Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ವಿರೋಧಗಳ ನಡುವೆಯೂ ನೆಲೆಯೂರಲು...

ವಿರೋಧಗಳ ನಡುವೆಯೂ ನೆಲೆಯೂರಲು ಹವಣಿಸುತ್ತಿರುವ ಉರುಂಬಿ ಜಲವಿದ್ಯುತ್ ಯೋಜನೆ

ವರದಿ: ತಸ್ಲೀಂ ಮರ್ಧಾಳವರದಿ: ತಸ್ಲೀಂ ಮರ್ಧಾಳ12 April 2016 6:53 PM IST
share
ವಿರೋಧಗಳ ನಡುವೆಯೂ ನೆಲೆಯೂರಲು ಹವಣಿಸುತ್ತಿರುವ  ಉರುಂಬಿ ಜಲವಿದ್ಯುತ್ ಯೋಜನೆ

 ಕಡಬ, ಎ.5. ಕಳೆದ ಹಲವು ವರ್ಷಗಳಿಂದ ಕಡಬ ಪರಿಸರದ ನಾಲ್ಕೈದು ಗ್ರಾಮಸ್ಥರ ನಿದ್ದೆಗೆಡಿಸಿದ್ದ ಉರುಂಬಿ ಜಲವಿದ್ಯುತ್ ಯೋಜನೆಯನ್ನು ಅನುಷ್ಠಾನಿಸಲು ಕಂಪೆನಿಯವರು ತೆರೆಮರೆಯ ಕಸರತ್ತು ನಡೆಸುವ ಮೂಲಕ ಜನರನ್ನು ಹಾದಿತಪ್ಪಿಸುತ್ತಿದ್ದಾರೆ. ಆಂಧ್ರ ಮೂಲದ ಗ್ರೀನ್‌ಕೊ ಎಂಬ ಕಂಪೆನಿಯು ಕುಮಾರಧಾರಾ ಹಾಗೂ ಗುಂಡ್ಯ ಹೊಳೆಯ ಸಂಗಮ ಸ್ಥಳವಾದ ಕೂಡಿಗೆ ಸಮೀಪದ ಉರುಂಬಿ ಎಂಬಲ್ಲಿ ಕುಕ್ಕೇ ಹೈಡಲ್ ಪವರ್ ಪ್ರಾಜೆಕ್ಟ್ ಎಂಬ ಜಲವಿದ್ಯುತ್ ಯೋಜನೆಯನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿತ್ತು. ದ.ಕ. ಜಿಲ್ಲೆಯವರೇ ಆದ ಶೋಭಾ ಕರಂದ್ಲಾಜೆಯವರು ಇಂಧನ ಸಚಿವೆಯಾಗಿದ್ದಾಗ ಈ ಯೋಜನೆಯ ಕಾರ್ಯಯೋಜನೆಯನ್ನು ಸಿದ್ಧಪಡಿಸಿದ್ದು, ಅಂದಿನಿಂದ ಸ್ಥಳೀಯರ ವಿರೋಧಗಳ ನಡುವೆಯೂ ಕಂಪೆನಿಯವರು ಪರಿಸರದ ನಾಲ್ಕೈದು ಭೂಮಾಲೀಕರನ್ನು ತಮ್ಮ ಬಲೆಗೆ ಕೆಡವಿ, ಅವರ ಫಲವತ್ತಾದ ಕೃಷಿ ಭೂಮಿಯನ್ನು ಖರೀದಿಸಿದ್ದರು.

ಪ್ರಾರಂಭದಲ್ಲಿ ಯೋಜನೆಯನ್ನು ವಿರೋಧಿಸಿ ಆರಂಭವಾದ ಉರುಂಬಿ ಜಲವಿದ್ಯುತ್ ವಿರೋಧಿ ಹೋರಾಟ ಸಮಿತಿಯ ಕೆಲವು ನಾಯಕರುಗಳಿಗೆ ವಿವಿಧ ಆಮಿಷ ತೋರಿಸಿ ಅಣೆಕಟ್ಟು ಅನುಷ್ಠಾನ ಸಮಿತಿಯನ್ನು ರಚಿಸಿ ರೈತರನ್ನು ತಮ್ಮ ತಮ್ಮೊಳಗೆ ಎತ್ತಿಕಟ್ಟುವಲ್ಲಿ ಯಶಸ್ವಿಯಾದ ಕಂಪೆನಿಯವರು ಇದೀಗ ಸ್ಥಳೀಯರಿಂದ ಖರೀದಿಸಿದ ಕೃಷಿ ಭೂಮಿಗಳಿಗೆ ಬೇಲಿ ಹಾಕಿಸಿ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಕ ಮಾಡಿದ್ದಾರೆ. ಇದರಿಂದಾಗಿ ಆ ಪರಿಸರದ ಮೂಲಕ ತೆರಳುವ ಉಳಿದ ಜಮೀನಿನ ರೈತಾಪಿ ವರ್ಗದವರಿಗೆ ನಡೆದಾಡಲೂ ಕಷ್ಟಕರದ ವಾತಾವರಣ ನಿರ್ಮಾಣವಾಗಿದೆ. ಅಣೆಕಟ್ಟು ನಿರ್ಮಾಣವಾದಲ್ಲಿ ಕಡಬ, ಕೋಡಿಂಬಾಳ, ಕುಟ್ರುಪ್ಪಾಡಿ, ಪೆರಾಬೆ, ಕಾಣಿಯೂರು ಹಾಗೂ ಎಡಮಂಗಲ ಗ್ರಾಮಕ್ಕೊಳಪಟ್ಟ 800 ಎಕರೆಯಷ್ಟು ಕೃಷಿಭೂಮಿಗಳು ಮುಳುಗಡೆಯಾಗಲಿದ್ದು, ಸುಮಾರು 400 ರೈತ ಕುಟುಂಬಗಳು ಬೀದಿಗೆ ಬರಲಿವೆ. ಕೃಷಿ ಭೂಮಿಗಿಂತಲೂ ಹೆಚ್ಚಾಗಿ ನದಿಯ ಎರಡೂ ತಟಗಳಲ್ಲಿರುವ ಅರಣ್ಯ ಪ್ರದೇಶವು ಮುಳುಗಡೆಯಾಗಲಿದ್ದು, ಬೃಹತ್ ಪ್ರಮಾಣದ ಅರಣ್ಯ ನಾಶ ಸಂಭವಿಸಲಿದೆ.

ನಾಲ್ಕೈದು ಇಲಾಖೆಗಳು 2013ರಲ್ಲಿ ನೀಡಿದಂತಹ ಅನುಮತಿ ಪತ್ರಗಳನ್ನು ಹಿಡಿದುಕೊಂಡು ಬಂದು ಕಳೆದ ಚುನಾವಣೆಯ ದಿವಸ ಹೊಳೆಬದಿಯಲ್ಲಿ ಕಾಮಗಾರಿ ಪ್ರಾರಂಭಿಸಿದ್ದು, ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ನೀಡಿದ ದೂರಿನ ಮೇರೆಗೆ ಕಡಬ ತಹಶೀಲ್ದಾರ್ ಆಗಮಿಸಿ ಕಾಮಗಾರಿಗೆ ತಡೆಯೊಡ್ಡಿದ್ದರು. ಈ ಯೋಜನೆಯನ್ನು ವಿರೋಧಿಸಿ ನದಿ ಮಧ್ಯದಲ್ಲಿ ರೈತರು ಪೂಜೆಯನ್ನು ನಡೆಸುವ ಮೂಲಕ ಹೋರಾಟವನ್ನು ತೀವ್ರಗೊಳಿಸಿದ್ದಾರೆ.

ಬಂಡೆಕಲ್ಲುಗಳ ಮಧ್ಯ ಭಾಗದಲ್ಲಿ ಆಳವಾದ ಕೆರೆಯೊಂದಿದ್ದು, ಪಾಂಡವರು ಅಲ್ಲಿ ಸ್ನಾನ ಮಾಡುತ್ತಿದ್ದರೆಂಬ ಪ್ರತೀತಿ ಹಿಂದಿನಿಂದಲೂ ಇದೆ. ಪಕ್ಕದಲ್ಲಿನ ಬಂಡೆ ಕಲ್ಲಿನ ಮೇಲೆ ಸೀರೆಯನ್ನು ಹಾಸಿದಂತೆ ಕಪ್ಪಗಿನ ಗುರುತೊಂದಿದ್ದು, ಅದು ದ್ರೌಪದಿಯ ಸೀರೆಯಾಗಿದೆ ಎನ್ನುವ ನಂಬಿಕೆಯಿದೆ. ಪುರಾತನ ಹಿನ್ನೆಲೆಯನ್ನು ಹೊಂದಿರುವ ಈ ಸ್ಥಳದಲ್ಲಿ 24 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಘಟಕವನ್ನು ಪ್ರಾರಂಭಿಸಿ ಮಳೆಗಾಲದಲ್ಲಿ ಮಾತ್ರ ವಿದ್ಯುತ್ ಉತ್ಪಾದಿಸಿ ಪರಿಸರದಲ್ಲಿನ ಕೃಷಿ ಭೂಮಿ ಸೇರಿದಂತೆ ಅಪಾರ ಅರಣ್ಯ ಭೂಮಿ ಮುಳುಗಡೆಗೊಂಡು ನಾಶಕ್ಕೆ ಕಾರಣವಾಗುವಂತಹ ಯೋಜನೆಗಳನ್ನು ಕೈಬಿಡಬೇಕೆನ್ನುವುದು ಸ್ಥಳೀಯರ ಆಗ್ರಹ.

ಜಿಲ್ಲಾಧಿಕಾರಿಗಳ ಮೂಲಕ ಕುಟ್ಟುಪ್ಪಾಡಿ ಗ್ರಾಮ ಪಂಚಾಯತಿನ ಅನುಮತಿ ಕೇಳಿದ್ದು, ರೈತ ವಿರೋಧಿಯಾದ ಈ ಯೋಜನೆಗೆ ಅನುಮತಿ ನೀಡಲಾಗುವುದಿಲ್ಲವೆಂದು ನಿರ್ಣಯಿಸಲಾಗಿದೆ.

ಶ್ರೀಮತಿ ವಿದ್ಯಾ ಕೆ. ಗೋಗಟೆ,

ಸದಸ್ಯರು, ಕುಟ್ರುಪ್ಪಾಡಿ ಗ್ರಾ.ಪಂ.

ಸಾಮಾನ್ಯ ಮಳೆಗೆ ಕೃಷಿ ತೋಟಕ್ಕೆ ನೀರು ಬರುತ್ತಿದ್ದು, ಇನ್ನು ಅಣೆಕಟ್ಟು ಕಟ್ಟಿದ್ದಲ್ಲಿ ಕೃಷಿಭೂಮಿ ಮುಳುಗಡೆಗೊಂಡು ನಾಶವಾಗಲಿದೆ. ಆದುದರಿಂದ ಈ ಯೋಜನೆಯನ್ನು ಕೈಬಿಟ್ಟು ಪರ್ಯಾಯ ವ್ಯವಸ್ಥೆಯಾದ ಸೋಲಾರ್ ಘಟಕಗಳ ಮೂಲಕ ವಿದ್ಯುತ್ ಉತ್ಪಾದಿಸಲಿ.

ಕರುಣಾಕರ ಗೋಗಟೆ,

ಅಧ್ಯಕ್ಷರು, ಕುಮಾರಧಾರಾ ಪರಿಸರ ಸಂರಕ್ಷಣಾ ಸಮಿತಿ

ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಕೆಲವು ಕಂಪೆನಿಯವರು ಅಕ್ರಮವಾಗಿ ಜಲವಿದ್ಯುತ್ ಯೋಜನೆಯನ್ನು ನಿರ್ಮಿಸಲು ಹೊರಟಿದ್ದು, ಅದನ್ನು ವಿರೋಧಿಸಿ ಇಲ್ಲಿನ ರೈತರು ನಡೆಸುವ ಹೋರಾಟವನ್ನು ಸಂಪೂರ್ಣವಾಗಿ ಬೆಂಬಲಿಸಲಿದ್ದೇನೆ.

ಅನಂತ ಹೆಗ್ಗಡೆ ಆಶೀಸರ

ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷರು,

ವೃಕ್ಷಲಕ್ಷ ಆಂದೋಲನ ಸಂಘಟನೆಯ ರಾಜ್ಯಾಧ್ಯಕ್ಷರು

share
ವರದಿ: ತಸ್ಲೀಂ ಮರ್ಧಾಳ
ವರದಿ: ತಸ್ಲೀಂ ಮರ್ಧಾಳ
Next Story
X