Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಮನುಷ್ಯರ ಕ್ರೌರ್ಯಗಳಿಗೆ ಪಟಾಕಿಗಳು...

ಮನುಷ್ಯರ ಕ್ರೌರ್ಯಗಳಿಗೆ ಪಟಾಕಿಗಳು ಹೊಣೆಯೇ?

ವಾರ್ತಾಭಾರತಿವಾರ್ತಾಭಾರತಿ10 April 2016 11:52 PM IST
share

ಮಾನಸಿಕ ನೆಮ್ಮದಿಯನ್ನು ಅರಸುತ್ತಾ ಜನಸಾಮಾನ್ಯರು ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಸಾಗುತ್ತಾರೆ. ತಮ್ಮ ನೋವು ಸಂಕಟಗಳನ್ನು ವ್ಯಕ್ತಪಡಿಸಿ, ಮಾನಸಿಕವಾಗಿ ಹೊಸ ಚೈತನ್ಯವನ್ನು ಪಡೆದುಕೊಳ್ಳುವುದು ಅವರ ಗುರಿಯಾಗಿರುತ್ತದೆ. ಆದರೆ ಶರಣಾಗಿ ಬಂದ ಭಕ್ತರ ಅಳಿದುಳಿದ ಸಂತೋಷವನ್ನು ಶ್ರದ್ಧಾಕೇಂದ್ರಗಳು ಆಪೋಷಣ ತೆಗೆದುಕೊಂಡರೆ ಅದಕ್ಕೆ ಯಾರು ಹೊಣೆ? ಶ್ರದ್ಧಾ ಕೇಂದ್ರದ ಮುಖಂಡರು ಅದರ ಸಂಪೂರ್ಣ ಹೊಣೆಯನ್ನು ದೇವರ ತಲೆಯ ಮೇಲೆ ಹಾಕಿ ಪಾರಾಗಲು ಹವಣಿಸಬಹುದು. ಆದರೆ ಒಂದಿಷ್ಟು ಬುದ್ಧಿ, ವಿವೇಕ ಇದ್ದರೆ ತಪ್ಪಿಸಬಹುದಾದ ದುರಂತಗಳು, ಸಂಘಟಕರ ಬೇಜವಾಬ್ದಾರಿ, ಸ್ವಾರ್ಥ ಮೊದಲಾದ ಕಾರಣಗಳಿಂದ ಇಂದು ಭಕ್ತರ ಪ್ರಾಣ ಹರಣಕ್ಕೆ ಕಾರಣವಾಗುತ್ತಿದೆ. ಕೇರಳದ ಕೊಲ್ಲಂನಲ್ಲಿ ನಡೆದಿರುವುದನ್ನು ಈ ಕಾರಣಕ್ಕಾಗಿಯೇ ನಾವು ಅಪಘಾತ, ದುರಂತ ಎಂದು ಕರೆಯದೇ ಮಹಾಪರಾಧ ಎಂದು ಕರೆಯಬೇಕಾಗುತ್ತದೆ.ಕೊಲ್ಲಂ ಜಿಲ್ಲೆಯ ಪರವೂರ್ ಪುಟ್ಟಿಂಗಲ್ ದೇವಿ ದೇವಸ್ಥಾನದಲ್ಲಿ ಭೀಕರ ಅಗ್ನಿ ಕಾಂಡ ನೂರಾರು ಅಮಾಯಕರನ್ನು ಆಹುತಿತೆಗೆದುಕೊಂಡಿದೆ. ಈ ಬೆಂಕಿ ಆಕಸ್ಮಿಕವಾಗಿ ಹುಟ್ಟಿಕೊಂಡಿ ದ್ದಂತೂ ಅಲ್ಲ. ಬೃಹತ್ ಪ್ರಮಾಣದ ಪಟಾಕಿ ಪ್ರದರ್ಶನವೇ ಈ ದುರಂತಕ್ಕೆ ಕಾರಣ. ಆದರೆ ಈ ಪಟಾಕಿ ಪ್ರದರ್ಶನದ ಬಗ್ಗೆ ಸ್ಥಳೀಯರು ಮೊದಲೇ ಆಕ್ಷೇಪ ವ್ಯಕ್ತಡಿಸಿದ್ದರು. ಇದು ಭಾರೀ ಅಪಾಯವನ್ನು ತಂದೊಡ್ಡಬಹುದು ಎಂಬ ಭಯ ಅವರಿಗಿತ್ತು. ಇದನ್ನು ಅವರು ದೇವಸ್ಥಾನದ ಆಡಳಿತ ಸಮಿತಿಗೂ ಜಿಲ್ಲಾಡಳಿತಕ್ಕೂ ವ್ಯಕ್ತಪಡಿಸಿದ್ದರು. ವಿಪರ್ಯಾಸವೆಂದರೆ ದೂರು ನೀಡಿದ ಜನರನ್ನೇ ಸಂಘಟಕರು ಬೆದರಿಸಿರುವ ಕುರಿತಂತೆ ಮಾಹಿತಿಗಳು ಬರುತ್ತಿವೆ. ದೂರು ನೀಡಿದ್ದಕ್ಕಾಗಿ ಅವರನ್ನು ಕೊಲೆ ಮಾಡುವ ಬೆದರಿಕೆಯನ್ನೂ ಹಾಕಲಾಗಿತ್ತಂತೆ. ಕೊನೆಗೂ ದೂರು ನೀಡಿದವರ ಆತಂಕ ನಿಜವಾಗಿದೆ. ಪಟಾಕಿ ಪ್ರದರ್ಶನ ನೂರಾರು ಜನರ ಪ್ರಾಣವನ್ನು ಬಲಿತೆಗೆದುಕೊಂಡಿದೆ. ಮುನ್ನೂರಕ್ಕೂ ಅಧಿಕ ಜನ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಒದ್ದಾಡುತ್ತಿದ್ದಾರೆ.

ದೇವಸ್ಥಾನದ ವಠಾರದ ಗೋದಾಮಿನಲ್ಲಿ ಬೃಹತ್ ಪ್ರಮಾಣದಲ್ಲಿ ಭಾರೀ ಸ್ಫೋಟಕಗಳು ಸಂಗ್ರಹಿಸಿರುವುದು ಮತ್ತು ಸಿಡಿಮದ್ದಿನ ಕಿಡಿಯೊಂದು ಆ ಗೋದಾಮಿಗೆ ಬಿದ್ದಿರುವುದು ಈ ಪ್ರಮಾಣದ ಸಾವು ನೋವುಗಳಿಗೆ ಕಾರಣ. ಸಾಧಾರಣವಾಗಿ ದೇವಸ್ಥಾನ, ಭಕ್ತಿ, ಆರಾಧನೆ ಇವುಗಳ ನಡುವೆ ಪಟಾಕಿಗಳ ಸಂಬಂಧವನ್ನು ಜೋಡಿಸಿದವರು ಖಂಡಿತವಾಗಿ ಧಾರ್ಮಿಕ ವ್ಯಕ್ತಿಗಳಂತೂ ಅಲ್ಲ. ಜಾತ್ರೆ, ಸಮಾರಂಭವನ್ನು ಅದ್ದೂರಿಗೊಳಿಸುವ, ವೈಭವಗೊಳಿಸುವ ಭಾಗವಾಗಿ ಪಟಾಕಿಯನ್ನು ಸಿಡಿಸಲಾಗುತ್ತದೆಯೇ ಹೊರತು, ಅದು ಖಂಡಿತ ಧಾರ್ಮಿಕತೆಯ ಭಾಗವಲ್ಲ. ವೈದಿಕ ಸಂಸ್ಕೃತಿಯಲ್ಲಿ ದೇವರಿಗೆ ದೀಪ ಹಚ್ಚುವುದು, ಗಂಟೆ ಬಾರಿಸುವುದು, ಜಾಗಟೆ ಬಾರಿಸುವುದೆಲ್ಲವೂ ಆರಾಧನಾ ಕ್ರಮದ ಪ್ರಧಾನ ಅಂಶಗಳಾಗಿವೆ. ಆದರೆ ಜನಸಾಮಾನ್ಯರಿಗೆ ಜೀವಾಪಾಯವನ್ನು ಉಂಟು ಮಾಡುವ, ಕೋಟಿಗಟ್ಟಳೆ ಹಣವನ್ನು ಕೆಲವೇ ಕ್ಷಣಗಳಲ್ಲಿ ಬೂದಿ ಮಾಡುವ, ಯಾವ ರೀತಿಯಲ್ಲೂ ಬೆಳಕಿನ ಜೊತೆಗೆ ಸಂಬಂಧ ವಿಲ್ಲದ ಪಟಾಕಿಗಳ ಹಿಂದೆ ಕಾಣದ ಅಕ್ರಮ ಕೈಗಳಿವೆ. ಆ ಕೈಗಳಿಗೂ ಧಾರ್ಮಿಕತೆಗೂ ಯಾವ ಸಂಬಂಧವೂ ಇಲ್ಲ. ಜನಸಾಮಾನ್ಯರ ಬದುಕಿಗೆ ಅಪಾಯ ಒದಗಬಹುದೆಂಬ ಸೂಚನೆಯಿದ್ದೂ, ಇಂತಹದೊಂದು ಸ್ಫೋಟಕ ಪ್ರದರ್ಶನಗಳನ್ನು ಏರ್ಪಡಿಸಿದವರು ಮನುಷ್ಯ ವರ್ಗಕ್ಕೆ ಸೇರಿದವರು ಎಂದು ನಂಬುವುದು ಕಷ್ಟವಾಗುತ್ತದೆ. ಇದೇ ಸಂದರ್ಭದಲ್ಲಿ ಈ ಸ್ಫೋಟಕ ಪ್ರದರ್ಶನಗಳನ್ನು ತಡೆಯುವಲ್ಲಿ ವಿಫಲವಾಗಿರುವ ಜಿಲ್ಲಾಡಳಿತವೂ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಒಟ್ಟಿನಲ್ಲಿ ದೇವರು ಇಲ್ಲಿ ನೆಪವಷ್ಟೇ. ಮನುಷ್ಯ ತನ್ನೊಳಗಿನ ಧಾರ್ಮಿಕತೆಯನ್ನು ಕಳೆದುಕೊಂಡಾಗ, ಅಲ್ಲಿ ಸ್ವಾರ್ಥ, ಅವಿವೇಕ ವಿಜೃಂಭಿಸಿದಾಗ ಇಂತಹ ದುರಂತಗಳು ಸಂಭವಿಸಲು ಸಾಧ್ಯ. ದೀಪಾವಳಿಯ ಸಂದರ್ಭದಲ್ಲಿ ಮನೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಪಟಾಕಿಗಳನ್ನು ಸಿಡಿಸುವುದರ ಬಗ್ಗೆಯೇ ಸಮಾಜದಲ್ಲಿ ಪ್ರಶ್ನೆಗಳಿವೆ. ಪ್ರತಿ ದೀಪಾವಳಿಗಳು ಪಟಾಕಿಗಳ ಮೂಲಕ ನೂರಾರು ಮಕ್ಕಳ ಕಣ್ಣುಗಳನ್ನು ಕುರುಡಾಗಿಸಿ, ಅವರನ್ನು ಶಾಶ್ವತವಾಗಿ ಕತ್ತಲಲ್ಲಿಟ್ಟು ಹೊರಟು ಹೋಗುತ್ತದೆ. ದೀಪಾವಳಿಯ ಸಂದರ್ಭದಲ್ಲಿ ಹಣತೆಗಳನ್ನು ಹಚ್ಚಿ, ಪಟಾಕಿಗಳಿಗೆ ವಿದಾಯ ಹೇಳಿ ಎಂಬ ಘೋಷಣೆಗಳು ಎಲ್ಲೆಡೆ ಮೊಳಗುತ್ತದೆ. ಹೀಗಿರುವಾಗ, ಸಹಸ್ರಾರು ಜನರು ಸೇರುವ ದೇವಸ್ಥಾನ, ಜಾತ್ರೆಗಳಲ್ಲಿ ಸಾರ್ವಜನಿಕವಾಗಿ ಹೀಗೆ ಸ್ಫೋಟಕಗಳನ್ನು ಸಿಡಿಸುವುದು ಎಷ್ಟು ಸರಿ? ಈ ಪಟಾಕಿಯ ಸದ್ದುಗಳು ಅಂತಿಮವಾಗಿ ಬಿಟ್ಟು ಹೋಗುವ ಸಂದೇಶ ಏನು ಎನ್ನುವುದನ್ನು ನಾವು ಕೊಲ್ಲಂ ದುರಂತದಿಂದ ಕಲಿಯಬೇಕಾಗಿದೆ. ಇದು ಕೇವಲ ಪಟಾಕಿಗಳಿಗಳಷ್ಟೇ ಸೀಮಿತವಾಗಬೇಕಾಗಿಲ್ಲ. ಇಂದು ದೇವಸ್ಥಾನ ಸಹಿತ ಜಾತ್ರೆ ಸಮಾರಂಭಗಳಲ್ಲಿ ಆನೆಗಳನ್ನು ಬಳಸುವ ಪರಿಪಾಠಗಳಿವೆ. ಆನೆಗಳು ರಾಜರ ಕಾಲದ ವೈಭವ, ಪ್ರತಿಷ್ಠೆಯ ಸಂಗತಿಗಳು. ಜಾತ್ರೆಗಳಲ್ಲಿ ಬಳಸಲ್ಪಡುವ ಆನೆಗಳು ಮಾವುತರಿಂದ ಅದೆಷ್ಟು ಚಿತ್ರಹಿಂಸೆಗಳನ್ನು ಪಡೆಯುತ್ತವೆ ಎನ್ನುವುದು ಪ್ರಕರಣದ ಇನ್ನೊಂದು ಭಾಗ. ಬೃಹತ್ ಜನಸಾಗರವಿರುವ ಸ್ಥಳದಲ್ಲಿ ಆನೆ ಏಕಾಏಕಿ ಕೆರಳಿದರೆ ಅಲ್ಲಿನ ಪರಿಸ್ಥಿತಿ ಏನಾಗಬಹುದು ಎನ್ನುವುದು ನಮಗೆ ತಿಳಿದಿದೆ. ಇಂದು ದಸರಾದಂತಹ ಸಮಾರಂಭಗಳನ್ನು ಆನೆಗಳಿಲ್ಲದೆ ನಡೆಸುವುದು ಸಾಧ್ಯವೇ ಇಲ್ಲ ಎಂಬ ಮನಸ್ಥಿತಿಯನ್ನು ಸಂಘಟಕರು ಹೊಂದಿದ್ದಾರೆ.ಆದರೆ ಈ ಮನಸ್ಥಿತಿ ಒಂದಲ್ಲ ಒಂದು ದಿನ ಅಪಾಯವನ್ನು, ದುರಂತವನ್ನು ಮೈಮೇಲೆ ಎಳೆದುಕೊಳ್ಳುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಜ ಪ್ರಭುತ್ವವನ್ನು ವೈಭವೀಕರಿಸುವ, ವನ್ಯಜೀವಿ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸುವ ಆನೆಗಳ ಬಳಕೆಗಳ ಕುರಿತಂತೆಯೂ ಸರಕಾರ ಸ್ಪಷ್ಟವಾಗಿ ಒಂದು ತೀರ್ಮಾನಕ್ಕೆ ಬರುವುದು ಈ ಹಿನ್ನೆಲೆಯಲ್ಲಿ ಅತ್ಯಗತ್ಯವಾಗಿದೆ. ಜಾತ್ರೆಗಳಲ್ಲಿ, ಸಮಾರಂಭಗಳಲ್ಲಿ ಮಾತ್ರವಲ್ಲ, ಯಾವುದೇ ವಿಜಯೋತ್ಸವ ಮೊದಲಾದ ಸಂದರ್ಭಗಳಲ್ಲಿ ಪಟಾಕಿಗಳನ್ನು ಸಂಪೂರ್ಣ ನಿಷೇಧಿಸುವ ಸಮಯ ಹತ್ತಿರ ಬಂದಿದೆ. ಪಟಾಕಿ ಕಾರ್ಖಾನೆಗಳು ಹೇಗೆ ಮಕ್ಕಳ ಬದುಕನ್ನು ಆಹುತಿ ತೆಗೆದುಕೊಳ್ಳುತ್ತವೆ ಎನ್ನುವುದನ್ನು ನಾವು ಅರಿತಿದ್ದೇವೆ. ಅಂತೆಯೇ ದೀಪಾವಳಿಯ ಸಂದರ್ಭದಲ್ಲಿ ಇದೇ ಪಟಾಕಿಯನ್ನು ಸುಡುವ ಸಂಭ್ರಮದಲ್ಲಿ ಮತ್ತೆ ಬಲಿಯಾಗುವುದು ಮಕ್ಕಳೇ ಆಗಿದ್ದಾರೆ. ಆದುದರಿಂದ, ಪಟಾಕಿ ಮಾರಾಟಕ್ಕೆ ವಿಶೇಷ ಕಾನೂನೊಂದನ್ನು ತರುವುದು ಅತ್ಯಗತ್ಯವಾಗಿದೆ. ಹಾಗೆಯೇ ಕೊಲ್ಲಂನಲ್ಲಿ ನಡೆದ ದುರಂತ ಗಂಭೀರ ತನಿಖೆಯೊಂದನ್ನು ಬೇಡುತ್ತದೆ. ಗೋದಾಮಿನಲ್ಲಿ ಪಟಾಕಿಗಳ ಹೊರತಾಗಿ ಮಾರಕ ಸ್ಫೋಟಕಗಳು ಸಂಗ್ರಹವಾಗಿತ್ತು ಎನ್ನುವುದಕ್ಕೆ ದುರಂತದ ಪರಿಣಾಮವೇ ಸಾಕ್ಷಿಯಾಗಿದೆ. ಇಷ್ಟೂ ಪ್ರಮಾಣದ ದಾಸ್ತಾನಿಗೆ ಹೊಣೆ ಯಾರು?, ಅವರು ಪರವಾನಿಗೆಯನ್ನು ಹೊಂದಿದ್ದರೇ?, ಪಟಾಕಿ ಪ್ರದರ್ಶನಕ್ಕೆ ಜಿಲ್ಲಾಡಳಿತದಿಂದ ಅನುಮತಿಯನ್ನು ಪಡೆದುಕೊಂಡಿದ್ದರೇ? ಮೊದಲಾದ ವಿವರಗಳು ಹೊರ ಬೀಳಬೇಕಾಗಿದೆ. ದುರಂತಕ್ಕೆ ಯಾರೇ ಕಾರಣವಾಗಿರಲಿ, ಅವರು ಮರಣದಂಡನೆ ಶಿಕ್ಷೆಗೆ ಸರ್ವ ರೀತಿಯಲ್ಲಿ ಅರ್ಹರಾಗಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X