ಚಿನ್ನಸ್ವಾಮಿ ಕ್ರೀಡಾಂಗಣ ಬಳಕೆಗೆ ನೀರು: ಐಪಿಎಲ್ ವಿರುದ್ಧ ಹೈಕೋರ್ಟ್‌ಗೆ

ಬೆಂಗಳೂರು, ಎ.11: ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಳಸುವ ನೀರಿನ ಲೆಕ್ಕಪರಿಶೋಧನೆ ಆಗಬೇಕೆಂದು ವ್ಯಕ್ತಿಯೊಬ್ಬರು ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಬರಗಾಲ ಇರುವುದರಿಂದ ನೀರಿನ ಸಮಸ್ಯೆ ಯಥೇಚ್ಛವಾಗಿದೆ. ಆದರೆ, ಐಪಿಎಲ್ ಪಂದ್ಯದ ವೇಳೆ ನೀರಿನ ದುರ್ಬಳಕೆ ಅಗುತ್ತಿದೆ. ಹೀಗಾಗಿ, ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಳಸುವ ನೀರಿನ ಲೆಕ್ಕಪರಿಶೋಧನೆ ಆಗಬೇಕೆಂದು ಬೆಂಗಳೂರಿನ ಅರ್ಚಕ ಶ್ರೀನಿವಾಸ್ ಶರ್ಮ ಎಂಬವರು ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದಾರೆ.
ಖಾಸಗಿ, ವಾಣಿಜ್ಯ ಬಳಕೆಗೆ ನೀರು ಸರಬರಾಜಾಗುತ್ತಿದೆ. ಈ ಕಾರ್ಯಕ್ಕೆ ಜಲ ಮಂಡಳಿಯಿಂದ ನ್ಯಾಯಸಮ್ಮತವಲ್ಲದ ನೀರು ಪೂರೈಕೆ ಆಗುತ್ತಿದೆ. ನೀರು ಬಳಕೆಗೆ ಬಿಸಿಸಿಐಗೆ ಮಿತಿ ನಿಗದಿಪಡಿಸಬೇಕು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೀರು ಬಳಕೆ ಕುರಿತು ಲೆಕ್ಕಪರಿಶೋಧನೆ ನಡೆಸಬೇಕು. ಈ ಕುರಿತು ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಐಪಿಎಲ್ ಹಾಗೂ ಜಲಮಂಡಳಿಯನ್ನು ಪ್ರತಿವಾದಿಯಾಗಿಸುವಂತೆ ಮನವಿ ಮಾಡಿದ್ದಾರೆ.







