ಬಲಾಢ್ಯರನ್ನು ಬಂಧಿಸುವ ಸಾಮರ್ಥ್ಯ ಪೋಲಿಸರಿಗೇಕಿಲ್ಲ?
ಮಾನ್ಯರೆ,
ಬಡವರ ಮೇಲೆ ದೂರು ದಾಖಲಾದ ಕೆಲವೇ ಕೆಲವು ನಿಮಿಷಗಳೊಳಗೆ ಅವರ ಮನೆಯ ಬಾಗಿಲನ್ನು ಒಡೆದು ಆರೋಪಿಗಳನ್ನು ಎಳೆದುಕೊಂಡು ಬರುವುದರಲ್ಲಿ ನಮ್ಮ ಪೊಲೀಸರು ತೋರಿಸುವ ಪೌರುಷವು ಬಲಾಢ್ಯರ ಮೇಲೆ ದೂರು ದಾಖಲಾದ ಸಂದರ್ಭಗಳಲ್ಲಿ ಎಲ್ಲಿ ಅದುಮಿ ಹೋಗುತ್ತದೆ ಎಂದು ಅರ್ಥವಾಗುತ್ತಿಲ್ಲ.
ಇದೀಗ ಬಾಳಿಗಾ ಹತ್ಯೆ ಪ್ರಕರಣದಲ್ಲೂ ಕೂಡ ಅದೇ ನಡೆಯುತ್ತಿದೆ. ಪ್ರಮುಖ ವ್ಯಕ್ತಿಯೊಬ್ಬನ ಮೇಲೆ ದೂರು ದಾಖಲಾಗಿದ್ದರೂ ಕೂಡ ಆತನನ್ನು ಬಂಧಿಸಲು ಪೊಲೀಸರು ಮಿನಾವೇಷ ಎಣಿಸುತ್ತಿದ್ದಾರೆ. ಬಲಾಢ್ಯರನ್ನು ಬಂಧಿಸಲು ಮಾತ್ರ ನಮ್ಮ ಪೊಲೀಸರು ಕಾನೂನು, ನೀತಿ ನಿಯಮಗಳನ್ನು ಅಳೆದು ತೂಗಿ ನೋಡುತ್ತಾರೆ. ಆದರೆ ಓರ್ವ ಬಡವನಾಗಿದ್ದರೆ ಆತ ಇಷ್ಟರೊತ್ತಿಗಾಗಲೇ ಕಂಬಿ ಎಣಿಸುತ್ತಿದ್ದ... ಅಲ್ಲವೇ?
Next Story





