ಬ್ರಸೆಲ್ಸ್ ದಾಳಿ: ಇನ್ನೂ ಇಬ್ಬರ ಬಂಧನ

ಬ್ರಸೆಲ್ಸ್, ಎ. 12: ಬ್ರಸೆಲ್ಸ್‌ನ ವಿಮಾನ ನಿಲ್ದಾಣ ಮತ್ತು ಮೆಟ್ರೊ ರೈಲು ನಿಲ್ದಾಣದಲ್ಲಿ ಕಳೆದ ತಿಂಗಳು ನಡೆದ ಭೀಕರ ಭಯೋತ್ಪಾದಕ ದಾಳಿಗೆ ಸಂಬಂಧಿಸಿ ಇಬ್ಬರು ಹೊಸ ಶಂಕಿತರ ವಿರುದ್ಧ ಬೆಲ್ಜಿಯಂ ಮೊಕದ್ದಮೆ ದಾಖಲಿಸಿದೆ ಎಂದು ಫೆಡರಲ್ ಪ್ರಾಸಿಕ್ಯೂಟರ್ ಕಚೇರಿ ಮಂಗಳವಾರ ತಿಳಿಸಿದೆ.
ಭಯೋತ್ಪಾದಕ ಗುಂಪಿನ ಚಟುವಟಿಕೆಗಳು, ಭಯೋತ್ಪಾದಕ ಹತ್ಯೆಗಳು ಮತ್ತು ಭಯೋತ್ಪಾದಕ ಹತ್ಯಾ ಯತ್ನಗಳನ್ನು ನಡೆಸಿದ ಆರೋಪಗಳನ್ನು ಇಸ್ಮಾಯೀಲ್ ಎಫ್. ಮತ್ತು ಇಬ್ರಾಹೀಂ ಎಫ್. ಎಂಬವರ ವಿರುದ್ಧ ಹೊರಿಸಲಾಗಿದೆ.
Next Story





