ವಿಶ್ವಸಂಸ್ಥೆ: ಈ ಬಾರಿ ಮಹಾಕಾರ್ಯದರ್ಶಿ ಅಭ್ಯರ್ಥಿಗಳಿಂದ ಪ್ರಾತ್ಯಕ್ಷಿಕೆ
ವಿಶ್ವಸಂಸ್ಥೆ, ಎ. 10: ವಿಶ್ವಸಂಸ್ಥೆಯ 70 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ, ಮಹಾಕಾರ್ಯದರ್ಶಿ ಹುದ್ದೆಯ ಆಕಾಂಕ್ಷಿಗಳು ಜಗತ್ತಿನ ಸರಕಾರಗಳ ಮುಂದೆ ತಮ್ಮ ಅರ್ಹತೆಯನ್ನು ಸಾಬೀತುಪಡಿಸುವ ಪ್ರಾತ್ಯಕ್ಷಿಕೆ ನೀಡಬೇಕಾಗುತ್ತದೆ. ಇಂಥ ಪ್ರಾತ್ಯಕ್ಷಿಕೆಗಳು ಮುಂದಿನ ವಾರದಿಂದ ಆರಂಭಗೊಳ್ಳುತ್ತವೆ.
ವಿಶ್ವಸಂಸ್ಥೆಯ ಉನ್ನತ ಹುದ್ದೆಯ ಮೇಲೆ ಕಣ್ಣಿಟ್ಟಿರುವ ನಾಲ್ವರು ಪುರುಷರು ಮತ್ತು ನಾಲ್ವರು ಮಹಿಳೆಯರು ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಎರಡು ಗಂಟೆಗಳ ಕಾಲ ತಮ್ಮ ಮುನ್ನೋಟದ ಬಗ್ಗೆ ವಿವರಣೆಗಳನ್ನು ನೀಡುತ್ತಾರೆ ಹಾಗೂ ಸದಸ್ಯ ದೇಶಗಳು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.
ಬಾನ್ ಕಿ ಮೂನ್‌ರ ಉತ್ತರಾಧಿಕಾರಿಯ ಆಯ್ಕೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಈ ಅಭೂತಪೂರ್ವ ಉಪಕ್ರಮವನ್ನು ತೆಗೆದುಕೊಳ್ಳಲಾಗಿದೆ.
ನೂತನ ಮಹಾಕಾರ್ಯದರ್ಶಿ 2017ರ ಜನವರಿ 1ರಂದು ಅಧಿಕಾರಕ್ಕೇರುತ್ತಾರೆ.
Next Story





