ಆ.ತೆರಿಗೆ: ಆಧಾರ್, ನೆಟ್ ಬ್ಯಾಂಕಿಂಗ್ ಆಧಾರಿತ ಇ-ಫೈಲಿಂಗ್ ಮೇಲ್ಮನವಿ ವ್ಯವಸ್ಥೆಗೆ ಚಾಲನೆ
ಹೊಸದಿಲ್ಲಿ,ಎ.11: ಆನ್‌ಲೈನ್ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯ ಮಾದರಿಯಲ್ಲಿ ತೆರಿಗೆದಾತರು ತೆರಿಗೆ ಅಧಿಕಾರಿಯ ಮುಂದೆ ಮೊದಲ ಮೇಲ್ಮನವಿಯನ್ನು ಸಲ್ಲಿಸಲು ಆಧಾರ್ ಮತ್ತು ನೆಟ್ ಬ್ಯಾಂಕಿಂಗ್ ಆಧಾರಿತ ಇ-ಫೈಲಿಂಗ್ ದೃಢೀಕರಣ ವ್ಯವಸ್ಥೆಯೊಂದಕ್ಕೆ ಆದಾಯ ತೆರಿಗೆ ಇಲಾಖೆಯು ತನ್ನ ಅಧಿಕೃತ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಚಾಲನೆ ನೀಡಿದೆ.
ತೆರಿಗೆದಾತರು ತೆರಿಗೆ ಅಧಿಕಾರಿಗಳನ್ನು ಪದೇಪದೇ ಭೇಟಿಯಾಗುವ ಬವಣೆಯನ್ನು ತಗ್ಗಿಸುವುದು ಈ ನೂತನ ಉಪಕ್ರಮದ ಉದ್ದೇಶವಾಗಿದೆ.
ತೆರಿಗೆ ವರ್ಷ ಯಾವುದೇ ಆಗಿದ್ದರೂ ತೆರಿಗೆದಾತರ ಒಂದು ಫಾರ್ಮ್‌ನ್ನು ಊರ್ಜಿತಗೊಳಿಸಲು ಒಂದು ವಿದ್ಯುನ್ಮಾನ ದೃಢೀಕರಣ ಕೋಡ್(ಇವಿಸಿ) ಅನ್ನು ಬಳಸಬಹುದಾಗಿದೆ. ಇವಿಸಿಯನ್ನು ಇತರ ದೃಢೀಕರಣ ವಿವರಗಳೊಂದಿಗೆ ತೆರಿಗೆದಾತರ ಪಾನ್ ಎದುರು ದಾಖಲಿಸಲಾಗುವುದು. ಇವಿಸಿಯು 72 ಗಂಟೆಗಳ ಕಾಲ ಅಥವಾ ನಿಗದಿ ಪಡಿಸಿದ ಸಮಯ ಊರ್ಜಿತದಲ್ಲಿರುತ್ತದೆ ಎಂದು ಈ ಸಂಬಂಧ ಹೊರಡಿಸಿರುವ ಅಧಿಸೂಚನೆಯು ತಿಳಿಸಿದೆ.
Next Story





