ಚಾರ್ಲ್ಸ್‌ಸ್ಟನ್ ಓಪನ್ ಟೆನಿಸ್ ಟೂರ್ನಿ:ಸ್ಟೆಫನ್ಸ್ ಫೈನಲ್‌ಗೆ ಪ್ರವೇಶ
ನ್ಯೂಯಾರ್ಕ್, ಎ.10: ಅಮೆರಿಕದ ಯುವ ಆಟಗಾರ್ತಿ ಸ್ಲೊಯಾನೆ ಸ್ಟೆಫೆನ್ಸ್ ಚಾರ್ಲ್ಸ್‌ಸ್ಟನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದಾರೆ.
ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆ್ಯಂಜೆಲಿಕ್ ಕೆರ್ಬರ್ ಜ್ವರದಿಂದಾಗಿ ಪಂದ್ಯದಿಂದ ಹಿಂದೆ ಸರಿದ ಕಾರಣ ಸ್ಟೆಫೆನ್ಸ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಸ್ಟೆಫೆನ್ಸ್ ಮುಂದಿನ ಸುತ್ತಿನಲ್ಲಿ ರಶ್ಯದ ಎಲೆನಾ ವೆಸ್ನಿನಾರನ್ನು ಎದುರಿಸಲಿದ್ದಾರೆ. ವೆಸ್ನಿನಾ ಮತ್ತೊಂದು ಸೆಮಿ ಫೈನಲ್‌ನಲ್ಲಿ ಇಟಲಿಯ ಸಾರಾ ಇರಾನಿ ಅವರನ್ನು 6-4, 4-6, 6-2 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.
ಟೂರ್ನಮೆಂಟ್‌ನಲ್ಲಿ ಆರನೆ ಬಾರಿ ಕಾಣಿಸಿಕೊಂಡ ಚಾರ್ಲ್ಸ್‌ಸ್ಟನ್ ಮೊದಲ ಬಾರಿ ಫೈನಲ್‌ಗೆ ತಲುಪಿದ್ದಾರೆ. ಆಕ್ಲೆಂಡ್ ಹಾಗೂ ಅಕಾಪುಲ್ಕೊ ಓಪನ್‌ನಲ್ಲಿ ಚಾಂಪಿಯನ್ ಆಗಿರುವ ಸ್ಟೆಫೆನ್ಸ್ ಈ ವರ್ಷ ಮೂರನೆ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.
ಹಾಲಿ ಚಾಂಪಿಯನ್ ಕೆರ್ಬರ್ ವೃತ್ತಿಜೀವನದಲ್ಲಿ ಮೊದಲ ಬಾರಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ಕೆರ್ಬರ್ 8 ಪ್ರಶಸ್ತಿಯನ್ನು ಜಯಿಸಿದ್ದಾರೆ. ಯಾವ ಪ್ರಶಸ್ತಿಯನ್ನು ಎರಡನೆ ಬಾರಿ ಜಯಿಸಿಲ್ಲ







