ಪಾನನಿರೋಧಕ್ಕಾಗಿ ನಿತೀಶ್‌ರನ್ನು ಮತ್ತೆ ಹೊಗಳಿದ ಶತ್ರುಘ್ನಸಿನ್ಹಾ
.jpg)
ಪಾಟ್ನಾ, ಎಪ್ರಿಲ್.11: ಬಿಜೆಪಿಯ ಹಿರಿಯ ನಾಯಕ ಮತ್ತು ಸಿನೆಮಾ ನಟ ಶತ್ರುಘ್ನ ಸಿನ್ಹಾ ಬಿಹಾರದಲ್ಲಿ ಸಂಪೂರ್ಣ ಪಾನ ನಿರೋಧ ಜಾರಿಗೊಳಿಸಿರುವುದಕ್ಕಾಗಿ ನಿತೀಶ್‌ಕುಮಾರ್‌ರನ್ನು ಪ್ರಶಂಸಿದ್ದಾರೆ.
ಜೊತೆಗೆ ಪ್ರಾಣಾಪಾಯಕಾರಕ ತಂಬಾಕು ಸೇವೆನೆಗೂ ನಿಷೇಧ ಹೇರಬೇಕೆಂದು ಅವರು ಆಗ್ರಹಿಸಿರುವುದಾಗಿ ವರದಿಗಳು ತಿಳಿಸಿವೆ. ಶತ್ರುಘ್ನ ಸಿನ್ಹಾ ಅವರು ಸಂಪೂರ್ಣ ಶರಾಬು ನಿಷೇಧ ನಿತೀಶ್ ಸರಕಾರದ ಪ್ರಗತಿಶೀಲ ಚಿಂತನೆಯಾಗಿದೆ. ಇದನ್ನು ಎಲ್ಲರೂ ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು ಎಂದೂ ಹೇಳಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಆರೋಗ್ಯಸಚಿವರಾಗಿದ್ದ ಪಟ್ನಾ ಸಾಹಿಬ್ ಸಂಸದೀಯ ಕ್ಷೇತ್ರದ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾರು ತಂಬಾಕು ನಮ್ಮನ್ನು ಸಾಯಿಸುವುದಕ್ಕಿಂತ ಮುಂಚೆ ಅದನ್ನು ನಾವು ನಿವಾರಿಸಬೇಕೆಂದು ಹೇಳಿದ್ದಾರೆಂದು ವರದಿಯಾಗಿವೆ.
Next Story





