ಉತ್ತರ ಕೊರಿಯದ ಹಿರಿಯ ಸೇನಾಧಿಕಾರಿ ದಕ್ಷಿಣಕ್ಕೆ ಪಲಾಯನ
ಸಿಯೋಲ್, ಎ. 11: ಉತ್ತರ ಕೊರಿಯದ ಸೇನಾ ಬೇಹುಗಾರಿಕೆ ವಿಭಾಗದ ಕರ್ನಲ್ ಒಬ್ಬರು ಕಳೆದ ವರ್ಷ ದಕ್ಷಿಣ ಕೊರಿಯಕ್ಕೆ ಪಲಾಯನ ಮಾಡಿದ್ದಾರೆ ಎಂದು ಸಿಯೋಲ್ ಅಧಿಕಾರಿಗಳು ಸೋಮವಾರ ತಿಳಿಸಿದರು. ಉನ್ನತ ಮಟ್ಟದ ಸೇನಾಧಿಕಾರಿಗಳು ನಿಷ್ಠೆ ಬದಲಿಸಿದ ಅಪರೂಪದ ಪ್ರಕರಣ ಇದಾಗಿದೆ.
ವಿದೇಶವೊಂದರ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ 13 ಮಂದಿ ಉತ್ತರ ಕೊರಿಯನ್ನರು ದಕ್ಷಿಣ ಕೊರಿಯಕ್ಕೆ ತಮ್ಮ ನಿಷ್ಠೆ ಬದಲಾಯಿಸಿದ್ದಾರೆ ಎಂದು ದಕ್ಷಿಣ ಕೊರಿಯ ಘೋಷಿಸಿದ ಮೂರು ದಿನಗಳ ಬಳಿಕ ಈ ವಿಷಯವನ್ನು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಉತ್ತರ ಕೊರಿಯದ ಯುವ ನಾಯಕ ಕಿಮ್ ಜಾಂಗ್ ಉನ್ 2011ರ ಕೊನೆಯಲ್ಲಿ ಅಧಿಕಾರಕ್ಕೆ ಬಂದ ಬಳಿಕದ ದೊಡ್ಡ ಮಟ್ಟದ ಪಕ್ಷಾಂತರ ಅದಾಗಿತ್ತು. ಈ ರೆಸ್ಟೋರೆಂಟ್ ಪೂರ್ವ ಚೀನಾದ ನಗರ ನಿಂಗ್‌ಬೊ ಎಂಬಲ್ಲಿದೆ ಎಂದು ದಕ್ಷಿಣ ಕೊರಿಯದ ಮಾಧ್ಯಮಗಳು ವರದಿ ಮಾಡಿವೆ
Next Story





