ಫುಟ್‌ಬಾಲ್ ನಿವೃತ್ತ ಆಟಗಾರ ವಿಲ್ ಸ್ಮಿತ್‌ರನ್ನು ಗುಂಡಿಟ್ಟು ಕೊಲೆ

ವಾಶಿಂಗ್ಟನ್, ಎಪ್ರಿಲ್.11: ಅಮೆರಿಕದ ನ್ಯೂ ಆರ್ಲಿಯನ್ಸ್ ಫುಟ್‌ಬಾಲ್ ನಿವೃತ್ತ ಆಟಗಾರ 2010ರಲ್ಲಿ ಎನ್‌ಎಫ್‌ಎಲ್ ಸೂಪರ್ ಬಾಲ್ ವಿಜೇತ ಟೀಮ್ ನ್ಯೂ ಆರ್ಲಿಯನ್ಸ್ ಸೈಂಟ್‌ನ ಆಟಗಾರರಾಗಿದ್ದ ವಿಲ್ ಸ್ಮಿತ್‌ರನ್ನು ಗುಂಡಿಟ್ಟುಕೊಂದಿರುವ ಘಟನೆ ನ್ಯೂ ಅರ್ಲಿಯನ್ಸ್‌ನಿಂದ ವರದಿಯಾಗಿದೆ. ನ್ಯೂಅರ್ಲಿಯನ್ಸ್‌ನಫ್ರೆಚ್ ಕ್ವಾಟರ್ ಪೊಲೀಸರು ತಿಳಿಸಿರುವ ಪ್ರಕಾರ ರಸ್ತೆ ಜಗಳದ ಹಿನ್ನೆಲೆಯಲ್ಲಿ ಸ್ಮಿತ್‌ರನ್ನು ಗುಂಡಿಟ್ಟು ಸಾಯಿಸಲಾಗಿದೆ. ಅವರ ಪತ್ನಿ ಗಾಯಗೊಂಡಿದ್ದಾರೆ. ಈ ಘಟನೆಯ ತನಿಖೆ ನಡೆಸುತ್ತಿರುವ ಪೊಲೀಸಧಿಕಾರಿಗಳೂ ಗುಂಡುಹಾರಾಟ ರಸ್ತೆ ಜಗಳಿಂದಾಯಿತೇ ಎಂದು ಪತ್ತೆಹಚ್ಚುವುದರಲ್ಲಿ ನಿರತರಾಗಿದ್ದಾರೆಂದು ವರದಿಗಳು ತಿಳಿಸಿವೆ. ಪೊಲೀಸ್‌ರ ಪ್ರಕಾರ ಗುಂಡುಹಾರಿಸಿದ ಶಂಕಿತ ಆರೋಪಿಯನ್ನು ಕಾರ್ಡೆನ್ ಹೇಸ್(28) ಎಂದು ಗುರುತಿಸಲಾಗಿದ್ದು ಸ್ಮಿತ್ ಮತ್ತು ಹೇಸ್ ಮೊದಲೇ ಪರಿಚಿತರಾಗಿದ್ದರೇ ಎಂದು ತನಿಖೆ ನಡೆಯುತ್ತಿದೆಯೆಂದು ಪೊಲೀಸ್ ಅಧೀಕ್ಷಕ ಮೈಕಲ್ ಹಾರಿಸನ್ ಹೇಳಿದ್ದಾರೆ. ಸ್ಮಿತ್ 2014ರಲ್ಲಿ ಫುಟ್‌ಬಾಲ್‌ನಿಂದ ನಿವೃತ್ತರಾಗಿದ್ದರು. ಸ್ಮಿತ್ ರಾಷ್ಟ್ರೀಯ ಫುಟ್‌ಬಾಲ್ ಲೀಗ್‌ನಲ್ಲಿ ಡಿಫೆಂಡರ್ ಆಗಿ ಮಿಂಚಿದ್ದರು. ಸ್ಮಿತ್‌ರಿಗೆ ಗುಂಡು ಹಾರಿಸಿದ ಹೇಸ್ ಅಪರಾಧಹಿನ್ನೆಲಯವನಾಗಿದ್ದು 2010ರಲ್ಲಿ ಅಕ್ರಮ ಅಸ್ತ್ರ ಇಟ್ಟು ಕೊಂಡಿದ್ದಕ್ಕೆ ಮತ್ತು ಮಾದಕವಸ್ತು ಹೊಂದಿದ್ದಕ್ಕೆ ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.





