ನಾಳೆ ಮಿತ್ತೂರಿನಲ್ಲಿ ಅಜ್ಮೀರ್ ವೌಲಿದ್
ಮಾಣಿ, ಎ.12: ಮಾಣಿ ದಾರುಲ್ ಇರ್ಶಾದ್ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ವರ್ಷಂ ಪ್ರತಿ ಆಚರಿಸಿಕೊಂಡು ಬರುವ ಅಜ್ಮೀರ್ ವೌಲಿದ್ ಹಾಗೂ ಏರ್ವಾಡಿ ಶುಹದಾ ನೇರ್ಚೆ ಎ.14ರಂದು ನಡೆಯಲಿದೆ. ಪೂರ್ವಾಹ್ನ 11ಕ್ಕೆ ಜರಗುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಾಣಿ ಉಸ್ತಾದ್ ವಹಿಸಲಿದ್ದು, ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್, ಅಸ್ಸೈಯದ್ ಝೈನುಲ್ ಆಬಿದೀನ್ ಜಮಲುಲೈಲಿ ತಂಙಳ್ ಕಾಜೂರು ವೌಲಿದ್ ನೇತೃತ್ವ ವಹಿಸಲಿದ್ದಾರೆ. ಅಸ್ಸೈಯದ್ ಸಿಟಿಎಂ ಉಮರ್ ಅಸ್ಸಖಾಫ್ ತಂಙಳ್ ಮನ್‌ಶರ್ ಉದ್ಘಾಟಿಸಲಿದ್ದಾರೆ. ಶೈಖುನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಉಪನ್ಯಾಸ ನೀಡಲಿದ್ದಾರೆ ಎಂದು ಸಂಸ್ಥೆಯ ನಿರ್ವಹಣಾ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಸಖಾಫಿ ಮಾಣಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





