ಐಪಿಎಲ್: ಆರ್‌ಸಿಬಿ ಗೆಲುವಿನ ಆರಂಭ

ಕೊಹ್ಲಿ-ವಿಲಿಯರ್ಸ್ ಭರ್ಜರಿ ಜೊತೆಯಾಟ
ಬೆಂಗಳೂರು, ಎ.12: ಡೇವಿಡ್ ವಾರ್ನರ್ ಏಕಾಂಗಿ ಹೋರಾಟದ ಹೊರತಾಗಿಯೂ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 45 ರನ್‌ಗಳ ಅಂತರದಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9ನೆ ಆವೃತ್ತಿಯ ಐಪಿಎಲ್‌ನ್ನು ಗೆಲುವಿನೊಂದಿಗೆ ಆರಂಭಿಸಿದೆ.
ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಗೆಲ್ಲಲು 228 ರನ್ ಕಠಿಣ ಗುರಿ ಪಡೆದಿದ್ದ ಹೈದರಾಬಾದ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಸನ್‌ರೈಸರ್ಸ್ 35 ರನ್ ಗಳಿಸುವಷ್ಟರಲ್ಲಿ ಶಿಖರ್ ಧವನ್(8) ವಿಕೆಟ್ ಕಳೆದುಕೊಂಡಿತು.
ಆಗ ಮೊಸಿಸ್ ಹೆನ್ರಿಕ್ಸ್(19) ಅವರೊಂದಿಗೆ 2ನೆ ವಿಕೆಟ್‌ಗೆ 51 ರನ್ ಜೊತೆಯಾಟ ನಡೆಸಿದ ವಾರ್ನರ್(58 ರನ್, 25 ಎಸೆತ, 4 ಬೌಂಡರಿ, 5 ಸಿಕ್ಸರ್) ಹೈದರಾಬಾದ್‌ಗೆ ಗೆಲುವಿನ ಆಸೆ ಮೂಡಿಸಿದ್ದರು. ಆದರೆ, ವಾರ್ನರ್ ಅವರು ವ್ಯಾಟ್ಸನ್‌ಗೆ ವಿಕೆಟ್ ಒಪ್ಪಿಸಿದ ಬೆನ್ನಿಗೇ ಹೈದರಾಬಾದ್ ಬ್ಯಾಟಿಂಗ್ ಸರದಿ ಕುಸಿತದ ಹಾದಿ ಹಿಡಿಯಿತು. ವಿಕೆಟ್‌ಕೀಪರ್-ದಾಂಡಿಗ ಒಮನ್ ಓಜಾ(0) ಶೂನ್ಯಕ್ಕೆ ಔಟಾದರು. 6ನೆ ವಿಕೆಟ್‌ಗೆ 46 ರನ್ ಸೇರಿಸಿದ ಆಶೀಷ್ ರೆಡ್ಡಿ(32) ಹಾಗೂ ಮಾರ್ಗನ್ ತಂಡದ ಮೊತ್ತವನ್ನು 150ರ ಗಡಿ ತಲುಪಿಸಿದರು.
ಮಾರ್ಗನ್(22) ಹಾಗೂ ಕರಣ್ ಶರ್ಮ(26) 7ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 35 ರನ್ ಸೇರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಆರ್‌ಸಿಬಿ ಪರ ಶೇನ್ ವ್ಯಾಟ್ಸನ್(2-30)ಹಾಗೂ ಚಾಹಲ್(2-43) ತಲಾ ಎರಡು ವಿಕೆಟ್ ಪಡೆದರು.
ಆರ್‌ಸಿಬಿ 227/4: ಇದಕ್ಕೆ ಮೊದಲು ಹೈದರಾಬಾದ್ ತಂಡದಿಂದ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಯಕ ವಿರಾಟ್ ಕೊಹ್ಲಿ ಹಾಗೂ ದಕ್ಷಿಣ ಆಫ್ರಿಕದ ಸ್ಟಾರ್ ದಾಂಡಿಗ ಎಬಿ ಡಿವಿಲಿಯರ್ಸ್ ಭರ್ಜರಿ ಜೊತೆಯಾಟ, ಸರ್ಫರಾಝ್ ಖಾನ್(10 ಎಸೆತ, 35 ರನ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಗೆಲುವಿಗೆ 228 ರನ್ ಗುರಿ ನೀಡಿದೆ.
ಎರಡನೆ ಓವರ್‌ನಲ್ಲಿ ಕ್ರಿಸ್ ಗೇಲ್(1) ವಿಕೆಟ್‌ನ್ನು ಕಳೆದುಕೊಂಡಿದ್ದ ಆರ್‌ಸಿಬಿ ಆಘಾತ ಅನುಭವಿಸಿತ್ತು. ಆಗ 2ನೆ ವಿಕೆಟ್‌ಗೆ 157 ರನ್ ಜೊತೆಯಾಟವನ್ನು ನಡೆಸಿದ ಕೊಹ್ಲಿ(75 ರನ್, 51 ಎಸೆತ, 7 ಬೌಂಡರಿ, 3 ಸಿಕ್ಸರ್) ಹಾಗೂ ಡಿವಿಲಿಯರ್ಸ್(82 ರನ್, 42 ಎಸೆತ, 7 ಬೌಂಡರಿ, 6 ಸಿಕ್ಸರ್) ಬೌಂಡರಿ ಹಾಗೂ ಸಿಕ್ಸರ್‌ಗಳ ಸುರಿಮಳೆಗೈಯುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.
ಇನಿಂಗ್ಸ್ ಅಂತ್ಯದಲ್ಲಿ ಅಬ್ಬರಿಸಿದ ಯುವ ದಾಂಡಿಗ ಸರ್ಫರಾಝ್ ಖಾನ್(ಔಟಾಗದೆ 35, 10 ಎಸೆತ, 5 ಬೌಂಡರಿ, 2 ಸಿಕ್ಸರ್) ಆರ್‌ಸಿಬಿ 4 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಲು ನೆರವಾದರು. ಹೈದರಾಬಾದ್‌ನ ಕರಣ್ ಶರ್ಮ(0-57) ದುಬಾರಿ ಬೌಲರ್ ಎನಿಸಿಕೊಂಡರು. ಭುವನೇಶ್ವರ ಕುಮಾರ್(2-55) ಹಾಗೂ ಮುಸ್ತಾಫಿಝುರ್ರಹ್ಮಾನ್(2-26) ತಲಾ 2 ವಿಕೆಟ್ ಪಡೆದರು.
ಸ್ಕೋರ್ ವಿವರ
ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಲ್ಲಿ 227/4
ಕ್ರಿಸ್ ಗೇಲ್ ಬಿ ಭುವನೇಶ್ವರ ಕುಮಾರ್ 1
ವಿರಾಟ್ ಕೊಹ್ಲಿ ಬಿ ಭುವನೇಶ್ವರ ಕುಮಾರ್ 75
ಎಬಿಡಿ ವಿಲಿಯರ್ಸ್ ಸಿ ಮಾರ್ಗನ್ ಬಿ ರಹ್ಮಾನ್ 82
ವ್ಯಾಟ್ಸನ್ ಸಿ ಓಜಾ ಬಿ ರಹ್ಮಾನ್ 19
ಸರ್ಫರಾಝ್ ಖಾನ್ ಔಟಾಗದೆ 35
ಕೇದಾರ್ ಜಾಧವ್ ಔಟಾಗದೆ 8
ಇತರ 7
ವಿಕೆಟ್ ಪತನ: 1-6, 2-163, 3-183, 4-183
ಬೌಲಿಂಗ್ ವಿವರ: ಆಶೀಷ್ ನೆಹ್ರಾ 2.1-0-21-0
ಭುವನೇಶ್ವರ ಕುಮಾರ್ 4-0-55-2
ಮುಸ್ತಾಫಿಝುರ್ರಹ್ಮಾನ್ 4-0-26-2
ಹೆನ್ರಿಕ್ಸ್ 4-0-41-0
ಕೆವಿ ಶರ್ಮ 4-0-57-0
ಆಶೀಷ್ ರೆಡ್ಡಿ 1.5-0-25-0
ಸನ್‌ರೈಸರ್ಸ್ ಹೈದರಾಬಾದ್: 20 ಓವರ್‌ಗಳಲ್ಲಿ 182/6
ಡೇವಿಡ್ ವಾರ್ನರ್ ಸಿ ಮಿಲ್ನೆ ಬಿ ವ್ಯಾಟ್ಸನ್ 58
ಶಿಖರ್ ಧವನ್ ಬಿ ರಸೂಲ್ 8
ಹೆನ್ರಿಕ್ಸ್ ಸಿ ರಸೂಲ್ ಬಿ ಮಿಲ್ನೆ 19
ನಮನ್ ಓಜಾ ಸಿ ವಿಲಿಯರ್ಸ್ ಬಿ ಚಾಹಲ್ 0
ದೀಪಕ್ ಹೂಡಾ ಸಿ ಡಿವಿಲಿಯರ್ಸ್ ಬಿ ಚಾಹಲ್ 6
ಮಾರ್ಗನ್ ಔಟಾಗದೆ 22
ಆಶೀಷ್ ರೆಡ್ಡಿ ಬಿ ವ್ಯಾಟ್ಸನ್ 32
ಕರಣ್ ಶರ್ಮ ಔಟಾಗದೆ 26
ಇತರ 11
ವಿಕೆಟ್‌ಪತನ: 1-35, 2-86, 3-88, 4-93, 5-101, 6-147
ಬೌಲಿಂಗ್ ವಿವರ:
ಮಿಲ್ನೆ 4-0-43-1
ವ್ಯಾಟ್ಸನ್ 4-0-30-2
ಪರ್ವೇಝ್ ರಸೂಲ್ 4-0-31-1
ಹರ್ಷಲ್ ಪಟೇಲ್ 4-0-33-0
ವೈ. ಚಾಹಲ್ 4-0-43-2







