Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಅಬುಲ್ ಕಲಾಂ ಆಝಾದ್‌ರಂತಹವರು...

ಅಬುಲ್ ಕಲಾಂ ಆಝಾದ್‌ರಂತಹವರು ಕೊನೆಯುಸಿರೆಳೆಯುವ ಮುನ್ನ ‘ಭಾರತ್ ಮಾತಾ ಕಿ ಜೈ’ ಎಂದು ಹೇಳಿ ಪ್ರಾಣ ಬಿಟ್ಟಿದ್ದಾರೆ

ವಾರ್ತಾಭಾರತಿವಾರ್ತಾಭಾರತಿ10 April 2016 11:47 PM IST
share
ಅಬುಲ್ ಕಲಾಂ ಆಝಾದ್‌ರಂತಹವರು ಕೊನೆಯುಸಿರೆಳೆಯುವ ಮುನ್ನ ‘ಭಾರತ್ ಮಾತಾ ಕಿ ಜೈ’ ಎಂದು ಹೇಳಿ ಪ್ರಾಣ ಬಿಟ್ಟಿದ್ದಾರೆ

ಅಬುಲ್ ಕಲಾಂ ಆಝಾದ್‌ರಂತಹವರು ಕೊನೆಯುಸಿರೆಳೆಯುವ ಮುನ್ನ ‘ಭಾರತ್ ಮಾತಾ ಕಿ ಜೈ’ ಎಂದು ಹೇಳಿ ಪ್ರಾಣ ಬಿಟ್ಟಿದ್ದಾರೆ 

- ರವಿಶಂಕರ್ ಪ್ರಸಾದ್, ಕೇಂದ್ರ ಸಚಿವ

ನಿಮ್ಮ ಕಿವಿಗೆ ಅದು ಕೇಳಿಸಬೇಕಾದರೆ, ಹಿಂದಿನಿಂದ ನೀವು ಅವರ ಕುತ್ತಿಗೆಗೆ ಚಾಕು ಹಿಡಿದು ನಿಂತಿದ್ದಿರೇ ಎಂದು ಭಾವಿಸಬೇಕಾಗುತ್ತದೆ.

 ---------------------

‘ಭಾರತ್ ಮಾತಾ ಕಿ ಜೈ’ ಎನ್ನದವರಿಗೆ ಈ ದೇಶದಲ್ಲಿರುವ ಹಕ್ಕಿಲ್ಲ

- ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಮುಖ್ಯಮಂತ್ರಿ

ನಾವೆಲ್ಲ ಇಂಡಿಯಾಕ್ಕೆ ವಲಸೆ ಹೋಗಬೇಕೆಂದಿದ್ದೇವೆ. 

---------------------

ಭಯೋತ್ಪಾದನೆ ಮಾನವೀಯತೆಯ ಶತ್ರು 

- ನರೇಂದ್ರ ಮೋದಿ, ಪ್ರಧಾನಿ

ಮಾನವ ಹಕ್ಕು ಆಯೋಗದ ಮೇಲೆ ನಿಮಗಿರುವ ದ್ವೇಷದ ಕಾರಣ ಗೊತ್ತಾಯಿತು.

 ---------------------

ಬಂಡಾಯ ಧೋರಣೆಯ ಕವಿತೆಗಳು ರಚನೆಯಾಗುತ್ತಿರುವುದು ಉತ್ತಮ ಬೆಳವಣಿಗೆ

 - ಡಾ.ಸಿದ್ದಲಿಂಗಯ್ಯ, ಹಿರಿಯ ಕವಿ

ಸಿದ್ದಲಿಂಗಯ್ಯ ವಿರುದ್ಧವೇ ದಲಿತರು ಬಂಡಾಯ ಕವಿತೆ ರಚಿಸುತ್ತಿರುವುದು ಕಾವ್ಯ ಲೋಕದ ಹೊಸ ಪ್ರಕಾರವಂತೆ.

 ---------------------

ಭ್ರಷ್ಟಾಚಾರ ನಿಗ್ರಹ ದಳ ವಿಚಾರದಲ್ಲಿ ಬಿಜೆಪಿಯವರಿಗೆ ಹೋರಾಟ ಮಾಡಲು ನೈತಿಕತೆಯಿಲ್ಲ 

- ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ಆ ದಳಕ್ಕೆ ಜಾತ್ಯತೀತ ಎಂಬ ಹೆಸರು ಸೇರಿದರೆ ನಿಮ್ಮ ಒಪ್ಪಿಗೆ ಇದೆಯೇ?

---------------------

ನಾನು ಕಾನೂನನ್ನು ಗೌರವಿಸುತ್ತೇನೆ. ಇಲ್ಲದಿದ್ದರೆ ‘ಭಾರತ್ ಮಾತಾ ಕಿ ಜೈ’ ಕೂಗಲು ಒಲ್ಲದವರ ತಲೆ ಕಡಿಯುತ್ತಿದ್ದೆ 

- ಬಾಬಾ ರಾಮ್‌ದೇವ್, ಯೋಗ ಗುರು

ಕಾನೂನನ್ನು ಗೌರವಿಸುವವರು ಚೂಡಿದಾರ ಧರಿಸಿ, ಮಹಿಳೆಯರ ಮಧ್ಯೆ ಅವಿತದ್ದು ದೇಶ ಮರೆತಿಲ್ಲ.

---------------------

ಕೇರಳದಲ್ಲಿ ತಾವರೆ ಅರಳಲಿದೆ 

- ಕೃಷ್ಣ ಜೆ.ಪಾಲೆಮಾರ್, ಮಾಜಿ ಸಚಿವ

ಕರ್ನಾಟಕದಲ್ಲಿ ತಾವರೆಯನ್ನು ಮುದುಡಿಸಿದವರ ಮಾತುಗಳನ್ನು ನಂಬುವುದು ಹೇಗೇ?

---------------------

ಕರ್ನಾಟಕ ಗುಜರಾತ್ ಅಲ್ಲ 

- ವೈ.ಎಸ್.ವಿ.ದತ್ತ, ಶಾಸಕ

     ಆ ಬಗ್ಗೆ ನಿಮಗೆ ವಿಷಾದವಿದೆಯೇ?

---------------------

     ಪ್ರಪಂಚ ಕೊಂಡಾಡುವುದು ಹೋರಾಟಗಾರರನ್ನೇ ಹೊರತು ಪಲಾಯನವಾದಿಗಳನ್ನಲ್ಲ

- ಹೇಮಾ ಮಾಲಿನಿ, ಬಾಲಿವುಡ್ ನಟಿ

     ಯಾವ ಸಿನೆಮಾದ ಸಂಭಾಷಣೆ ಇದು?

---------------------

ಮೋದಿ ಭಾರತ ಮಾತೆಯ ಬೆನ್ನಿಗೆ ಚೂರಿ ಇರಿದಿದ್ದಾರೆ 

- ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ

ಪರವಾಗಿಲ್ಲ, ನೀವು ಹೊಟ್ಟೆಗೆ ಇರಿಯಿರಿ. 

---------------------

ವಿಜ್ಞಾನ, ತಂತ್ರಜ್ಞಾನ ವಿದೇಶದ್ದಲ್ಲ

- ಡಾ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ

ಎಲ್ಲ, ತಮ್ಮ ಎಸ್‌ಡಿಎಂ ಕಾಲೇಜಿನದ್ದು ಎಂದು ಪೇಟೆಂಟ್ ತೆಗೆದುಕೊಳ್ಳುವ ಯೋಚನೆಯೇ?

---------------------

ಕಳ್ಳನ ಕೈಗೆ ಕೀಲಿ ಕೊಡುವ ಕೆಲಸ ಸಿದ್ದರಾಮಯ್ಯ ಸರಕಾರ ಮಾಡುತ್ತಿದೆ 

- ಪ್ರಹ್ಲಾದ್ ಜೋಷಿ, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ

ಯಡಿಯೂರಪ್ಪನ ಕೈಗೆ ಕೀಲಿ ಕೈ ಕೊಟ್ಟಿರುವುದರ ಬಗ್ಗೆ ಸಿದ್ದರಾಮಯ್ಯ ಕೂಡ ಇದನ್ನೇ ಹೇಳುತ್ತಿದ್ದಾರೆ.

---------------------

ಪಠಾಣ್‌ಕೋಟ್ ದಾಳಿ ಭಾರತದ ನಾಟಕ

 - ಪಾಕಿಸ್ತಾನ್ ಟುಡೆ, ಪಾಕ್ ಪತ್ರಿಕೆ

ಆ ನಾಟಕದಲ್ಲಿ ತಮ್ಮ ಪಾತ್ರ ಏನಿತ್ತು ಎನ್ನುವುದಾದರೂ ತಿಳಿಸಿ. 

---------------------

ಎಸಿಬಿ ಎಂದರೆ ಕೋಳಿ ಫಾರಂಗೆ ತೋಳವೇ ಮೇನೆಜರ್ ಆದಂತೆ

 - ಎಸ್.ಆರ್.ಹಿರೇಮಠ್, ಸಾಮಾಜಿಕ ಹೋರಾಟಗಾರ

ನೀವು ಇಚ್ಛೆಪಟ್ಟರೆ, ನರಿಗಳನ್ನು ಮೇನೆಜರ್ ಮಾಡಲು ನಾವು ಸಿದ್ಧ ಎಂದರಂತೆ ಸಿದ್ದರಾಮಯ್ಯ.

---------------------

ಸಚಿವ ಸ್ಥಾನ ನಮ್ಮ ಕುಟುಂಬದ ಆಸ್ತಿಯಲ್ಲ

- ಯು.ಟಿ.ಖಾದರ್, ಆರೋಗ್ಯ ಸಚಿವ

     ತಮ್ಮ ಕುಟುಂಬದ ಆಸ್ತಿಯೇನು ಎನ್ನುವುದನ್ನಾದರೂ ಘೋಷಿಸಬಹುದಲ್ಲ?

---------------------

     25 ವರ್ಷಗಳಲ್ಲಿ ಬಿಜೆಪಿ ಎಲ್ಲಾ ಚುನಾವಣೆಗಳನ್ನೂ ಗೆಲ್ಲಬೇಕು

- ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಚುನಾವಣೆಗಳನ್ನೇ ನಡೆಸದೇ ಇರುವುದು ಅದಕ್ಕಿರುವ ಒಂದೇ ಮಾರ್ಗ. 

--------------------

     ಕೇಜ್ರಿವಾಲ್ ಪ್ರಧಾನಿ ಮೋದಿಯನ್ನು ಐಎಸ್‌ಐ ಏಜೆಂಟ್ ಎಂದು ಕರೆದದ್ದು ಖಂಡನೀಯ

- ರವಿಶಂಕರ್ ಪ್ರಸಾದ್, ಕೇಂದ್ರ ಸಚಿವ

     ಆರೆಸ್ಸೆಸ್ ಏಜೆಂಟ್ ಎನ್ನುವುದಷ್ಟೇ ಅವರಿಗೆ ಶೋಭಿಸುತ್ತದೆ ಎನ್ನುತ್ತೀರಾ?

---------------------

     ಗುಜರಾತ್ ಮಾದರಿಯಲ್ಲಿ ಎಸಿಬಿ ರಚನೆ ಮಾಡಲಾಗಿದೆ

- ರಮಾನಾಥ ರೈ, ಸಚಿವ

     ನಿಮಗೆ ಗುಜರಾತ್ ರಾಜ್ಯ ಮಾದರಿಯೆ?

---------------------   

 ಈ ಪ್ರಪಂಚದ ಎಲ್ಲ ಪುರುಷರು-ಮಹಿಳೆಯರು ಕೆಟ್ಟವರು-ಒಳ್ಳೆಯವರು ಅಲ್ಲ

- ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ

ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎನ್ನುವುದನ್ನು ಪರೀಕ್ಷಿಸುವುದಕ್ಕೋಸ್ಕರ ರುಚಿ ನೋಡಿದ್ದೆಂದು ಕಾಣುತ್ತದೆ.

 ---------------------

ಹಸುಗಳನ್ನು ಸಾಕುತ್ತಿರುವ ಮನೆಗಳಿಗೆ ಹೆಣ್ಣು ಕೊಡದಿರುವ ಸಂಸ್ಕೃತಿ ಬೆಳೆಯುತ್ತಿದೆ

- ಡಾ.ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿ, ಧರ್ಮಸ್ಥಳ

ಬದುಕು ಹಸುವಿಗಿಂತ ಕಡೆಯಾಗಿ ಹೋಗಬಾರದಲ್ಲ, ಅದಕ್ಕೆ. 

--------------------

ಪಾಕಿಸ್ತಾನ ರಚನೆಯಲ್ಲಿ ಆರೆಸ್ಸೆಸ್ ಕೈವಾಡ ಇದೆ

- ಜಿ.ಕೆ.ಗೋವಿಂದರಾವ್, ಸಾಹಿತಿ

ಆರೆಸ್ಸೆಸ್ ರಚನೆಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎನ್ನುವುದು ಭಾರತೀಯರ ಅನುಮಾನ. 

---------------------

*ಸಾವಿಲ್ಲದ ಮನೆಯಿಲ್ಲ, ಭ್ರಷ್ಟಾಚಾರವಿಲ್ಲದ ಸಂಸ್ಥೆ ಇಲ್ಲ

- ಸಂತೋಷ್ ಹೆಗ್ಡೆ, ನಿವೃತ್ತ ನ್ಯಾಯಮೂರ್ತಿ

ಅಪರಾಧಿಗಳಿರುವ ಜೈಲಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X