ಸಿಹಿ ತಿನ್ನುವ ಆಸೆಯನ್ನು ಹೀಗೆ ತಡೆಯಿರಿ, ಆರೋಗ್ಯ ಪಡೆಯಿರಿ!
ಅತಿಯಾದ ಸಕ್ಕರೆ ಹಾನಿಕರ ಎನ್ನುವುದು ನಮಗೆಲ್ಲ ಗೊತ್ತಿದೆ. ಹಾಗಿದ್ದರೂ ಸಕ್ಕರೆ ಪ್ರಮಾಣವನ್ನು ದೇಹದಲ್ಲಿ ಕಡಿಮೆ ಮಾಡುವ ಬಗ್ಗೆ ನಾವು ಯೋಚಿಸುವುದಿಲ್ಲ. ಆದರೆ ಬಯಸಿದಲ್ಲಿ ನೀವು ಸಕ್ಕರೆ ಸೇವನೆಯನ್ನು ನಿಯಂತ್ರಿಸಬಹುದು. ಇಲ್ಲಿದೆ ಕೆಲವು ಸಲಹೆಗಳು.
1. ಸಕ್ಕರೆ ಎಲ್ಲಿದೆ ಕಲಿಯಿರಿ
ಚಾಕಲೇಟು, ಕೇಕ್, ಕೋಲಾಗಳಲ್ಲಿ ಸಕ್ಕರೆ ಅಧಿಕವಿರುತ್ತದೆ. ಆದರೆ ಬೆಳಗಿನ ಉಪಹಾರ ಸಿರೆಲ್, ಫ್ಲೇವರ್ಡ್ ಯೋಗರ್ಟ್, ಗ್ರನೊಲ ಬಾರ್ಸ್, ಹಣ್ಣು, ಕೆಚಪ್, ಸಲಾಡ್ ಡ್ರೆಸ್ಸಿಂಗ್, ಪಾಸ್ತಾ ಸಾಸ್ ಮತ್ತು ಆಲ್ಕೋಹಾಲ್ ಇತ್ಯಾದಿಗಳಲ್ಲಿ ಅಧಿಕ ಸಕ್ಕರೆ ಪ್ರಮಾಣವಿರುತ್ತದೆ.
2. ಕೆಲವು ಸಣ್ಣ ಬದಲಾವಣೆ ಮಾಡಿಕೊಳ್ಳಿ
ಸಕ್ಕರೆ ಪ್ರಮಾಣವನ್ನು ಪೂರ್ಣವಾಗಿ ತಡೆಯುವ ಬದಲಾಗಿ ನಿಮ್ಮ ಪಾನೀಯದಿಂದ ಆರಂಭಿಸಿ. ಚಹಾದಲ್ಲಿ ಸಕ್ಕರೆ ಕಡಿಮೆ ಮಾಡಿ, ಸ್ಕ್ವೀಜ್ ಮಾಡಿದ ಕಿತ್ತಳೆ ರಸದ ಬದಲಾಗಿ ಫ್ಲೇವರ್ಡ್ ನೀರು ಮತ್ತು ಒಂದೇ ಆಹಾರದಲ್ಲಿ ವಿಭಿನ್ನ ಬ್ರಾಂಡುಗಳಲ್ಲಿ ಸಕ್ಕರೆ ಪ್ರಮಾಣ ಪರೀಕ್ಷಿಸಿ ಸೇವಿಸಿ.
3. ಬೆಳಗಿನ ಉಪಹಾರ ತಪ್ಪಿಸಬೇಡಿ
ಬೆಳಗಿನ ಉಪಹಾರ ನಿಮ್ಮ ಸಕ್ಕರೆ ಪ್ರಮಾಣವನ್ನು ಮಿತವಾಗಿಡುತ್ತದೆ. ಓಟ್ಸ್ ಅಥವಾ ಒಂದೆರಡು ಮೊಟ್ಟೆ ಉತ್ತಮ ಉಪಹಾರವಾಗಲಿದೆ. 4. ಆಲ್ಕೋಹಾಲ್ ಮಿತಿಯಲ್ಲಿರಲಿ
ಆಲ್ಕೋಹಾಲಲ್ಲಿ ಅತಿಯಾದ ಕ್ಯಾಲರಿಗಳಿರುತ್ತವೆ. ಇದು ಸಕ್ಕರೆಯ ವಿಷವರ್ತುಲಕ್ಕೆ ಕಾರಣವಾಗುತ್ತದೆ. ಹೀಗಾಗಿ ಕುಡಿತದ ನಂತರ ನಮ್ಮ ದೇಹ ಸಕ್ಕರೆಯ, ಅನಾರೋಗ್ಯಕರ ಆಹಾರ ಬಯಸುತ್ತದೆ.
5. ವ್ಯಾಯಾಮ
ಇದು ಒತ್ತಡದ ಮಟ್ಟವನ್ನು ಇಳಿಸಲು ನೆರವಾಗುತ್ತದೆ. ಸಿಹಿ ಬಯಸಲು ಇದು ದೊಡ್ಡ ಕಾಣಿಕೆ ಒದಗಿಸುತ್ತದೆ. ವ್ಯಾಯಾಮವು ಒತ್ತಡದ ಪ್ರಮಾಣವನ್ನು ಕಡಿಮೆ ಮಾಡಲು ನೆರವಾಗುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣ, ಶಕ್ತಿಯುತವಾಗಿರಲು ಮತ್ತು ಉತ್ತಮ ನಿದ್ರೆ ಹಾಗೂ ಫಿಟ್ನೆಸಿಗೆ ವ್ಯಾಯಾಮ ಬೇಕು.
6. ಸ್ನಾಕ್ಸ್ ಬಿಡಬೇಡಿ
ಓಟ್ ಕೇಕ್ ಗಳು ಮತ್ತು ಅವಕಾಡೋ ಸ್ಲೈಸ್ ಅಥವಾ ಕಾಟೇಜ್ ಚೀಸ್, ಕೊಬ್ಬಿಲ್ಲದ ಗ್ರೀಕ್ ಯೊಗಾರ್ಟ್, ಬೆರ್ರಿಗಳು ಮತ್ತು ಕಡಲೆಗಳನ್ನು ಸೇವಿಸಬಹುದು.
7. ವಿಟಮಿನ್ ಪಡೆಯಿರಿ
ಮುಖ್ಯವಾಗಿ ವಿಟಮಿನ್ ಬಿ ಮತ್ತು ಸಿ ಬೇಕು. ಇದು ನಮ್ಮ ಆಹಾರದಲ್ಲಿಯೇ ಸಿಗುತ್ತದೆ.
8. ಇತರ ಸಕ್ಕರೆಗಳ ಹೆಸರು
ಫ್ರಕ್ಟೋಸ್, ಕಾರ್ನ್ ಸಿರಪ್, ಸುಕ್ರೋಸ್ ಇತ್ಯಾದಿ. ಆಹಾರ ಲೇಬಲುಗಳಲ್ಲಿ ಕನಿಷ್ಠ 61 ವಿಭಿನ್ನ ಸಕ್ಕರೆಗಳ ವಿವರಗಳಿರುತ್ತವೆ. ಅವುಗಳ ಬಗ್ಗೆ ತಿಳಿದುಕೊಳ್ಳಿ.
9. ಸಕ್ಕರೆಯನ್ನು ಉತ್ತಮ ಕೆಲಸಕ್ಕೆ ಉಳಿಸಿ
ಸಕ್ಕರೆ ಪ್ರಮಾಣ ಕಡಿಮೆ ಮಾಡಬೇಕೆಂದರೆ ಪೂರ್ಣವಾಗಿ ಬಿಡಬೇಕು ಎಂದಲ್ಲ. ಕೇಕ್, ಸೂಪ್, ಡ್ರೆಸ್ಸಿಂಗ್, ಯೊಗಾರ್ಟ್ ಮತ್ತು ಧಾನ್ಯಗಳ ಸೇವನೆ ಬಿಡುವಂತಿಲ್ಲ. ಇದು ಸಕ್ಕರೆಮಯವಾಗಿರುತ್ತವೆಂದು ಹೇಳಲಾಗದು.
10. ಸಿಹಿಯಿಲ್ಲದ ವಸ್ತು ಖರೀದಿಸಿ
ಹೆಚ್ಚು ಪ್ರಾಕೃತಿಕ ಫ್ಲೇವರುಗಳಾದ ವೆನಿಲ, ಸಿನಾಮನ್, ಲಿಂಬೆ ಮತ್ತು ನಟ್ ಮೆಗ್ ಬೆರೆಸಿ. ಇದು ರುಚಿಕರವಾಗಿರುತ್ತದೆ.
11. ಖಾಯಂ ಆಗಿರಿ
ಸಕ್ಕರೆ ಬಿಡುವುದು ಸುಲಭವಲ್ಲ. ಆದರೆ ಆಹಾರ ಸೇವನೆ ಬದಲಿಸಿ ಸಕ್ಕರೆ ಕಡಿಮೆ ಮಾಡಬಹುದು. ಆರೋಗ್ಯ ಲಾಭ ಇದಕ್ಕೆ ಪ್ರೇರಣೆ ನೀಡಬಹುದು.