ಕಿನ್ನಿಗೋಳಿ : ಬಹುಗ್ರಾಮ ಕುಡಿಯುವ ನೀರು ಯೋಜನೆ ವೈಪಲ್ಯಕ್ಕೆ ರಾಜ್ಯ ಸರಕಾರ ಮತ್ತು ಇಲಾಖೆಯ ನೇರ ಹೊಣೆ - ಈಶ್ವರಪ್ಪ

ಕಿನ್ನಿಗೋಳಿ, ಎ.12: ಬಹುಗ್ರಾಮ ಕುಡಿಯುವ ನೀರು ಯೋಜನೆ ವೈಪಲ್ಯಕ್ಕೆ ರಾಜ್ಯ ಸರಕಾರ ಮತ್ತು ಇಲಾಖೆಯ ನೇರ ಹೊಣೆ ಎಂದು ವಿರೋಧ ಪಕ್ಷದ ನಾಯಕ ಈಶ್ವರಪ್ಪ ಹೇಳಿದರು.
ಅವರು ಕಿನ್ನಿಗೋಳಿ ಬಳ್ಕುಂಜೆಯ ಬಹುಗ್ರಾಮ ಕುಡಿಂುುವ ನೀರು ಯೋಜನಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿ ಬಳಿಕಮಾದ್ಯಮಗಳೊಂದಿಗೆ ಮಾತನಾಡಿದರು.ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ವೆುಲ್ನೋಟಕ್ಕೆ ತಿಳಿದು ಬರುತ್ತಿದೆ.ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಸಂಭಂದಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತೇನೆ. ಬಹುಗ್ರಾಮ ಕುಡಿಯುವ ನೀರು ಯೋಜನೆಯ ಗುತ್ತಿಗೆದಾರರಿಗೆ ಎರಡು 2500 ಕೋಟಿ ರೂಪಾಯಿ ಬಾಕಿ ಇರಿಸಿದ ಕಾರಣ ಯೋಜನೆ ತಡವಾಗಲು ಕಾರಣವಾಗಿದೆ. ಸರಕಾರದ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಎಲ್ಲಾ ಕಾಮಗಾರಿಗಳು ಸರಕಾರಮತ್ತು ಕರಾವಳಿಯ ಮೂವರು ಶಾಸಕರ ಇಚ್ಚಾ ಶಕ್ತಿಯ ಕೊರತೆಯಿಂದ ನನೆಗುದಿಗೆ ಬಿದ್ದಿದೆ. ಅಧಿವೇಶನದಲ್ಲಿ ಈ ಬಗ್ಗೆ ಸರಕಾರವನ್ನು ಪ್ರಶ್ನಿಸುತ್ತೇನೆ. ಕಾಮಗಾರಿ ಇನ್ನಷ್ಟು ವಿಳಂಬಗೊಂಡಲ್ಲಿ, ಬ್ರಹತ್ ಪ್ರತಿಭಟನೆ ನಡೆಸಲಾಗುವುದು ಮಾತ್ರವಲ್ಲದೆ, ಸಚಿವ ಎಚ್.ಕೆ.ಪಾಟೀಲ್ ಅವರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದರು.
ಕೇಂದ್ರ ಸರಕಾರ ಕುಡಿಯುವ ನೀರಿನ ಯೋಜನೆಗೆ 1400 ಕೋಟಿ ರೂಪಾಯಿ ಬಿಡುಗಡೆಗೊಳಿಸಿದರೂ ಅದು ಜನ ಸಾಮಾನ್ಯರನ್ನು ತಲುಪಿಲ್ಲ, ರಾಜ್ಯದ 136 ತಾಲೂಕುಗಳು ಬರ ಪೀಡಿತ ಪ್ರದೇಶಗಳೆಂದು ಸ್ವತ: ಸರಕಾರವೇ ಗೋಷಿಸಿದ್ದು ಜನರನ್ನು ಸಮಾದಾನಗೊಳಿಸುವ ಗೋಜಿಗೆ ಹೋಗದ ರಾಜ್ಯಸರಕಾರ, ಬ್ರಷ್ಟರಿಗೆ ರಕ್ಷಣೆ ನೀಡುವಲ್ಲಿ ನಿರತವಾಗಿದೆ ಎಂದು ಆರೋಪಿಸಿದರು, 190 ಹಳ್ಳಿಗಳಿಗೆ ಕುಡಿಯುವ ನೀರು ಉಣಿಸುವ ಯೋಜನೆಯ 100 ಕೋಟಿ ರೂಪಾಯಿ ಬಾಕಿ ಇರಿಸಿದ್ದು, 2014- 15 ರಿಂದ 2016 ಮಾರ್ಚ್ ಒಳಗಾಗಿ 7000 ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವ ಬಗ್ಗೆ ವಿಧಾನ ಸಭೆ ಮತ್ತು ಪರಿಷತ್ ಕಲಾಪಗಳಲ್ಲಿ ಗೋಷಿಸಿದ್ದು ಸಿ.ಎಂ ಸಿದ್ದರಮಯ್ಯ ಇದ್ದಕ್ಕೆ ಚಾಲನೆಯನ್ನೂ ನೀಡಿದ್ದರು ಆದರೆ ಈವರೆಗೆ ಕೇವಲ 1400 ಘಟಕಗಳನಷ್ಟೇ ಸ್ಥಾಪಿಸಿ ಜನರಿಗೆ ಅನ್ಯಾಯ ಎಸಗಿದೆ. ದಾವಣಗೆರೆಯಲ್ಲಿ 287 ನೀರಿನ ಘಟಕಗಳನ್ನು ಸ್ಥಾಪಿಸುವ ಬಗ್ಗೆ ಪ್ರಸ್ಥಾಪಿಸಿದ್ದ ಸರಕಾರ ಈವರೆಗೆ ಕೇವಲ 20 ಘಟಕಗಳನ್ನಷ್ಟೇ ಸ್ಥಾಪಿಸಿದೆ ಎಂದರು. ಈ ಸಂದರ್ಭ ಶಾಸಕ ಸುನೀಲ್ ಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಸುಚರಿತ್ ಶೆಟ್ಟಿ, ಕಸ್ತೂರಿ ಪಂಜ, ವಿನೋದ್ ಬೊಳ್ಳೂರು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಈಶ್ವರ್ ಕಟೀಲ್, ತಾಲೂಕು ಪಂಚಾಯತ್ ಸದಸ್ಯರಾದ ದಿವಾಕರ ಕರ್ಕೇರ, ಶರತ್ ಕುಬೆವೂರು, ರಶ್ಮಿ ಆಚಾರ್ಯ, ಬಿಜೆಪಿ ಮುಖಂಡರಾದ ೆ.ಆರ್ ಪಂಡಿತ್, ದೇವಪ್ರಸಾದ್ ಪುನರೂರು, ಬಾಹುಬಲಿ ಪ್ರಸಾದ್, ದೀಪಕ್ ಶೆಟ್ಟಿ, ಕಿಶೋರ್ ಕುಮಾರ್ ಮತ್ತಿತರರು ಇದ್ದರು.





