ಪುತ್ತೂರು : ಎ.13: ವಿವೇಕಾನಂದ ಕಾಲೇಜ್‌ನಲ್ಲಿ ರಾಜ್ಯ ಮಟ್ಟದ ಕಾರ್ಯಗಾರ
ಪುತ್ತೂರು : ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗ ಮತ್ತು ವಿವೇಕಾನಂದ ಸಂಶೋಧನಾ ಕೇಂದ್ರ ಇದರ ಸಂಯುಕ್ತ ಆಶ್ರಯದಲ್ಲಿ ಎ.13ರಂದು ಹಾಲು ಉತ್ಪಾದನೆ : ವಿಚಾರ ಮತ್ತು ಅವಕಾಶಗಳು ಎಂಬ ವಿಷಯದ ಕುರಿತಾಗಿ ರಾಜ್ಯ ಮಟ್ಟದ ಕಾರ್ಯಗಾರ ನಡೆಯಲಿದ್ದು, ಕಾರ್ಯಗಾರವನ್ನು
ಉದ್ಘಾಟನೆಯನ್ನು ಮಂಗಳೂರಿನ ದಕ್ಷಿಣ ಕನ್ನಡ ಹಾಲು ಉತ್ಪಾಧಕರ ಮಂಡಳಿ ನಿಯಮಿತದ ಅಧ್ಯಕ್ಷ ರವಿರಾಜ್ ಉದ್ಘಾಟಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್. ಆರ್ ರಂಗಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷ ಪಿ. ಶ್ರೀನಿವಾಸ್ ಪೈ ಮುಖ್ಯ ಅತಿಥಿಗಳಾಗಿ ಪಾಲ್ಗೊಳಲಿದ್ದಾರೆ ಎಂದು ಕಾಲೇಜ್‌ನ ಪ್ರಕಟಣೆ ತಿಳಿಸಿದೆ. ಕಾರ್ಯಗಾರದಲ್ಲಿ ಹಾಲು ಉತ್ಪಾದನೆಯಲ್ಲಿ ಯುವಕರ ಪಾತ್ರ, ರೈತರ ದೃಷ್ಟಿಯಿಂದ ಹಾಲು ಉತ್ಪಾದನೆಯ ನೋಟ ಮತ್ತು ಹಾಲು ಉತ್ಪಾದನೆಯಲ್ಲಿ ಇರುವ ಅವಕಾಶಗಳು ಎಂಬ ವಿಷಯದ ಕುರಿತಾಗಿ ವಿಚಾರ ಗೋಷ್ಟಿಗಳು ನಡೆಯಲಿರುವುದು. ಮಂಗಳೂರು ಡಿ.ಕೆ.ಸಿ.ಎಮ್‌ನ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ, ನಿರ್ದೇಶಕರುಗಳಾದ ವೀಣಾ ಆರ್ ರೈ, ನಾರಾಯಣ ಪ್ರಕಾಶ್, ಮೂಡಬಿದಿರೆಯ ಉಪನ್ಯಾಸಕಿ ಬಿಂದು ಬಿ ನಾಯರ್, ಪ್ರಗತಿಪರ ಕೃಷಿಕ ಪೆರುವಾಜೆ ಈಶ್ವರ ಭಟ್, ಕಾರ್ಕಳದ ಕುಂದರ್ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ರಿಯಲ್ ಪಾಲ್ ಮಿರಾಂಡ, ಕಾಸರಗೋಡಿನ ಅನುಪಮ ಗಂಗಾ ಫಾರ್ಮ್ಸ್‌ನ ಹೇಮರಾಣಿ ಭಾಗವಹಿಸುವರು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಡಿ.ಕೆ.ಸಿ.ಎಮ್‌ನ ನಿರ್ದೇಶಕ ಕೆ. ಕೃಷ್ಣ ಭಟ್ ವಹಿಸಲಿದ್ದು, ನಿರ್ದೇಶಕ ಸೀತರಾಮ ರೈ ಸವಣೂರು ಹಾಗೂ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಜಯರಾಮ್ ಭಟ್, ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್‌ವಿಲ್ಸನ್ ಪ್ರಭಾಕರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.





