ಸೈಬರ್ ಅಪರಾಧ ತಡೆಗೆ ಖಾಸಗಿ ಪರಿಣಿತರು ಸರಕಾರದ ನಿರ್ಧಾರ
ಹೊಸದಿಲ್ಲಿ, ಎ.10: ಸೈಬರ್ ದಾಳಿಗಳ ಪ್ರಮಾಣ ಶೇ.70ರಷ್ಟು ಹೆಚ್ಚಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ ಸಕ್ರಿಯ ನಿಗಾ ಹಾಗೂ ಭವಿಷ್ಯ ಚಿಂತನೆಯ ವ್ಯೆಹಗಳನ್ನು ಅಳವಡಿಸಿ ಸೈಬರ್ ಅಪರಾಧಗಳನ್ನು ತಡೆಯಲು ಖಾಸಗಿ ವಲಯದ ಪರಿಣತರನ್ನು ಬಳಸಿಕೊಳ್ಳಲು ಸರಕಾರ ನಿರ್ಧರಿಸಿದೆ.
ಇದರ ಮೊದಲ ಹಂತವಾಗಿ ಗೃಹ ಸಚಿವಾಲಯವು, ಸೈಬರ್ ಅಪರಾಧ ಮತ್ತು ಭದ್ರತಾ ವಲಯದಲ್ಲಿ ಕೆಲಸ ಮಾಡುತ್ತಿರುವ, ಆಸಕ್ತಿ ಸಂಘಟನೆಗಳು ಅಥವಾ ತಂಡಗಳನ್ನು ಎ.12 ಹಾಗೂ 19ರಂದು ನಡೆಯಲಿರುವ ವಿಶೇಷ ಪ್ರದರ್ಶನವೊಂದಕ್ಕೆ ಹಾಜರಾಗುವಂತೆ ಆಹ್ವಾನಿಸಲಾಗಿದೆ.
ಸೈಬರ್ ಅಪರಾಧಿ ಮತ್ತು ಭದ್ರತೆಯ ವಲಯದಲ್ಲಿ ತಮ್ಮ ನೈಪುಣ್ಯವನ್ನು ತೋರಿಸಲು ಕಂಪೆನಿಗಳು ಪ್ರದರ್ಶನವೊಂದನ್ನು ನೀಡಬೇಕೆಂಬುದು ತಮ್ಮ ಇಚ್ಛೆಯಾಗಿದೆ. ಆದರೆ, ಅದು ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಸೀಮಿತವಿರಬಾರದೆಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.
Next Story





