ಮೇನಕಾ ರಾಯಿಟರ್ಸ್‌ನ ಇಬ್ಬರು ವರದಿಗಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಬಯಸಿದ್ದರು!

ಹೊಸದಿಲ್ಲಿ, ಎಪ್ರಿಲ್.12: ಮೋದಿ ಸರಕಾರದ ಸಚಿವೆ ರಾಯಿಟರ್ಸ್‌ನ ಇಬ್ಬರು ವರದಿಗಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಆಗ್ರಹಿಸಿರುವ ಕುರಿತು ವರದಿಯಾಗಿದೆ. ಕೇಂದ್ರ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಮೇನಕಾ ಗಾಂಧಿ ಇಬ್ಬರು ವರದಿಗಾರರ ಮಾನ್ಯತೆಯನ್ನು ವಾಪಸ್ ಪಡೆಯಬೇಕೆಂದು ಅಗ್ರಹಿಸಿದ್ದು ಆದರೆ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೊ(ಪಿಐಬಿ) ಅವರ ಆಗ್ರಹವನ್ನು ನಿರಾಕರಿಸಿದೆ ಎಂದು ವರದಿಗಳು ತಿಳಿಸಿವೆ.
ಮೇನಕಾ ಗಾಂಧಿ ರಾಯಿಟರ್ಸ್‌ನ ವರದಿಗಾರರಾದ ಅದಿತ್ಯ ಕಾಲ್ರಾ ಮತು ಆಂಡ್ರ್ಯೂ ಮೈಕಾಸ್ಕಿಲ್‌ರಿಗೆ ಸರಕಾರ ನೀಡಿರುವ ಮಾನ್ಯತೆಯನ್ನು ವಾಪಸು ಪಡೆಯಬೇಕೆಂದು ಆಗ್ರಹಿಸಿದ್ದರು.ಅಕ್ಟೋಬರ್ 19, 2015ರಲ್ಲಿ ರಾಯಿಟರ್ಸ್ ತನ್ನ ಒಂದು ವರದಿಯನ್ನು ವಾಪಸು ಪಡೆಯಲು ಅಥವಾ ಯಾವುದೇ ರೀತಿಯ ಬದಲಾವಣೆಗೆ ನಿರಾಕರಿಸಿತ್ತು. ಅದು ಪೌಷ್ಠಿಕಾಂಶ ಕೊರತೆಗೆ ಖರ್ಚುಮಾಡಲಾಗುವ ಬಜೆಟ್‌ನಲ್ಲಿ ಕಡಿತ ಮಾಡಲಾದ ವರದಿಯನ್ನು ಪ್ರಕಟಿಸಿತ್ತು.
ಮೇನಕಾ ಈವರದಿಯಲ್ಲಿ ಬಜೆಟ್ ಕಡಿತವನ್ನು ಟೀಕಿಸಿ ಸಿಗುವ ಹಣವು 2.7 ಮಿಲಿಯನ್ ಹೆಲ್ತ್‌ವರ್ಕರ್ಸ್‌ಗೆ ಜನವರಿ ತಿಂಗಳ ಸಂಬಳವನ್ನು ತುಂಬಬಹುದಾಗಿದೆ ಎಂದಿದ್ದರು. ರಾಯಿಟರ್ಸ್ ತನ್ನ ವರದಿಯಲ್ಲಿ ಮೇನಕಾರ ಹೇಳಿಕೆಯನ್ನು ಮೋದಿ ಸರಕಾರವನ್ನು ಸಾರ್ವಜನಿಕ ರೂಪದಲ್ಲಿ ಮಾಡಲಾದ ದುರ್ಲಭ ಟೀಕೆ ಎಂದು ಹೇಳಿತ್ತು. ಈ ಸುದ್ದಿ ಪ್ರಕಟವಾದ ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ರಾಯಿಟರ್ಸ್‌ನ ಅಭಿಪ್ರಾಯವನ್ನುಖಂಡಿಸಿತ್ತು ಮತ್ತುಅದು ಮೇನಕಾರ ಹೇಳಿಕೆಯನ್ನು ತಪ್ಪಾದ ಮತ್ತು ತುಂಟತನದ ವ್ಯಾಖ್ಯಾನ ನೀಡಿದೆ ಎಂದು ಹೇಳಿತ್ತು. ಮೇನಕಾ ಗಾಂಧೀ ಹೇಳಿದ್ದರೆನ್ನುವ ಹೇಳಿಕೆಯನ್ನು ತಪ್ಪಾಗಿ ಪ್ರಕಟಿಸಲಾಗಿದೆ ಸಂಪೂರ್ಣ ತಪ್ಪು ಮತ್ತು ಸಚಿವಾಲಯವು ರಾಯಿಟರ್ಸ್ ವಿರುದ್ಧ ಉಚಿತ ಕ್ರಮಕೈಗೊಳ್ಳಲಿದೆ ಎಂದು ಸಚಿವಾಲಯವು ಸ್ಪಷ್ಟನೆ ನೀಡಿತ್ತು.
ಮೇನಕಾ ಗಾಂಧಿಯವರ ಆಪ್ತ ಕಾರ್ಯದರ್ಶಿ ಮನೋಜ್ ಅರೋರಾ ವಾರ್ತಾ ವಿನಿಮಯ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸುನೀಲ್ ಅರೋರಾರಿಗೆ ಪತ್ರ ಬರೆದು ವರದಿಗಾರರಾದ ಕಾಲ್ರ ಮತ್ತು ಮೈಕಾಸ್ಕಿಲ್‌ರಿಗೆ ಪಿಐಬಿ ಮೂಲಕ ನೀಡಿದ ಮಾನ್ಯತೆಯನ್ನು ರದ್ದು ಪಡಿಸಬೇಕೆಂದು ಸೂಚಿಸಿದ್ದರು. ವಾರ್ತಾ ವಿನಿಮಯ ಮತ್ತು ಪ್ರಸಾರ ಖಾತೆ ಈಪ್ರಕರಣವನ್ನು ಪಿಐಬಿಗೆ ವಹಿಸಿತ್ತು. ಪಿಐಬಿಯು ಮಾರ್ಚ್‌ಏಳರಂದು ನೀಡಿದ ಉತ್ತರದಲ್ಲಿ ಮಾನ್ಯತೆ ವಾಪಸು ಪಡೆಯಲಾಗದು. ತಪ್ಪು ವರದಿಗಾರಿಕೆಗೆ ಅಥವಾ ತುಂಟತನದ ಸುದ್ದಿಗಾಗಿ ಮಾನ್ಯತೆಯನ್ನು ವಾಪಸು ಪಡೆಯುವಂತಹ ನಿಯಮ ವಿಲ್ಲ ಎಂದು ತಿಳಿಸಿರುವುದಾಗಿ ವರದಿಯಾಗಿದೆ.







