ಎ.16: ‘ಭರತ ಬ್ರಹನ್ನಳೆಯೆ?’ ಕುರಿತು ಮಾತುಕತೆ
ಮಂಗಳೂರು, ಎ.11: ಪೇರೂರಿನ ತುಳು ಧರ್ಮಸಂಶೋಧನಾ ಕೇಂದ್ರದ ವತಿಯಿಂದ ಎ.16ರಂದು ಸಂಜೆ 4 ಗಂಟೆಗೆ ‘ಭರತ ಬ್ರಹನ್ನಳೆಯೆ?’ ಎಂಬ ಮಾತುಕತೆಯನ್ನು ಡಾನ್ ಬಾಸ್ಕೋ ಮಿನಿ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭ ‘ಕುದ್ರೋಳಿ ಗೋಕರ್ಣನಾರ್ಥೇಶ್ವರ’ ಎಂಬ ತುಳು ಪುಸ್ತಕ ಬಿಡುಗಡೆಯಾಗಲಿದೆ ಎಂದು ಪ್ರಕಟನೆ ತಿಳಿಸಿದೆ. ಬೀಡಿ ಉದ್ಯಮ ಸ್ಥಗಿತ ತೆರವಿಗೆ ಒತ್ತಾಯಿಸಿ ಇಂದು ಧರಣಿ
ಮಂಗಳೂರು, ಎ.11: ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯ ಸುಮಾರು 5 ಲಕ್ಷಕ್ಕೂ ಅಧಿಕ ಮಹಿಳೆಯರು ಬೀಡಿ ಕೆಲಸವನ್ನೇ ನಂಬಿರುವುದರಿಂದ ಬೀಡಿ ಮಾಲಕರು ಉದ್ಯಮವನ್ನು ಸ್ಥಗಿತಗೊಳಿಸಿರುವುದನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಎ. 12ರಂದು ಪ್ರತಿಭಟನಾ ಪ್ರದರ್ಶನ ಆಯೋಜಿಸಿರುವುದಾಗಿ ಸಿಐಟಿಯು ನಾಯಕ ಜೆ. ಬಾಲಕೃಷ್ಣ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಬೀಡಿ ಕೈಗಾರಿಕೆ ಸ್ಥಗಿತಗೊಳಿಸಿರುವುದನ್ನು ಕೈಬಿಡಬೇಕು. ಮಾತ್ರವಲ್ಲದೆ, ಕಾರ್ಮಿಕರಿಗೆ ಜೀವನ ನಿರ್ವಹಣೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ ಅವರು, ಕೇಂದ್ರ ಸರಕಾರವು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನ ಕಾಯ್ದೆ ಜಾರಿಗೊಳಿಸಿದ್ದರಿಂದ ಬೀಡಿ ಮಾರಾಟಕ್ಕೆ ತೊಡಕಾಗಿದೆ. ಬೀಡಿ ಕಟ್ಟಿನ ಮೇಲೆ ಶೇ.85 ಸಚಿತ್ರ ಮುದ್ರಿಸಲು ಅಸಾಧ್ಯ ಎಂಬ ಕಾರಣ ನೀಡಿ ಎ.6ರಿಂದ ಬೀಡಿ ಕೈಗಾರಿಕೆ ಮಾಲಕರು ಕೆಲಸ ಸ್ಥಗಿತಗೊಳಿಸಿದ್ದಾರೆ. ಇದರಿಂದ ಬೀಡಿ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಟ್ಪಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬಾರದು. ಜಾರಿ ಮಾಡುವುದಿದ್ದರೆ ಲಕ್ಷಾಂತರ ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಕಲ್ಪಿಸಿದ ಬಳಿಕ ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು. ಅಂದು ಬೆಳಗ್ಗೆ 10:30ಕ್ಕೆ ಕದ್ರಿಯಲ್ಲಿರುವ ಸಹಾಯಕ ಕಾರ್ಮಿಕರ ಆಯುಕ್ತರ ಕಚೇರಿ ಎದುರು ಬೀಡಿ ಕಾರ್ಮಿಕರ ಪ್ರತಿಭಟನಾ ಪ್ರದರ್ಶನ ನಡೆಸಿ ಮನವಿ ಸಲ್ಲಿಸಲಾಗುವುದು. ಮುಂದಿನ ಹಂತದ ಹೋರಾಟವನ್ನು ಪ್ರತಿ ತಾಲೂಕು ಕೇಂದ್ರಗಳಲ್ಲಿ, ಬೀಡಿ ಮಾಲಕರ ಡಿಪೋಗಳಲ್ಲಿ ನಡೆಸಿ ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ಪಿಕೆಟಿಂಗ್ ಚಳವಳಿ ನಡೆಸಲಾಗುವುದು. ಸಂಸತ್ ಸದಸ್ಯರು, ಉಸ್ತುವಾರಿ ಸಚಿವರು, ಶಾಸಕರನ್ನು ೇರಾವ್ ಮಾಡಿ ಹೋರಾಟ ಮಾಡಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಸ್‌ಕೆ ಬೀಡಿ ವರ್ಕರ್ಸ್ ಫೆಡರೇಶನ್‌ನ ಕೋಶಾಧಿಕಾರಿ ಬಿ. ಶೇಖರ್, ದ.ಕ. , ಉಡುಪಿ ಜಿಲ್ಲಾಬೀಡಿ ಕಂಟ್ರಾಕ್ಟುದಾರರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಮುಹಮ್ಮದ್ ರಫಿ, ಅಲಿಯಬ್ಬ ಉಪಸ್ಥಿತರಿದ್ದರು.





