ತೆಂಡುಲ್ಕರ್-ಕೊಹ್ಲಿ ಹೋಲಿಕೆ ತಪ್ಪು: ಕಪಿಲ್‌ದೇವ್
ಕೋಲ್ಕತಾ, 10: ‘‘ಸಚಿನ್ ತೆಂಡುಲ್ಕರ್ ಹಾಗೂ ವಿರಾಟ್ ಕೊಹ್ಲಿ ಅವರನ್ನು ಯಾವಾಗಲೂ ಪರಸ್ಪರ ಹೋಲಿಕೆ ಮಾಡುವುದು ಸರಿಯಲ್ಲ’’ಎಂದು ಭಾರತದ ಮಾಜಿ ನಾಯಕ ಕಪಿಲ್‌ದೇವ್ ಅಭಿಪ್ರಾಯಪಟ್ಟಿದ್ದಾರೆ.
‘‘ಇಂತಹ ಹೋಲಿಕೆಯ ಅಗತ್ಯವಾದರೂ ಏನಿದೆ? ಸಚಿನ್ ಕ್ರಿಕೆಟ್‌ನ ದಂತಕತೆ. ವಿರಾಟ್ ಕೊಹ್ಲಿ ವೃತ್ತಿಜೀವನದ ಆರಂಭಿಕ ಹಂತದಲ್ಲಿದ್ದಾರೆ. ನನ್ನ ಪ್ರಕಾರ ಈ ಇಬ್ಬರು ಆಟಗಾರರನ್ನು ಹೋಲಿಕೆ ಮಾಡುವುದು ತಪ್ಪು’’ ಎಂದು ಕಪಿಲ್ ಹೇಳಿದ್ದಾರೆ.
‘‘ಟೀಮ್ ಇಂಡಿಯಾಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡುವುದು ಐವರು ಆಯ್ಕೆಗಾರರಿಗೆ ಬಿಟ್ಟ ವಿಚಾರ. ತಂಡದಲ್ಲಿ ನಾಯಕನನ್ನು ಬದಲಿಸಬೇಕು ಎಂದು ಆಯ್ಕೆಗಾರರು ಬಯಸಿದರೆ ಹಾಗೇ ಮಾಡುತ್ತಾರೆ. ನಾಯಕನಾಗಿ ಧೋನಿ ಭಾರತಕ್ಕೆ ಹಲವು ಬಾರಿ ಯಶಸ್ಸು ತಂದುಕೊಟ್ಟಿದ್ದಾರೆ. ಇತ್ತೀಚೆಗೆ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತದ ಪ್ರದರ್ಶನ ಉತ್ತಮವಾಗಿತ್ತು. ಇತರ ತಂಡಗಳು ಉತ್ತಮ ಪ್ರದರ್ಶನ ನೀಡಿದರೆ, ಆ ತಂಡಕ್ಕೆ ನಾವು ಗೌರವ ನೀಡಬೇಕಾಗುತ್ತದೆ’’ಎಂದು ಕಪಿಲ್ ತಿಳಿಸಿದರು.
Next Story





