ಪುಟ್ಟಿಂಗಲ್ ಸಿಡಿಮದ್ದು ದುರಂತ:ಪೊಲೀಸರ ವಿರುದ್ಧ ಗಂಭೀರ ಆರೋಪ ಹೊರಿಸಿದ ಜಿಲ್ಲಾಧಿಕಾರಿ ವರದಿ

ಕೊಲ್ಲಂ,ಎಪ್ರಿಲ್ 13: ಪರವೂರು ಪುಟ್ಟಿಂಗಲ್ ದೇವಿ ದೇವಾಸ್ಥಾನದಲ್ಲಿ ಸಂಭವಿಸಿದ ಸಿಡಿಮದ್ದು ದುರಂತಕ್ಕೆ ಪೊಲೀಸರೇ ಸಂಪೂರ್ಣ ಹೊಣೆಯೆಂದು ಜಿಲ್ಲಾಧಿಕಾರಿ ಎ. ಶೈನಮೋಲ್ ವರದಿ ನೀಡಿದ್ದಾರೆ. ರೆವೆನ್ಯೂ ಸಚಿವರಿಗೆ ನೀಡಿದ ವರದಿಯಲ್ಲಿ ಡಿಸಿ ಈ ರೀತಿಯ ತೀಕ್ಷ್ಣ ಟೀಕೆಯನ್ನು ಮಾಡಿದ್ದು. ಸಿಡಿಮದ್ದು ಸಿಡಿಸುವ ಕೆಲಸ ಮಾಡಬೇಡಿ ಎಂದು ಜಿಲ್ಲಾಡಳಿತದ ಆದೇಶವನ್ನು ಪೊಲೀಸರು ಜಾರಿಗೊಳಿಸಲು ಸಿದ್ಧರಾಗಿಲ್ಲ. ಸಿಡಿಮದ್ದು ಸಿಡಿಸಲು ಅನುಮತಿ ಸಿಕ್ಕಿದೆ ಎಂದು ಸಂಘಟಕರು ಹೇಳಿದ್ದನ್ನು ಪೊಲೀಸರು ಒಪ್ಪಿಕೊಂಡಿದ್ದಾರೆ. ಘಟನೆಗೆ ಪೊಲೀಸರ ನಿಷ್ಕ್ರಿಯತೆಯೇ ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ತನ್ನ ವರದಿಯಲ್ಲಿ ಬೆಟ್ಟು ಮಾಡಿದ್ದಾರೆ. ಇದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ ಎಂದು ವರದಿಗಳು ತಿಳಿಸಿವೆ.
ದುರಂತಕ್ಕೆ ಸಂಬಂಧಿಸಿ ಪೊಲೀಸರು ಸ್ವೀಕರಿಸಿದ ಕ್ರಮಗಳು ಕುರಿತು ಕೊಲ್ಲಂ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಇಂದು ಮುಖ್ಯ ಕಾರ್ಯದರ್ಶಿಗೆ ವರದಿ ಸಮರ್ಪಿಸಲಿದ್ದಾರೆ. ಜಿಲ್ಲಾಧಿಕಾರಿಯ ಬಹಿರಂಗ ಪ್ರಸ್ತಾವನೆ ಕುರಿತು ಪೊಲೀಸ್ ಮುಖ್ಯಸ್ಥರ ನಡುವೆ ತರ್ಕಕ್ಕೂ ಕಾರಣವಾಗಿದೆ. ತಮ್ಮ ಅತೃಪ್ತಿಯನ್ನು ಪೊಲೀಸ್ ಗೃಹಖಾತೆಗೆ ಸೂಚಿಸಿದೆ. ದುರಂತ ನಡೆದಿರುವುದಕ್ಕೆ ಕೊಲ್ಲಂ ಸಿಟಿ ಕಮಿಶನರ್ ವಿರುದ್ಧ ಜಿಲ್ಲಾಧಿಕಾರಿ ಮಾತಾಡಿದ್ದರು. ಪೊಲೀಸರು ಸ್ಥಳದಲ್ಲಿದ್ದೂ ಸಿಡಿಮದ್ದು ಸಿಡಿಸುವುದನ್ನು ತಡೆದಿಲ್ಲ ಎಂದು ಅವರು ಆರೋಪಿಸಿದ್ದರು.
ಜನರನ್ನು ರಕ್ಷಿಸುವುದರಲ್ಲಿ ಸರಕಾರಿ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದು ನಿನ್ನೆ ಹೈಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿತ್ತು. ಮುಜರಾಯಿ ಪದಾಧಿಕಾರಿಗಳಿಗೆ ಸಿಡಿಮದ್ದು ಗುತ್ತೆದಾರಿಗೆ ಮಾತ್ರವಲ್ಲ ಅಧಿಕಾರಿಗಳೂ ದುರಂತಕ್ಕೆ ಜವಾಬ್ದಾರರು. ಆದ್ದರಿಂಗ ನಿರ್ಲಕ್ಷ್ಯ ತೋರಿಸಿದ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮಕೈಗೊಳ್ಳಬೇಕಾಗಿದೆ ಎಂದು ಕೋರ್ಟು ಹೇಳಿತ್ತು. ಆರೋಪಿಗಳ ವಿರುದ್ಧ ಉದ್ದೇಶಿತವಲ್ಲದ ನರಹತ್ಯೆ ಎಂಬ ಪ್ರಕರಣದಾಖಲಿಸಲಾಗುವುದು ಎಂದು ಪೊಲೀಸ್ ತಿಳಿಸಿದರೂ ಕೋರ್ಟು ಉದ್ದೇಶಿತನರಹತ್ಯೆ ಕೇಸು ದಾಖಲಿಸಬೇಕೆಂದು ಆದೇಶಿಸಿತ್ತು. ಭಾರತೀಯ ದಂಡ ನಿಯಮದ ವಿವಿಧ ಕಲಂಗಳ ಪ್ರಕಾರ ಪೊಲೀಸರ ವಿರುದ್ಧವೂ ಕ್ರಮಕೈಗೊಳ್ಳಬೇಕೆಮದು ಅದು ಹೇಳಿದೆ. ಅರ್ಜಿ ವಿಚಾರಣೆ ಸಂದರ್ಭದಲ್ಲಿ ಪೊಲೀಸರನ್ನು ಕಟು ಶಬ್ದಗಳಿಂದ ಕೋರ್ಟು ತರಾಟೆಗೆತ್ತಿಕೊಂಡಿತ್ತೆಂದು ವರದಿಯಾಗಿದೆ.







