ಕೊಲ್ಲಂನ ಪರವೂರಿನಲ್ಲಿ ನಡೆದ ಅಗ್ನಿ ದುರಂತ ಆಘಾತಕಾರಿ : ಪಾಪ್ಯುಲರ್ ಫ್ರಂಟ್

ಕೇರಳದ ಕೊಲ್ಲಂ ಜಿಲ್ಲೆಯ ಪರವೂರಿನಲ್ಲಿ ದೇವಸ್ಥಾನದ ಜಾತ್ರೆಯ ಸಂದಂರ್ಭದಲ್ಲಿ ನೂರಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಅಗ್ನಿ ದುರಂತ ನಡೆದದ್ದು ಆಘಾತಕಾರಿ ಎಂದು ಪಾಪ್ಯುಲರ್ ಫ್ರಂಟ್ಆಫ್ ಇಂಡಿಯಾಕಳವಳ ವ್ಯಕ್ತಪಡಿಸಿದೆ.
ಪತ್ರಿಕಾ ಹೇಳಿಕೆ ನೀಡಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲೀ ಜಿನ್ನಾ ರವರು ಮೃತಪಟ್ಟ ಕುಂಟುಂಬದವರಿಗೆ ಸಂತಾಪ ಸೂಚಿಸಿದರುಮತ್ತು ಗಾಯಗೊಂಡವರು ಶೀಘ್ರ ಗುಣಮುಖರಾಗಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಉಗ್ರಾಣದಲ್ಲಿ ಇದ್ದಂತಹ ಸಿಡಿಮದ್ದುಗಳಿಗೆ ಬೆಂಕಿಯ ಕಿಡಿ ಹತ್ತಿ ಸ್ಫೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ಇದರ ಪರಿಣಾಮ ಹತ್ತಿರದಲ್ಲಿದ್ದ ತಿರುವಂತಪುರದ ದೇವಸ್ಸ್ಯಬೋರ್ಡ್ ಕಟ್ಟಡ ಕೂಡಾ ಉರಿದಿದೆ.
ದೇವಸ್ಥಾನಗಳಲ್ಲಿ ಸಿಡಿಮದ್ದು ಕೆಲಸಗಳಿಗೆ ನೀಷೆಧವಿದ್ದು ಕೇವಲ ತಾತ್ಕಾಲಿಕ ಅನುಮತಿಯೊಂದಿಗೆ ಅಲ್ಲಿ ಸಿಡಿಮದ್ದು ಕೆಲಸಗಳು ನಡೆದು ಬಂದಿದೆ. ಜಿಲ್ಲಾಡಳಿತ ಕೂಡಾ ಸಿಡಿಮದ್ದು ಪ್ರದರ್ಶನಗಳಿಗೆ ಅನುಮತಿ ಕೋರಿದ ಅರ್ಜೀಯನ್ನು ತಿರಸ್ಕರಿಸಿದ್ದು ದೇವಸ್ಥಾನದ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದೆ.
ಇದಕ್ಕೆ ಸಂಬಂಧಪಟ್ಟ ಕೇರಳದ ಎಲ್ಲರೂ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿನ್ನಾರವರು ಹೇಳಿದರು. ಸಂತ್ರಸ್ತರಿಗೆ ಮತ್ತು ಮೃತ ಕುಂಟುಂಬಗಳಿಗೆ ಸಹಾಯ ಮಾಡಲು ತನ್ನ ಎಲ್ಲಾ ಕಾರ್ಯಕರ್ತರಿಗೆ ಪಾಪ್ಯುಲರ್ ಫ್ರಂಟ್ ಕರೆ ನೀಡಿದೆ.







