ಕುಶಾಲನಗರದ ಸರಕಾರಿ ಇಂಜಿನಿಯರಿಂಗ್ ಕಾಲೇಜಿಗೆ ‘ಎಕೆ್ಸಲೆಂಟ್ ಇಂಜಿನಿಯರಿಂಗ್ ಕಾಲೇಜ್ ಇನ್ ಕರ್ನಾಟಕ’ ಪ್ರಶಸ್ತಿ

ಕುಶಾಲನಗರ, ಎ.12: ಕಾವೇರಿಯ ತವರು, ಕೊಡಗಿನ ಹೆಬ್ಬಾಗಿಲು ಕುಶಾಲನಗರದಲ್ಲಿರುವ ಸರಕಾರಿ ಇಂಜಿನಿಯರಿಂಗ್ ಕಾಲೇಜಿಗೆ 2ನೆ ರಾಷ್ಟ್ರೀಯ ಕರ್ನಾಟಕ ಎಜುಕೇಷನ್ ಸಮಿಟ್ ಆ್ಯಂಡ್ ಅವಾರ್ಡ್ 2016ರ ‘ಎಕ್ಸೆಲೆಂಟ್ ಇಂಜಿನಿಯರಿಂಗ್ ಕಾಲೇಜ್ ಇನ್ ಕರ್ನಾಟಕ 2016’ ಎಂಬ ಪ್ರಶಸ್ತಿಗೆ ಭಾಜನವಾಗಿದೆ. ಎನ್‌ಇಎ (ನ್ಯಾಷನಲ್ ಕರ್ನಾಟಕ ಎಜುಕೇಷನ್ ಅವಾರ್ಡ್) ಎಂಬುದು ಭಾರತ ಸರಕಾರದ ವಿವಿಧ ಇಲಾಖೆಗಳಾದ ಈ epartment of NEMI, Department of MSME, AICTE, Association of Indian Universities, CMAI, VTU, NSIC ISO 9001:2008, Electronics India, NIXXI, NIELIT ಮುಂತಾದವುಗಳ ಸಹ ಭಾಗಿತ್ವವನ್ನು ಹೊಂದಿದೆ. ಮುದ್ದೇನಹಳ್ಳಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಶಿಕ್ಷಣ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದಲ್ಲಿ 2016 ಮಾರ್ಚ್ 14ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟಿ.ಬಿ.ಜಯಚಂದ್ರ, ಮಾನ್ಯ ಸಚಿವರು ಕಾನೂನು ಹಾಗೂ ಸಂಸದೀಯ ಮಂಡಳಿ ಮತ್ತು ಉನ್ನತ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ ಹಾಗೂ ದೇಶಪಾಂಡೆ, ಮಾನ್ಯ ಸಚಿವರು, ಭಾರಿ ಕೈಗಾರಿಕೆ ಹಾಗೂ ಪ್ರವಾಸೋಧ್ಯಮ ಇಲಾಖೆ, ಡಾ. ಕೆ.ಸುಧಾಕರ್, ಮಾನ್ಯ ಶಾಸಕರು, ಚಿಕ್ಕಬಳ್ಳಾಪುರ (ತಾ), ವಿಟಿಯು ಅಧಿಕಾರಿಗಳ ಉಪಸ್ಥಿತಿಯಲ್ಲಿ ಕರ್ನಾಟಕ ವಿವಿಧ ಮೂಲೆಗಳಿಂದ ಬಂದಿದ್ದ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸರಕಾರಿ ಇಂಜಿನಿಯರಿಂಗ್ ಕಾಲೇಜು, ಕುಶಾಲನಗರವನ್ನು ಎಕ್ಸೆಲೆಂಟ್ ಇಂಜಿನಿಯರಿಂಗ್ ಕಾಲೇಜು ಇನ್ ಕರ್ನಾಟಕ 2016 ಎಂಬ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಕಾಲೇಜನ ಪ್ರಾಂಶುಪಾಲ ಡಾ. ವೆಂಕಟೇಶ್, ನೌಕರರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಕೊಡಗು ಜಿಲ್ಲೆಯ ಸರಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಇಂತಹ ಉತ್ತಮ ಪ್ರಶಸ್ತಿ ಬರಲು ಕಾರಣಕರ್ತರಾದ ತಾಂತ್ರಿಕ ಶಿಕ್ಷಣ ಇಲಾಖೆ, ಕಾಲೇಜಿನ ಬೋಧಕ ಹಾಗೂ ಬೋಧಕೇತರ ವರ್ಗ, ಹಾಗೂ ವಿದ್ಯಾರ್ಥಿಗಳಿಗೆ ಮತ್ತು ಕಾಲೇಜಿನ ಅಭಿವೃದ್ಧಿಗೆ ಶ್ರಮಿಸಿರುವ ಸ್ಥಳೀಯರುಗಳಿಗೆ ಡಾ. ವೆಂಕಟೇಶ್ ಪ್ರಾಂಶುಪಾಲರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.





