ ಕ್ಷೇತ್ರದಲ್ಲಿ ವಿಶ್ವದ ಪ್ರಯತ್ನಗಳ ನಾಯಕತ್ವ ವಹಿಸುವ ದೇಶಕ್ಕಾಗಿ ಮಾಡಿವೆ ಎಂದರು.
ಹವಾಮಾನದ ಸವಾಲುಗಳನ್ನು ಎದುರಿಸುವ ಜಾಗತಿಕ ಪ್ರಯತ್ನಗಳ ನಾಯಕತ್ವ ವಹಿಸುವ ಸಾಮರ್ಥ್ಯ ಭಾರತಕ್ಕಿದೆ. ಅದು ಪ್ರಪಂಚವನ್ನು ವಾಸಯೋಗ್ಯವನ್ನಾಗಿ ಮಾಡಲು ಸೌರ ಹಾಗೂ ಇತರ ನವೀಕರಿಸಬಹುದಾದ ಇಂಧನಗಳ ಬಳಕೆಯ ಮುಂಚೂಣಿಯಲ್ಲಿ ಉಳಿಯಲಿದೆಯೆಂದು ಅವರು ಹೇಳಿದರು.
ಅಮೆರಿಕದ ವಿವಿಧ ರಾಜ್ಯಗಳಲ್ಲಿ 16 ಕಾರ್ಯಕ್ರಮಗಳಿವೆ. ಅಲ್ಲಿ ಅಮೆರಿಕ ವಿಶ್ವ ವ್ಯಾಪಾರ ಸಂಘಟನೆಯ ನಿಯಮಗಳ ಉನ್ನುಲ್ಲಂಘಿಸಿ ಸೌರ ವಿದ್ಯುತ್ ಫಲಕ ಉತ್ಪಾದಕರಿಗೆ ರಕ್ಷಣೆ ನೀಡುತಿದೆ. ಇದಕ್ಕಾಗಿ ತಾನು ಅಮೆರಿಕದ ವಿರುದ್ಧ 16 ಪ್ರಕರಣಗಳನ್ನು ದಾಖಲಿಸಲಿದ್ದೇನೆಂದು ಗೋಯಲ್ ತಿಳಿಸಿದರು.







