ಕೊಲ್ಲಂ: ಸಿಡಿಮದ್ದು ದುರಂತ ಸತ್ತವನು ಎದ್ದು ಬಂದ!
ಕೊಲ್ಲಂ, ಎ.12: ಜಿಲ್ಲೆಯ ಪುಟ್ಟಿಂಗಲ್ ದೇವಿ ದೇವಾಲಯದಲ್ಲಿ ರವಿವಾರ ಸಂಭವಿಸಿದ ಸಿಡಿಮದ್ದು ಅಗ್ನಿ ಅನಾಹುತದಲ್ಲಿ ‘ಸತ್ತಿದ್ದ’ ವ್ಯಕ್ತಿಯೊಬ್ಬ ಕೇರಳದ ಆಸ್ಪತ್ರೆಯೊಂದರಲ್ಲಿ ಎದ್ದು ಕುಳಿತಿದ್ದಾನೆ. ಆತನದೇ ಮೃತದೇಹವೆಂದುಕೊಂಡು ಕುಟುಂಬಿಕರು ಬೇರಾರದೋ ಶವದ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ದೇವಾಲಯದಲ್ಲಿ ಸಿಡಿಮದ್ದು ಪ್ರದರ್ಶನದ ಗುತ್ತಿಗೆದಾರನ ಬಳಿ ಕೆಲಸ ಮಾಡುತ್ತಿದ್ದ ಪ್ರದೀಪ್ ಎಂಬಾತ ದುರಂತದಲ್ಲಿ ಪ್ರಜ್ಞಾಶೂನ್ಯವಾಗಿ ಅಟ್ಟಿಂಗಲ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಸೋಮವಾರ ರಾತ್ರಿ ಪ್ರಜ್ಞೆ ಮರುಕಳಿಸಿದ ಆತ, ಮಂಗಳವಾರ ಕುಟುಂಬವನ್ನು ಸಂಪರ್ಕಿಸಿದ್ದನು.
ಆದರೆ, ಆತನ ಕುಟುಂಬಿಕರು ಪ್ರಮಾದವಶಾತ್, ಬೇರೊಂದು ಮೃತದೇಹವನ್ನು ಪ್ರದೀಪನದೆಂದು ಗುರುತಿಸಿದ್ದರು. ದುರಂತ ಸ್ಥಳದಲ್ಲಿ ಮೃತದೇಹಗಳೆಲ್ಲ ಕರಿ ಬೂದಿಯಿಂದ ಮುಸುಕಿದುದು ಇದಕ್ಕೆ ಕಾರಣವಾಗಿತ್ತು. ಅವರದನ್ನೊಯ್ದು ಅಂತ್ಯ ಕ್ರಿಯೆಯನ್ನೂ ನೆರವೆರಿಸಿದ್ದರು.
ಅಧಿಕಾರಿಗಳೀಗ, ಅಂತ್ಯ ಸಂಸ್ಕಾರ ನಡೆಸಲ್ಪಟ್ಟ ವ್ಯಕ್ತಿಯಾರೆಂಬ ತಲೆ ಬಿಸಿಯಲ್ಲಿದ್ದಾರೆ.
ಅವರ ಪಾಲಿಗೆ, ಕುಟುಂಬವು ಪ್ರಮೋದ್ ಬದುಕಿದ್ದಾನೆಂದು ನಂಬುವುದೇ ಸಾಧ್ಯವಿಲ್ಲ. ಪ್ರಮೋದ್‌ಗೆ ಸಹ ತಾನು ಬದುಕಿರುವುದು ಪವಾಡವೇ.
ತನಗೆ ಇದೊಂದು ಪುನರ್ಜನ್ಮದಂತೆ. ಸ್ಫೋಟ ನಡೆದ ಸ್ಥಳದ ಸಮಯದಲ್ಲಿದ್ದ ತಾನು ಹೇಗೆ ಪಾರಾದನೆಂದೇ ಗೊತ್ತಿಲ್ಲವೆಂದು 29ರ ಹರೆಯದ ಪ್ರಮೋದ್ ಹೇಳಿದ್ದಾನೆ.
ಆತನಿಗೆ ಸುಟ್ಟ ಗಾಯಗಳಾಗಿದ್ದು, ಶ್ರವಣ ಸಮಸ್ಯೆಯೂ ಕಾಣಿಸಿಕೊಂಡಿದೆ.







