ಆನ್‌ಲೈನ್ ಮೂಲಕ ಜಾತಿ, ಆದಾಯ ಪ್ರಮಾಣ ಪತ್ರ
ಬೆಂಗಳೂರು, ಎ.12: ಜಾತಿ, ಆದಾಯ ಪತ್ರಗಳು ಹಾಗೂ ಇತರೆ ಸರ್ಕಾರಿ ಪ್ರಮಾಣ ಪತ್ರಗಳಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಆನ್‌ಲೈನ್ ಮೂಲಕವೇ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳುವ ವ್ಯವಸ್ಥೆಯನ್ನು ಕಂದಾಯ ಇಲಾಖೆ ಜಾರಿ ಮಾಡಿದೆ. ಮನೆಯಲ್ಲಿಯೇ ಅಥವಾ ಸೈಬರ್‌ಕೆಫೆಗಳಲ್ಲಿ ಕುಳಿತು ಡಿಡಿಡಿ.್ಞಚ್ಚಛ್ಟಿಜಿ.ಚ್ಟ್ಞಠಿ.ಜಟ.ಜ್ಞಿ ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಯ ಪ್ರಗತಿಯನ್ನು ತಿಳಿಯುವ ಹಾಗೂ ಪ್ರಮಾಣ ಪತ್ರವನ್ನು ಮುದ್ರಿಸಿಕೊಳ್ಳುವ ಅವಕಾಶವನ್ನು ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





