ಉಡುಪಿ ಗ್ರಾಪಂ ಚುನಾವಣೆ: 5 ಸ್ಥಾನಗಳಿಗೆ ಅವಿರೋಧ ಆಯ್ಕೆ
ಉಡುಪಿ, ಎ.11: ಉಡುಪಿ ಜಿಲ್ಲೆಯ 3 ತಾಲೂಕುಗಳ 26 ಗ್ರಾಪಂಗಳಲ್ಲಿ ವಿವಿಧ ಕಾರಣಗಳಿಗಾಗಿ ತೆರವುಗೊಂಡಿರುವ 33 ಸ್ಥಾನಗಳಲ್ಲಿ ಐದು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 28 ಸ್ಥಾನಗಳಿಗೆ ಎ.20ರಂದು ನಡೆ ಯುವ ಚುನಾವಣೆಯಲ್ಲಿ ಒಟ್ಟು 61 ಮಂದಿ ಅಭ್ಯರ್ಥಿಗಳು ಸ್ಪರ್ಧಾ ಕಣ ದಲ್ಲಿ ಉಳಿದುಕೊಂಡಿದ್ದಾರೆ.
ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳ ವಿವರ ಹೀಗಿದೆ. ಕುಂದಾಪುರ ತಾಲೂಕು ಗೋಪಾಡಿ ಗ್ರಾಪಂನ ಗೋಪಾಡಿ-2 ಕ್ಷೇತ್ರದಲ್ಲಿ ಕಲ್ಪನಾ ಭಾಸ್ಕರ್ ಪೂಜಾರಿ (ಸಾ.ಮಹಿಳೆ), ಬೆಳ್ವೆ ಗ್ರಾಪಂ ಬೆಳ್ವೆ-3 ಕ್ಷೇತ್ರದಲ್ಲಿ ಕೃಷ್ಣ ನಾಯ್ಕೆ (ಸಾಮಾನ್ಯ). ಉಡುಪಿ ತಾಲೂಕು ಆವರ್ಸೆ ಗ್ರಾಪಂನ ಹಿಲಿಯಾಣ-1 ಕ್ಷೇತ್ರದಲ್ಲಿ ಉಷಾ ಸಿದ್ದ ನಾಯ್ಕಾ (ಹಿಂ.ವರ್ಗ ಅ ಮಹಿಳೆ), ಚಾಂತಾರು ಗ್ರಾಪಂನ ಹೇರೂರು-1 ಕ್ಷೇತ್ರದಲ್ಲಿ ರಾಮ ಪೂಜಾರಿ (ಹಿಂ.ವರ್ಗ ಅ), ಕಾರ್ಕಳ ತಾಲೂಕು ಸಾಣೂರು ಗ್ರಾಪಂನ ಸಾಣೂರು-5 ಕ್ಷೇತ್ರದಲ್ಲಿ ಪ್ರಭಾಕರ ಆರ್.ಸನಿಲ್ (ಹಿಂ.ವರ್ಗ ಅ).
ನೀತಿ ಸಂಹಿತೆ ಇಲ್ಲ: ಅವಿರೋಧ ಆಯ್ಕೆ ನಡೆದ ಮೇಲಿನ 5 ಸ್ಥಾನಗ ಳಿಗೆ ಚುನಾವಣೆ ನಡೆಯುವುದಿಲ್ಲವಾ ದ್ದರಿಂದ ಆಯಾ ಗ್ರಾಪಂಗಳಲ್ಲಿ ಜಾರಿ ಗೊಳಿಸಲಾದ ಚುನಾವಣಾ ನೀತಿ ಸಂಹಿತೆಯನ್ನು ಹಿಂಪಡೆಯಲಾಗಿದೆ.
ಉಳಿದ 28 ಸ್ಥಾನಗಳಲ್ಲಿ ಸ್ಪರ್ಧಾ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ವಿವರ ಹೀಗಿದೆ. (ಗ್ರಾಪಂ- ಒಟ್ಟು ಸ್ಥಾನ- ಚುನಾವಣೆ ನಡೆಯುವ ಸ್ಥಾನ- ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆ). ಕುಂದಾಪುರ ತಾಲೂಕು: ಪಡುವರಿ: 2-2-5, ಗಂಗೊಳ್ಳಿ: 1-1-2, ಕಟ್ ಬೆಲ್ತೂರು: 1-1-2, ಶಿರೂರು: 2-2-4, ನಾವುಂದ: 1-1-2, ನಾಡಾ: 1-1-3, ಚಿತ್ತೂರು: 1-1-2, ಗೋಪಾಡಿ: 1-0-1, ಕಿರಿಮಂಜೇಶ್ವರ: 1-1-2, ಬೆಳ್ವೆ:1-0-1.
ಉಡುಪಿ ತಾಲೂಕು: ಬೊಮ್ಮರಬೆಟ್ಟು: 1-1-2, ಅಲೆವೂರು: 2-2-4, ಬೆಳ್ಳೆ: 1-1-2, ಶಿರ್ವ: 2-2-4, ಬಾರ ಕೂರು: 1-1-2, ವಡ್ಡರ್ಸೆ: 1-1-2, ಆವರ್ಸೆ:1-0-1, ಕೊಡಿಬೆಟ್ಟು: 2-2-4, ಉದ್ಯಾವರ: 1-1-2, ಹೆಜಮಾಡಿ: 1-1-2, ಚಾಂತಾರು:1-0-1, ಹಂದಾಡಿ: 2-2-5.
ಕಾರ್ಕಳ ತಾಲೂಕು: ಪಳ್ಳಿ:1-1-2, ಕುಚ್ಚೂರು:2-2-5, ಮರ್ಣೆ: 1-1-3, ಸಾಣೂರು:1-0-1.





