ತುಂಬೆ: ಬಸ್ ಢಿಕ್ಕಿ: ಬೈಕ್ ಸವಾರಗೆ ಗಾಯ

ಬಂಟ್ವಾಳ: ಖಾಸಗಿ ಬಸ್ಸೊಂದು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಾಯಗೊಂಡ ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ಮಧ್ಯಾಹ್ನ 2:30 ರ ಸುಮಾರಿಗೆ ತುಂಬೆಯಲ್ಲಿ ನಡೆದಿದೆ.
ಗಾಯಾಲು ಬೈಕ್ ಸವಾರನನ್ನು ಫರಂಗಿಪೇಟೆ ಸಮೀಪದ ಕುಂಜತ್ಕಲ ನಿವಾಸಿ ನಾಸಿರ್ ಎಂದು ಗುರುತಿಸಲಾಗಿದೆ.
ಬಿ.ಸಿ.ರೋಡ್ ಕಡೆಯಿಂದ ಫರಂಗಿಪೇಟೆ ಕಡೆಗೆ ಸಂಚಾರಿಸುತ್ತಿದ್ದ ಬೈಕನ್ನು ಓವರ್ ಟೇಕ್ ಮಾಡುವ ಭರದಲ್ಲಿರಾಜಶ್ರೀ ಹೆಸರಿನ ಖಾಸಗಿ ಬಸ್ ಹಿಂದಿನಿಂದ ಢಿಕ್ಕಿ ಹೊಡೆದಿದೆ.
ಅಪಘಾಯದಿಂದ ಬೈಕ್ ಸವಾರನ ಕಾಲು, ಕೈಗೆ ಗಾಯಗಳಾಗಿದ್ದು, ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story





