ಅಡ್ಯಾರ್‌ಪದವು: ರೈಲ್ವೆ ಹಳಿಯಲ್ಲಿ ಯುವಜೋಡಿಯ ಮೃತದೇಹ ಪತ್ತೆ

ಮಂಗಳೂರು, ಎ.13: ನಗರ ಹೊರವಲಯದ ಅಡ್ಯಾರ್‌ಪದವಿನಲ್ಲಿ ರೈಲ್ವೆ ಹಳಿಯ ಮೇಲೆ ಯುವ ಜೋಡಿಯ ಮೃತದೇಹವು ಇಂದು ಬೆಳಗ್ಗೆ ಪತ್ತೆಯಾಗಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಸ್ಥಳೀಯ ನಿವಾಸಿಗಳಾದ ಕ್ಲೌಡ್(35) ಹಾಗೂ ಜಯಂತಿ(30) ಎಂದು ಗುರುತಿಸಲಾಗಿದೆ. ಕ್ಲೌಡ್ ನೀರುಮಾರ್ಗದ ಪೋಸ್ಟ್‌ಮ್ಯಾನ್ ಆಗಿ ಮಂಗಳೂರಿನ ನೀರುರ್ಮಾಗದಲ್ಲಿ ದುಡಿಯುತ್ತಿದ್ದರು. ಜಯಂತಿ ಕೂಡಾ ಇದೇ ಪರಿಸರದಲ್ಲಿ ಎಲೆಕ್ಟ್ರಾನಿಕ್ಸ್ ಮಳಿಗೆಯೊಂದರಲ್ಲಿ ಸೇಲ್ಸ್‌ಗರ್ಲ್ ಆಗಿದ್ದರು ಎಂದು ತಿಳಿದುಬಂದಿದೆ. ಭಿನ್ನ ಕೋಮಿನ ಪ್ರೇಮಿಗಳಾಗಿದ್ದ ಇವರಿಗೆ ತಮ್ಮ ಕುಟುಂಬಸ್ಥರಿಂದ ವಿರೋಧವಿತ್ತು ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ.
ಕಳೆದೆರಡು ದಿನಗಳಿಂದ ಇವರಿಬ್ಬರು ನಾಪತ್ತೆಯಾಗಿದ್ದರು. ಪ್ರಕರಣದ ತನಿಖೆ ನಡೆಸುತ್ತಿರುವ ರೈಲ್ವೆ ಪೊಲೀಸರು ಮೃತದೇಹಗಳನ್ನು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





