ಐಐಟಿ-ಖರಗಪುರಕ್ಕೆ ಪೇಟೆಂಟ್‌ಗಳಿಗಾಗಿ ಉನ್ನತ ಪ್ರಶಸ್ತಿ
ಕೋಲ್ಕತಾ, ಎ.10: ಐಐಟಿ-ಖರಗ್‌ಪುರವು 2016ರಲ್ಲಿ ಪೇಟೆಂಟ್‌ಗಾಗಿ ಅಗ್ರ ಶಿಕ್ಷಣ ಸಂಸ್ಥೆಯಾಗಿದ್ದುದಕ್ಕಾಗಿ ಭಾರತ ಸರಕಾರದ ಪ್ರಶಸ್ತಿಯೊಂದನ್ನು ಪಡೆದಿದೆ.
ಸಂಸ್ಥೆಯೂ ‘ಪೇಟೆಂಟ್‌ಗಳಿಗಾಗಿ ಅಗ್ರ ಶಿಕ್ಷಣ ಸಂಸ್ಥೆ-2016’ ಬಹುಮಾನವನ್ನು ಪಡೆದಿದೆಯೆಂಬುದನ್ನು ಸೂಚಿಸಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದಿಂದ ಪತ್ರವೊಂದು ಬಂದಿದೆಯೆಂದು ಐಐಟಿ-ಖರಗ್‌ಪುರ ನಿರ್ದೇಶಕ ಪಾರ್ಥ ಪ್ರತಿಮ್ ಚಕ್ರವರ್ತಿ ತಿಳಿಸಿದ್ದಾರೆ.
ತಮ್ಮ ‘100 ಪೇಟೆಂಟ್ ಕಾರ್ಯಕ್ರಮದ ಪ್ರಯತ್ನ ಈಗ ಫಲ ನೀಡುತ್ತಿದೆಯೆಂದು ಅವರು ತನ್ನ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತೀಯ ಬೌದ್ಧಿಕ ಆಸ್ತಿ ಕಚೇರಿಯೊಂದಿಗೆ ಜಂಟಿಯಾಗಿ ಆಯೋಜಿಸಿರುವ ವಿಶ್ವ ಬೌದ್ಧಿಕ ಆಸ್ತಿ ದಿನ ಸಮಾರಂಭದಲ್ಲಿ, ಎ.26ರಂದು ದಿಲ್ಲಿಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶಸ್ತಿಯನ್ನು ಪ್ರದಾನಿಸಲಿದ್ದಾರೆ.
ಪೇಟೆಂಟ್, ವಿನ್ಯಾಸಗಳು, ಟ್ರೇಡ್ ಮಾರ್ಕ್ ಹಾಗೂ ಪ್ರಾದೇಶಿಕ ಮಹತ್ತ್ವ ಕ್ಷೇತ್ರಗಳ ವಿಶಿಷ್ಟ ಸಂಶೋಧಕರು, ಸಂಘಟನೆಗಳು ಹಾಗೂ ಕಂಪೆನಿಗಳಿಗೆ ಪ್ರತಿ ವರ್ಷವೂ ಕಚೇರಿಯು ರಾಷ್ಟ್ರೀಯ ಬೌದ್ಧಿಕ ಆಸ್ತಿ ಪ್ರಶಸ್ತಿಗಳನ್ನು ನೀಡುತ್ತಿದೆ.
ಪ್ರಶಸ್ತಿಯೂ ಕೆಲವು ಮಹತ್ತ್ವದ ಸಂಶೋಧನೆಗಳನ್ನು ನಡೆಸುವ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಗೆ ಪೇಟೆಂಟ್ ದಾಖಲೆ ಪ್ರಕ್ರಿಯೆ ಸರಳಗೊಳಿಸುವುದಕ್ಕಾಗಿ ಐಐಟಿಯು, ಐಪಿ-ಪೋರ್ಟಲ್ ಒಂದನ್ನು ನಡೆಸುತ್ತಿದೆ.
ಪೇಟೆಂಟ್‌ಗಳು ತಮಗೆ ಸಮಾಲೋಚನಾ ಕೆಲಸ ಹಾಗೂ ಇತರ ಯೋಜನೆಗಳನ್ನು ಪಡೆಯಲು ನೆರವಾಗುತ್ತವೆಯೆಂದು ಸಂಸ್ಥೆಯ ಪ್ರೊ.ಗೌತಮ್ ಸಾಹಾ ತಿಳಿಸಿದ್ದಾರೆ.





