2024ರಲ್ಲಿ ಅರಬ್ ಮತ್ತು ಇಸ್ರೇಲ್ ನಡುವೆ ಭಾರೀ ಘಟನೆ ಸಂಭವಿಸಲಿದೆ:ಖಗೋಳತಜ್ಞ ಡಾ. ಉಜೈರಿ

ಕುವೈತ್‌ಸಿಟಿ, ಎಪ್ರಿಲ್.11: ಈಗಾಗಲೇ ತೀಕ್ಷ್ಣರೂಪದಲ್ಲಿರುವ ಅರಬ್-ಇಸ್ರೇಲ್ ಬಿಕ್ಕಟ್ಟು ಇನ್ನೂ ಹೆಚ್ಚು ತೀಕ್ಷಣವಾಗಲಿದೆ ಮತ್ತು 2024ಕ್ಕಾಗುವಾಗ ಅರಬರು ಮತ್ತು ಯಹೂದಿಗಳ ನಡುವೆ ಭಾರೀ ಸಮಸ್ಯೆ ಸೃಷ್ಟಿಯಾಗಲಿದೆ ಎಂದು ದೇಶದ ಪ್ರಮುಖ ಇತಿಹಾಸಕಾರ ಮತ್ತು ಹವಾಮಾನ ನಿರೀಕ್ಷಕ ಖಗೋಲತಜ್ಞರಾದ ಡಾ.ಸಾಲಿಹ್ ಅಲ್‌ಉಜೈರಿ ಹೇಳಿದ್ದಾರೆಂದು ವರದಿಯಾಗಿದೆ.
ಜಾಗತಿಕ ಮೂರ್ಖರ ದಿನದಲ್ಲಿ ತನ್ನ ಸಾವಿನ ವಾರ್ತೆಯನ್ನು ಹರಡಿದವರ ಕುರಿತು ತನಗೆ ಬೇಸರವಿಲ್ಲೆಂದು ಹೇಳಿದ ಉಜೈರಿ ಸಾಯುವ ಮೊದಲು ಎಲ್ಲ ಅರಬ್ ಮುಸ್ಲಿಂ ರಾಷ್ಟ್ರಗಳಲ್ಲಿ ಉಪವಾಸ ಮತ್ತು ಈದ್ ಒಂದೇ ದಿನ ನಡೆಯುವುದನ್ನು ನೋಡಲು ತನಗೆ ಆಸೆ ಇದೆಯೆಂದು ಅವರು ಹೇಳಿದರು.
ಭೂಮಿಯ ವ್ಯವಸ್ಥೆ ಖಗೋಳ ವಿಜ್ಞಾನದ ಆಧಾರದಲ್ಲಿಯೂ ಅರಬ್ ಮುಸ್ಲಿಂ ನಾಡುಗಳಲ್ಲಿ ರಮಝಾನ್ ವ್ರತ ಮತ್ತು ಈದ್ ಒಂದೇ ದಿವಸ ಆಗಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಎಳೆವೆಯಲ್ಲಿ ಇಂಜಿನಿಯರ್ ಆಗಬೇಕೆಂದು ಓಡಾಡಿದ್ದ ತಾನು ಖಗೋಳ ವಿಜ್ಞಾನಿಯಾದೆ.ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಉಜೈರಿ ಹೇಳಿದ್ದಾರೆ. ಶತ್ರುವನ್ನು ಅರಿಯಿರಿ ಎಂಬ ತತ್ವದ ಆಧಾರದಲ್ಲಿ ತಾನು ಖಗೋಳ ಕ್ಷೇತ್ರಕ್ಕೆ ಪಾದಾರ್ಪಣೆಮಾಡಿದೆ ಎಂದು ಅವರು ಹೇಳಿದ್ದಾರೆ. ಗುಡುಗು ಮಿಂಚು ಮಳೆ, ಕತ್ತಲು ಎಂಬ ಪ್ರಕೃತಿಯ ವಿದ್ಯಮಾನಗಳು ತನ್ನನ್ನು ಸದಾ ಹೆದರಿಸಿದೆ. ಯಾವುದೇ ಕೆಲಸವಾದರೂ ಕಾರ್ಯ ತನ್ನನ್ನು ಹೆದರಿಸಿದರೆ ಅದರ ರಹಸ್ಯಗಳೆಡೆಗೆ ಸಾಗಲು ತೀರ್ಮಾನಿಸದ್ದರಿಂದ ಇಂದಿನ ಈ ನಾನು ಉಂಟಾದೆ ಎಂದು ಉಜೈರಿ ಹೇಳಿರುವುದಾಗಿ ವರದಿಗಳು ತಿಳಿಸಿವೆ.







