ದೋಹ: ಪ್ರವಾದಿ ಕವಿತೋತ್ಸವಕ್ಕೆ ಉಜ್ವಲ ಆರಂಭ

ದೋಹ,ಎಪ್ರಿಲ್.11: ಇಲ್ಲಿನ ಕತಾರ ಕಲ್ಚರಲ್‌ವಿಲೇಜ್ ಫೌಂಡೇಶನ್ ಏರ್ಪಡಿಸುತ್ತಿರುವ ಪ್ರವಾದಿ(ಸ) ಕವಿತೋತ್ಸವಕ್ಕೆ ಉಜ್ವಲ ಆರಂಭವಾಗಿದೆ. ಕತಾರ ಒಪೇರ ಹೌಸ್‌ನಲ್ಲಿ ನಾಲ್ಕುದಿವಸಗಳ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕವಿತಾ ಸ್ಪರ್ಧೆಯಲ್ಲಿ ಕಿರುಪಟ್ಟಿಯಲ್ಲಿರುವ ಮೂವತ್ತು ಸ್ಪರ್ಧಿಗಳ ಸಹಿತ ಅನೇಕ ಮಂದಿ ಸೇರಿದ್ದರು. ಕೊನೆಯ ರೌಂಡ್‌ಗೆ ಐವರನ್ನು ಕವಿತಾ ಸ್ಪರ್ಧೆಯ ಜೂರಿಗಳು ಆಯ್ಕೆಮಾಡುವರು ಎಂದು ವರದಿಯಾಗಿದೆ. ಅರಬ್‌ಜಗತ್ತಿನಲ್ಲಿ ಅತ್ಯಂತ ದೊಡ್ಡ ಇಸ್ಲಾಮಿಕ್_ ಸಾಂಸ್ಕೃತಿಕ ಕಾರ್ಯಕ್ರಮ ಕತಾರ ಏರ್ಪಡಿಸುವ ಪ್ರವಾದಿ ಕವಿತೋತ್ಸವ ಆಗಲಿದೆ ಎಂದು ಕತಾರದ ಪ್ರಧಾನ ಪ್ರಬಂಧಕ ಡಾ.ಖಾಲಿದ್ ಬಿನ್ ಇಬ್ರಾಹೀಂ ಅಲ್ ಸುಲೈತ್ತಿಹೇಳಿದರು. ಅಪಾರ ಜನರ ಮನಸ್ಸಿನ ಇಸ್ಲಾಮಿಕ್ ಮೌಲ್ಯಗಳು ತುಂಬಿಕೊಳ್ಳುವಂಥೆ ಕವಿತಗಳನ್ನು ಪುನರುಜ್ಜೀಕರಿಸುವುದು ಅರಬ್ ಪರಂಪರೆಯನ್ನು ಸಂರಕ್ಷಿಸುವುದು ಇದರ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರವಾದಿ ಮುಹಮ್ಮದ್‌ರೊಂದಿಗಿನ ಪ್ರೀತಿಯನ್ನು ಯುವಮನಸ್ಸುಗಳಲ್ಲಿ ಹುಟ್ಟುಹಾಕುವುದು ತಪ್ಪುದಾರಿಯಲ್ಲಿ ಅವರು ನಡೆಯದಿರುವಂತೆ ನೇರಮಾರ್ಗದಲ್ಲಿ ಸಾಗುವಂತೆ ಪ್ರೇರೇಪಿಸುವುದೂ ಕೂಡಾ ಈ ಮಹಾನ್ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ.ಶೈಖ್ ಮುಹಮ್ಮದ್ ಅಲ್ ಅರೀಫಿ. ಪ್ರಸಿದ್ಧ ಕವಿ ಡಾ. ಅಬ್ದುರ್ರಹ್ಮಾನ್ ಅಶ್‌ಮಾವಿ. ಅಹ್ಮದ್ ಅಬ್ದುಲ್ ಹಕೀಂ ಅಲ್ ಝದ್ದಿ ಮುಂತಾದವರು ಮಾತಾಡಿದರು. ಪ್ರವಾದಿ ಕವಿತೋತ್ಸದ ಅಂಗವಾಗಿ ವಿವಿಧ ಕಾರ್ಯಕ್ರಮಗಳೂ ಪ್ರದರ್ಶನಗಳೂ ಕತಾರ ಆರಂಭಿಸಿದೆ. ಪ್ರವಾದಿಯ ಗುಣಗಳನ್ನು ಪ್ರತಿಪಾದಿಸುವ ಪವಿತ್ರಕುರ್‌ಆನ್ ವಚನಗಳ 50ಪೈಂಟಿಂಗ್‌ಗಳು ಅರಬ್ ಕ್ಯಾಲಿಗ್ರಫಿಗಳನ್ನೂ ಕಾವ್ಯಮೇಳದ ಭಾಗವಾಗಿ ಪ್ರದರ್ಶಿಸಲಾಗುವುದು. ಮೂವತ್ತು ಕವಿಗಳೂ ಪಾಲ್ಗೊಳ್ಳುವ ಸೆಮಿನಾರ್ ನಡೆಯಲಿದೆ. ಕಾರ್ಯಕ್ರಮ ನಡೆಯುವ ಐದು ದಿವಸಗಳಲ್ಲಿ ಇಶಾ ನಮಾಝ್ ನಂತರ ಪ್ರವಾದಿವರ್ಯರ ಕುರಿತು ವಿಶೇಷ ಅಧ್ಯಯನ ತರಗತಿಗಳೂ ನಡೆಯಲಿವೆ.
ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಿಗೂ ವಿಶೇಷ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ. ಮೂರು ಲಕ್ಷ ಅಮೆರಿಕನ್ ಡಾಲರ್ ಕವಿತಾಸ್ಪರ್ಧೆಯ ಪ್ರಥಮ ಬಹುಮಾನವಾದರೆ ಎರಡನೆ ಮತ್ತು ಐದನೇ ಸ್ಥಾನದವರೆಗೆ ಎರಡು ಲಕ್ಷ,ಒಂದುಲಕ್ಷ, ಐವತ್ತು ಸಾವಿರ, ಇಪ್ಪತ್ತೈದು ಸಾವಿರ ಡಾಲರ್ ಬಹುಮಾನ ನೀಡಲಾಗುವುದು ಎಂದು ವರದಿಗಳು ತಿಳಿಸಿವೆ.







