ನಮ್ಮ ಜೀವದಲ್ಲಿ ನಾಯಕತ್ವ ಇದರೆ ಯಶಸ್ವಿ ಜೀವನವಾಗಲು ಸಾಧ್ಯ : ಅಬ್ದುರ್ರಹ್ಮಾನ್ ದಾರಿಮಿ

ಉಳ್ಳಾಲ. ಎ,12: ನಮ್ಮ ಜೀವದಲ್ಲಿ ನಾಯಕತ್ವ ಇದರೆ ಯಶಸ್ವಿ ಜೀವನವಾಗಲು ಸಾಧ್ಯ ಎಂದು ಕೂಟುಂಬಾರ ಅಬ್ದುರ್ರಹ್ಮಾನ್ ದಾರಿಮಿ ಅಭಿಪ್ರಾಯಪಟ್ಟರು.
ಅವರು ದ.ಕ ಜಿಲ್ಲಾ ಎಸ್‌ವೈಎಸ್ ಹಮ್ಮಿಕೊಂಡ 100ದಿನಗಳ ಸಾಂಘಿಕ ಕಾರ್ಯಕ್ರಮದ ಸಮಾರೂಪ ಅಂಗವಾಗಿ ಮಂಗಳವಾರ ತೊಕ್ಕೊಟ್ಟಿನ ಯುನಿಟಿ ಸಭಾಂಗಣದಲ್ಲಿ ನಡೆದ "ಲೀಡರ್ಸ್ ಮೀಟ್-2016" ಕಾರ್ಯಕ್ರಮದಲ್ಲಿ ವಿಷಯ ಮಂಡಿಸಿ ಮಾತನಾಡಿದರು.
ಎಲ್ಲಾ ವಿಚಾರದಲ್ಲು ವಿಶೇಷವಾಗಿ ಸಂಘ ಸಂಸ್ಥೆಗಳಲ್ಲಿ ನಾಯಕತ್ವ ಅತ್ಯಗತ್ಯವಾಗಿದೆ. ನಾಯಕತ್ವ ಎಂಬುದು ಓರ್ವ ವ್ಯಕ್ತಿಯ ವಿಶೇಷತೆಯಾಗಿದೆ ಎಂದು ಹೇಳಿದರು.
ಎಸ್‌ವೈಎಸ್ ಬೆಳ್ತಂಗಡಿ ಸೆಂಟರ್ ಅಧ್ಯಕ್ಷ ಸಲಾಂ ತಂಙಳ್ ಬೆಳ್ತಂಗಡಿ ದುಅ ನೆರವೇರಿಸಿ ಕಾರ್ಯಕ್ರಮಕ್ಕೆ ಚಲನೆ ನೀಡಿದರು.
ಎಸ್‌ವೈಎಸ್ ದ.ಕ ಜಿಲ್ಲಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ ಕಾರ್ಯಕ್ರದ ಅಧ್ಯಕ್ಷತೆ ವಹಿಸಿದರು.
ಎಸ್‌ವೈಎಸ್ ರಾಜಾಧ್ಯಕ್ಷ ಕೆ.ಪಿ ಹುಸೈನ್ ಸಅದಿ ಕೆ.ಸಿ ರೋಡ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಕ್ಫ್ ಬೋರ್ಡ್ ಅಧ್ಯಕ್ಷ ಎಸ್.ಎಂ ರಶೀದ್ ಹಾಜಿ, ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಡಿ.ಕೆ ಉಮರ್ ಸಖಾಫಿ, ಉಪಾಧ್ಯಕ್ಷ ತೋಕೆ ಮುಹೀಯ್ಯದೀನ್ ಕಾಮಿಲ್ ಸಖಾಫಿ, ರಾಜ್ಯ ಉಪಾಧ್ಯಕ್ಷ ಜಿ.ಎಂ ಕಾಮಿಲ್ ಸಖಾಫಿ, ಸಯ್ಯದ್ ಅಲವಿ ತಂಙಳ್ ಕಿನ್ಯ, ಜಿಲ್ಲಾ ಉಪಾಧ್ಯಕ್ಷ ಅಶ್-ಅರಿಯ್ಯ್ ಮುಹಮ್ಮದಾಲಿ ಸಖಾಫಿ, ಜಿಲ್ಲಾ ಸದಸ್ಯ ಅಶ್ರಫ್ ಕಿನಾರ, ಎಸ್ಸೆಸ್ಸೆಫ್ ರಾಜ್ಯ ನಾಯಕ ಕೆ.ಎಂ ಅಬೂಬಕ್ಕರ್ ಸಿದ್ದೀಕ್, ಕೆಸಿಎಫ್ ಸದಸ್ಯ ಅಮಾನಿ ಅಜ್ಜಾವರ, ತಲಪಾಡಿ ರೇಂಜ್ ಅಧ್ಯಕ್ಷ ಎನ್.ಎಸ್ ಉವರ್ ಮಾಸ್ಟರ್, ಕಲ್ಲಾಪು ಜುಮಾ ಮಸೀದಿ ಖತೀಬ್ ನಾಸಿರುದ್ದೀನ್ ಸಅದಿ, ಜಿಲ್ಲಾ ಸದಸ್ಯ ಬಿ.ಜಿ ಹನೀಫ್ ಹಾಜಿ, ಜಿಲ್ಲಾ ಕೊಶಾಧಿಕಾರಿ ಕತ್ತಾರ್ ಬಾವ ಹಾಜಿ, ಜಿಲ್ಲಾ ಕಾರ್ಯದರ್ಶಿ ಸಲ್ಲಿಲ್ ಬಜಪೆ, ರಶೀದ್ ಹಾಜಿ ಪಾಂಡೇಶ್ವರ ಮುಂತಾದವರು ಉಪಸ್ಥಿತರಿದರು.
ಜಿಲ್ಲಾ ಪ್ರ.ಕಾರ್ಯದರ್ಶಿ ಎಂ.ಎ ಸಿದ್ದೀಕ್ ಸಖಾಫಿ ಮೂಳೂರು ಸ್ವಾಗತಿಸಿದರು. ಶಿಬಿರದ ಅಮೀರ್ ಕೆ.ಇ ಅಬ್ದುಲ್ ಖಾದರ್ ರಝ್ವಿ ಸಾಲೆತ್ತೂರು ಕಾರ್ಯಕ್ರಮ ನಿರೂಪಿಸಿದರು.







