ಹೊಸದಿಲ್ಲಿಯಲ್ಲಿ ಹಾಡುಹಗಲೇ ಮೆಟ್ರೊ ಸ್ಟೇಶನ್ ಕಂಟ್ರೋಲರ್‌ಗೆ ಚಾಕು ತೋರಿಸಿ 12 ಲಕ್ಷ ಅಪಹರಿಸಿದ ದುಷ್ಕರ್ಮಿಗಳು

ಹೊಸದಿಲ್ಲಿ, ಎಪ್ರಿಲ್.11: ದಿಲ್ಲಿಯ ರಾಜೇಂದ್ರ ಪ್ಲೆಸ್ ಮೆಟ್ರೋ ಸ್ಟೇಶನ್ ಕಂಟ್ರೋಲ್ ರೂಮ್‌ಗೆ ಸೋಮವಾರ ಬೆಳಗ್ಗೆ ಐದೂವರೆಗಂಟೆಗೆ ಕೆಲವು ದುಷ್ಕರ್ಮಿಗಳು ಪ್ರವೇಶಿಸಿ ಅಲ್ಲಿದ್ದ ಕಂಟ್ರೋಲರ್‌ಗೆ ಚಾಕು ತೋರಿಸಿ ಹನ್ನೆರಡು ಲಕ್ಷರೂಪಾಯಿ ದೋಚಿ ಪರಾರಿಯಾದ ಘಟನೆ ವರದಿಯಾಗಿದೆ.
ಈ ಘಟನೆ ಮೆಟ್ರೋದ ಸುರಕ್ಷೆಯ ಮೇಲೆ ಬಹುದೊಡ್ಡ ಸವಾಲನ್ನೇ ಹುಟ್ಟು ಹಾಕಿದ್ದು ದಿಲ್ಲಿ ಪೊಲೀಸರು ತನಿಖೆಗಾಗಿ ಸಿಸಿಟಿವಿ ಫುಟೇಜ್‌ನಿಂದ ಆರೋಪಿಗಳನ್ನು ಗುರುತಿಸುವ ಪ್ರಯತ್ನ ನಡೆಸುತ್ತಿದ್ದಾರೆ. ವರದಿಯಾಗಿರುವ ಪ್ರಕಾರ ಮೆಟ್ರೊ ನೌಕರನ ಮೇಲೆ ಕನಿಷ್ಠ ಇಬ್ಬರು ದುಷ್ಕರ್ಮಿಗಳು ಹಲ್ಲೆನಡೆಸಿದ್ದರು. ಸಿಐಎಸ್‌ಎಫ್ ಮೆಟ್ರೋ ಸ್ಟೇಶನ್ ಸುರಕ್ಷೆ ಕಾರ್ಯವನ್ನು ನಿರ್ವಹಿಸುತ್ತದೆ ಎಂದು ವರದಿಗಳು ತಿಳಿಸಿವೆ.
Next Story





