‘ಕಮ್ ಆ್ಯಂಡ್ ಪ್ಲೇ’ ತನ್ನ ನೌಕರರಿಗೆ ಕೇಂದ್ರದ ಆಹ್ವಾನ
ಹೊಸದಿಲ್ಲಿ,ಎ.12: ಕೇಂದ್ರ ಸರಕಾರದ ನೌಕರರು ಮತ್ತು ಅವರ ಕುಟುಂಬ ಸದಸ್ಯರು ಈಗ ‘ಕಮ್ ಆ್ಯಂಡ್ ಪ್ಲೇ(ಬನ್ನಿ ಮತ್ತು ಆಟವಾಡಿ)’ ಯೋಜನೆಯಡಿ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್)ದ ಕ್ರೀಡಾಂಗಣಗಳಲ್ಲಿ ಈಜು,ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್‌ನಂತಹ ಕ್ರೀಡೆಗಳು ಮತ್ತು ದೈಹಿಕ ಕ್ಷಮತೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದಾಗಿದೆ.
ಜವಾಹರಲಾಲ್ ನೆಹರು ಕ್ರೀಡಾಂಗಣ ಮತ್ತು ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಕ್ರೀಡಾಂಗಣ ಸೇರಿದಂತೆ ಸಾಯ್‌ನ ವಿವಿಧ ಕ್ರೀಡಾ ಸೌಲಭ್ಯಗಳನ್ನು ನೌಕರರು,ಅವರ ಕುಟುಂಬ ವರ್ಗದವರು ಮತ್ತು ಅವಲಂಬಿತರು ಬಳಸಬಹುದಾಗಿದೆ. ಮೊದಲು ಬಂದವರಿಗೆ ಮೊದಲು ಸೇವೆ ಆಧಾರದಲ್ಲಿ ಈ ಸೌಲಭ್ಯಗಳು ಲಭಿಸಲಿದ್ದು, ಪ್ರತಿ ವ್ಯಕ್ತಿಗೆ ಶುಲ್ಕ 100 ರೂ.ಮೀರದು ಎಂದು ಸಿಬ್ಬಂದಿ ಮತ್ತಿ ತರಬೇತಿ ಇಲಾಖೆಯು ತನ್ನ ಆದೇಶದಲ್ಲಿ ತಿಳಿಸಿದೆ.
ದೇಶಾದ್ಯಂತ ಸುಮಾರು 50 ಲಕ್ಷ ಕೇಂದ್ರ ಸರಕಾರಿ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ.
Next Story





