ಕಾಸರಗೋಡು : ಪ್ರಮುಖ ಧಾರ್ಮಿಕ ವಿಧ್ವಾಂಸ ಸಿ.ಪಿ. ಕುನ್ಚಬ್ದುಲ್ಲ ಮುಸ್ಲಿಯಾರ್ ನಿಧನ

ಕಾಸರಗೋಡು : ಪ್ರಮುಖ ಧಾರ್ಮಿಕ ವಿಧ್ವಾಂಸ ಸಿ.ಪಿ. ಕುನ್ಚಬ್ದುಲ್ಲ ಮುಸ್ಲಿಯಾರ್ (85) ನಿಧನರಾದರು ಕಾನ್ಚಾನ್ಗಾಡ್ ಹಳೆ ಕದಪ್ಪುರ ಮಹಾಲಾ ಅಧ್ಯಕ್ಷ ಹಾಗೂ ವಿವಿಧ ಶೈಕ್ಷಣಿಕ ಸಂಸ್ಥೆಗಳ ಸಲಹೆಗಾರರಾಗಿದ್ದರು.
ಕೇರಳ - ಕರ್ನಾಟಕದ ನೂರಾರು ಆಧ್ಯಾತ್ಮಿಕ ಮಜ್ಲೀಸ್ ಗಳ ನೇತ್ರತ್ವ ನೀಡುತ್ತಿದ್ದರು.
ಊರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಬಳಿಕ ಮಂಜನಾಡಿ ಉಸ್ತಾದ್ ರವರ ದರ್ಸ್ ನಲ್ಲಿ ವರ್ಷಗಳ ಕಾಲ ಆಧ್ಯಾತ್ಮಿಕ ಶಿಕ್ಷಣ ಪಡೆದರು .
19 ವರ್ಷಗಳ ಕಾಲ ಕುಂಬಳೆ ಶಿರಿಯ ದಲ್ಲಿ ಖತೀಬ್ ಆಗಿದ್ದರು. ವರ್ಷಗಳಿಂದ ಕಾನ್ಚಾ೦ಗಾಡ್ ಹಳೆ ಕಡಪ್ಪುರದಲ್ಲಿ ಜುಮಾಅ ಖುತ್ ಬುಕ್ ಗೆ ನೇತ್ರತ್ವ ನೀಡುತ್ತಿದ್ದರು.
ಪತ್ನಿ ಯರು : ದಿ. ಜೈನಬಾ, ಆಯಿಷಾ ಹಾಗೂ 13 ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ .
ಮುಸ್ಲಿಯಾರ್ ರವರ ನಿಧನಕ್ಕೆ ಸಮಸ್ತ ಪ್ರಧಾನ ಕಾರ್ಯದರ್ಶಿ ಕಾಂತಪುರ ಎ . ಪಿ ಅಬೂಬಕ್ಕರ್ ಮುಸ್ಲಿಯಾರ್ , ಸಮಸ್ತ ಉಪಾಧ್ಯಕ್ಷ ಎಂ . ಅಲಿಕುನ್ಚಿ ಮುಸ್ಲಿಯಾರ್ , ಸಆದಿಯ ಅಧ್ಯಕ್ಷ ಸಯ್ಯಿದ್ ಕೆ . ಎಸ್ ಆಟಕೋಯ ತಂಗಲ್ ಕುಂಬೋಲ್, ಮುಹಿಮ್ಮತ್ ಪ್ರಧಾನ ಕಾರ್ಯದರ್ಶಿ ಬಿ . ಎಸ್ ಅಬ್ದುಲ್ಲ ಕುನ್ಚಿ ಪೈಜಿ, ಕೇರಳ ಮುಸ್ಲಿಂ ಜಮಾಅತ್ ಅಧ್ಯಕ್ಷ ಸಯ್ಯಿದ್ ಮುಹಮ್ಮದ್ ಇಬ್ರಾಹಿಮ್ ಪೂಕುನ್ಚಿ ತಂಗಲ್ ಮೊದಲಾದವರು ಸಂತಾಪವ್ಯಕ್ತಪಡಿಸಿದ್ದಾರೆ.





