ವಿಪತ್ತು ಸನ್ನದ್ಧತೆಯ ಪುನರ್‌ಪರಿಶೀಲನೆಗೆ ನಿರ್ಧಾರ
ತೃಶ್ಶೂರು,ಎ.10: ಕೊಲ್ಲಂನ ಪರವೂರು ದೇವಸ್ಥಾನದಲ್ಲಿ ಸಂಭವಿಸಿರುವ ಭಾರೀ ದುರಂತ ಅಪಘಾತವಲ್ಲ, ಅಪರಾಧ ಎನ್ನುವುದು ಸ್ಥಳೀಯರೆಲ್ಲರ ಒಮ್ಮತದ ಅಭಿಪ್ರಾಯವಾಗಿದೆ. ವ್ಯಾಪಕ ವಿರೋಧದ ನಡುವೆಯೇ ಸಿಡಿಮದ್ದು ಪ್ರದರ್ಶನ ನಡೆಸಿದ್ದು ಸಂಘಟಕರು ಯಾವ ಸುರಕ್ಷತೆಯೂ ಇಲ್ಲದೆ ಈ ಪ್ರದರ್ಶನವನ್ನು ಹಮ್ಮಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಧಾರ್ಮಿಕ ಸಮಾವೇಶಗಳಲ್ಲಿ ಸುರಕ್ಷತೆಗಾಗಿ ಮಾರ್ಗಸೂಚಿಗಳ ನ್ನೊಳಗೊಂಡಿರುವ ಎಸ್‌ಒಪಿಯನ್ನು ಅಕ್ಷರಶಃ ಪಾಲಿಸಿದ್ದರೆ ಅವಘಡದ ತೀವ್ರತೆಯನ್ನು ಗಣನೀಯವಾಗಿ ತಗ್ಗಿಸಬಹುದಿತ್ತು ಎಂದು ಎಸ್‌ಒಪಿ ರಚನಾ ತಂಡದ ಮುಖ್ಯಸ್ಥ ಫೈಝಲ್ ಟಿ.ಇಲ್ಯಾಸ್ ತಿಳಿಸಿದರು.
ಸಿಡಿಮದ್ದುಗಳನ್ನು ಸುಡುವ ಸ್ಥಳ ಮತ್ತು ಜನರು ನಿಲ್ಲುವ ತಾಣದ ಮಧ್ಯೆ ಕನಿಷ್ಠ 100 ಮೀ.ಗಳ ಅಂತರವಿರಬೇಕು, ಆದರೆ ಕೊಲ್ಲಮ್‌ನಲ್ಲಿ ಈ ಅಂತರ 50 ಮೀ.ಗೂ ಕಡಿಮೆಯಿತ್ತು ಎಂದರು. ಸಿಡಿಮದ್ದು ಪ್ರದರ್ಶನಕ್ಕೆ ಕನಿಷ್ಠ ಏಳು ದಿನಗಳ ಮೊದಲು ಅನುಮತಿಯನ್ನು ಪಡೆದುಕೊಳ್ಳಬೇಕಾಗಿದೆ.
Next Story





