ಬಿಕಾಂ ಪದವಿಯಲ್ಲಿ ಎ.ಪಿ. ಅಂಕುಶಗೆ ಐದು ಚಿನ್ನ
ತೀರ್ಥಹಳ್ಳಿ, ಎ. 12: ಇತ್ತೀಚೆಗೆ ಕುವೆಂಪು ವಿಶ್ವವಿದ್ಯಾನಿಲಯದ 26ನೆ ಘಟಿಕೋತ್ಸವದಲ್ಲಿ ಕವರಿಹಕ್ಕಲು ಗ್ರಾಮದ ಡಿ.ಎಸ್. ಪ್ರಕಾಶ್ ಹಾಗೂ ಉಷಾ ದಂಪತಿಗಳ ಪುತ್ರಿ ಎ.ಪಿ. ಅಂಕುಶ ಅವರು ಬಿಕಾಂ ಪದವಿಯಲ್ಲಿ ಪ್ರಥಮ ರ್ಯಾಂಕ್‌ನೊಂದಿಗೆ ಐದು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಶಿವಮೊಗ್ಗದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಅಭ್ಯಾಸ ಮಾಡಿದ ಇವರು ಬಿಕಾಂ ಪದವಿಯಲ್ಲಿ ಶೇ.95.6 ಅಂಕ (1434/1500) ಅಂಕ ಗಳಿಸಿ ತೀರ್ಥಹಳ್ಳಿ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಬಿಕಾಂ ಪದವಿಗೆ ಕೊಡಲ್ಪಡುವ ಡಾ. ಡಿ.ಎಂ. ಬಸವರಾಜು ಚಿನ್ನದ ಪದಕ, ದಿ.ಗುರುಮೂರ್ತಿ ಶೆಟ್ಟಿ ಸ್ಮಾರಕ ಚಿನ್ನದಪದಕ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಚಿನ್ನದ ಪದಕ ಹೀಗೆ ಐದು ಚಿನ್ನದ ಪದಕಗಳನ್ನು ಅಂಕುಶ ಪಡೆದಿದ್ದಾರೆ. ಎ.ಪಿ. ಅಂಕುಶ ಅವರಿಗೆ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಸರಕಾರಿ ಪದವಿಪೂರ್ವ ಕಾಲೇಜು ಅಭಿನಂದನೆಗಳನ್ನು ಸಲಿಸಿದೆ.
Next Story





