ಪೊಲೀಸ್ ಪೇದೆಯನ್ನು ಪಿಕ್‌ಅಪ್‌ನಡಿಗೆ ಹಾಕಿದ ಹಸುಕಳ್ಳಸಾಗಾಟದಾರರು
ಪೇದೆ ಮೃತ್ಯು

ರೇವಡಿ, ಎಪ್ರಿಲ್11: ನಿನ್ನೆ ತಡ ರಾತ್ರೆ ಹರಿಯಾಣದ ರೇವಡಿಯಲ್ಲಿ ಹಸುಕಳ್ಳಸಾಗಾಟದಾರರು ಚೆಕ್‌ಪೊಸ್ಟ್‌ನಲ್ಲಿದ್ದ ಪೊಲೀಸ್ ಪೇದೆಯನ್ನು ವಾಹನದಡಿಗೆ ಹಾಕಿ ಪರಾರಿಯಾದ ಘಟನೆ ವರದಿಯಾಗಿದೆ. ತೀವ್ರಗಾಯಗಳಿಂದಾಗಿ ಪೊಲೀಸ್‌ಪೇದೆ ಸ್ಥಳದಲ್ಲಿಯೇ ಮೃತಪಟ್ಟಿದ್ದು ಆತನನ್ನು ರಾಜ್‌ಸಿಂಗ್ ಎಂದು ಗುರುತಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ವರದಿಗಳು ತಿಳಿಸಿರುವಂತೆ ಪೊಲೀಸ್ ಕಾನ್ಸ್‌ಟೇಬಲ್ ರಾಜ್‌ಸಿಂಗ್ ಪೈಲಟ್ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದರು. ಹಸುಕಳ್ಳಸಾಗಾಟದಾರರ ಪಿಕ್‌ಅಪ್ ವಾಹನ ಅಲ್ಲಿಂದ ಬಂದಿತ್ತು. ರಾಜ್‌ಸಿಂಗ್ ವಾಹನ ನಿಲ್ಲಿಸುವಂತೆ ಅಡ್ಡಬಂದಾಗ ನಿಲ್ಲಿಸದೆ ಅವರನ್ನು ಅಡಿಗೆ ಹಾಕಿ ವೇಗವಾಗಿ ಪರಾರಿಯಾಗಿತ್ತು. ಚೆಕ್‌ಪೋಸ್ಟ್‌ನಲ್ಲಿದ್ದ ಇತರ ಪೊಲೀಸರು ವಾಹನವನ್ನು ಬೆನ್ನಟ್ಟಿದ್ದರೂ ಅದನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ದುರ್ಘಟನೆಯ ಸುದ್ದಿ ಸಿಕ್ಕಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೃತ ಪೊಲೀಸ್ ಪೇದೆಯ ಶವವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ಮುಂದುವರಿಯುತ್ತಿದೆ. ಕಳ್ಳಸಾಗಾಟಗಾರ ಪತ್ತೆಗೆ ವ್ಯಾಪಕ ಬಲೆಬೀಸಲಾಗಿದೆ ಎಂದು ವರದಿಗಳು ತಿಳಿಸಿವೆ.





