ಮುಂಡಗೋಡ :ಮಾರ್ಕೆಟಿಂಗ್ ಸೊಸೈಟಿಯಲ್ಲಿ 90 ಸಾವಿರಕ್ಕಿಂತ ಅಧಿಕ ನಗದು ಕಳ್ಳತನ

ಮುಂಡಗೋಡ : ಇಲ್ಲಿಯ ತಾಲೂಕಾ ಒಕ್ಕುಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ನಿಯಮಿತ (ಮಾರ್ಕೆಟಿಂಗ್ ಸೊಸೈಟಿ)ಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿ ಸುಮಾರು 90 ಸಾವಿರ ರೂ ಕ್ಕಿಂತ ಅಧಿಕ ರೂ ಗಳನ್ನು ಕದ್ದು ಪರಾರಿಯಾದ ಘಟನೆ ನಡೆದಿದೆ
ಸೋಮವಾರ ಸೊಸೈಟಿಯ ಸಿಬ್ಬಂದಿಗಳು ಬಾಗಿಲು ತೆರೆಯಲು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.
ತಕ್ಷಣ ಸಿಬ್ಬಂದಿ ಪೊಲೀಸ ಇಲಾಖೆಗೆ ತಿಳಿಸಿದ್ದಾರೆ ಘಟನಾಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿ ಕಳ್ಳರನ್ನು ಹಿಡಿಯಲು ಶ್ವಾನದಳ ಕರೆಸಿದ್ದಾರೆ
ವಿವಿಧ ವಿಭಾಗದ ಬಾಗಿಲಿನ ಕೀಲಿ ಮುರಿದು ನಗದು ಹಣಕ್ಕಾಗಿ ತಡಕಾಡಿಸಿದ್ದಾರೆ. ಬಟ್ಟೆ ವಿಭಾಗದ ನಾಲ್ಕನೆ ಶೇಟರ್ ನ ಕೀಲಿ ಮುರಿದು ಬಟ್ಟೆ ಅಂಗಡಿಯನ್ನು ಒಳ ಹೊಕ್ಕ ಕಳ್ಳರು ಒಂದನೇ ಶೇಟರ ಹತ್ತಿರವಿರುವ ಕ್ಯಾಶಬಾಕ್ಸನ್ನುಹೊತ್ತುಕೊಂಡು ಹೋಗಿ ಪಕ್ಕದ ಹೊಲವೊಂದರಲ್ಲಿ ಗುದ್ದಲಿ ಇನ್ನಿತ ಕಬ್ಬಿಣದ ಸಲಕರಣೆಯಿಂದ ಒಡೆದು ಕ್ಯಾಶಬಾಕ್ಸನಲ್ಲಿದ್ದ ಸುಮಾರು 75 ಸಾವಿರ ಹಾಗು ಇನ್ನಿತರ ವಿಭಾಗಗಳಿಂದ ಸುಮಾರು ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಶ್ವಾನದಳ ಬಂದು ಬಸ್‌ಸ್ಟ್ಯಾಂಡ ಹಾಗು ಇನ್ನಿತರ ಸ್ಥಳಗಳಿಗೆ ಹೋಗಿದೆ. ಮಧ್ಯಾಹ್ನ ಶ್ವಾಮದಳ ಬಂದು ಪರಿಶೀಲನೆ ನಡೆಸಿದ ನಂತರ ಸೊಸೈಟಿ ವ್ಯಾಪಾರ ವಹಿವಾಟಿ ಪ್ರಾರಂಭಿಸಿತು
ಘಟನೆ ಸನ್ನಿವೇಶ ನೋಡಿದರೆ ಯಾರೋ ಪರಿಚಸ್ಥರೆ ಈ ಕೃತ್ಯ ಮಾಡಿದ್ದಾರೆ ಹಾಗು ನಗದು ಹಣಕ್ಕಾಗಿ ಮಾಡಿದ್ದಾರೆ ಮೆಲ್ನೋಟಕ್ಕೆ ಕಂಡು ಬರುತ್ತಿದೆ
ಈ ಕುರಿತು ಸೊಸೈಟಿಯ ಮುಖ್ಯಸ್ಥರು ಪೊಲೀಸ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರ ಪ್ರಕರಣ ದಾಖಲಿಸಿಕೊಂಡು ಕಳ್ಳರನ್ನು ಆದಷ್ಟು ಬೇಗನೆ ಹಿಡಿಯುವುದಾಗಿಮುಂದಿನ ತನಿಖೆ ಕೈಗೊಂಡಿದ್ದಾರೆ.





