ಎನ್ಐಎ ಅಧಿಕಾರಿ ತಂಝಿಲ್ ಅಹ್ಮದ್ ಪತ್ನಿ ಚಿಕಿತ್ಸೆ ಫಲಕಾರಿಯಾಗದೆ ನಿಧನ

ಲಕ್ನೋ, ಎ.13: ಕಳೆದ ಎರಡು ವಾರಗಳಿಂದ ದುಷ್ಕರ್ಮಿಗಳ ಗಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎನ್ಐಎ ಅಧಿಕಾರಿ ಮುಹಮ್ಮದ್ ತಂಝಿಲ್ ಅಹ್ಮದ್ ಅವರ ಪತ್ನಿ ಫರ್ಝಾನಾ ಅಹ್ಮದ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
_1.jpg)
ಕಳೆದ ವಾರ ಬಿಜ್ನೋರ್ ನಲ್ಲಿ ನಡೆದ ಸಂಬಂಧಿಕರ ಮದುವೆಗೆ ಹೋಗಿ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ವಾಪಸಾಗುತ್ತಿದ್ದ ವೇಳೆ ತನಿಖಾಧಿಕಾರಿತಂಝಿಲ್ ಅಹ್ಮದ್ ಅವರ ಕಾರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು ಏಕಾಏಕಿ ಗುಂಡಿನ ಮಳೆ ಸುರಿಸಿದ್ದರು. ಈ ವೇಳೆ ತಂಝೀಲ್ ದೇಹದೊಳಗೆ 24 ಗುಂಡುಗಳು ಹೊಕ್ಕಿ ಸಾವನ್ನಪ್ಪಿದ್ದರು. ಅವರ ಪತ್ನಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಕ್ಕಳಿಬ್ಬರು ಅಪಾಯದಿಂದ ಪಾರಾಗಿದ್ದರು.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಪೊಲೀಸರು ಮಂಗಳವಾರ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ. ಬಂಧನಕ್ಕೊಳಗಾಗಿರುವವರನ್ನು ಜೈನುಲ್ ಮತ್ತು ರಿಯಾನ್ ಎಂದು ಹೇಳಲಾಗುತ್ತಿದೆ.





