ಭಾರತೀಯ ಸೇನಾ ನೆಲೆಗೆಳನ್ನು ಬಳಸಲಿರುವ ಅಮೇರಿಕಾ ಸೇನೆ
ಮಹತ್ವಪೂರ್ಣ ಮಾಹಿತಿಗಳು

ನವದೆಹಲಿ: ಭಾರತ ಮತ್ತು ಅಮೆರಿಕಾ ಮಂಗಳವಾರದಂದು ಪರಸ್ಪರ ಸೇನಾ ನೆಲೆಗಳನ್ನು ಉಪಯೋಗಿಸುವ ಕುರಿತು ತಾತ್ವಿಕ ಒಪ್ಪಂದವೊಂದಕ್ಕೆ ಬಂದಿವೆ. ಲಾಜಿಸ್ಟಿಕ್ಸ್ ಎಕ್ಸ್‌ಚೇಂಜ್ ಮೆಮೊರಾಂಡಮ್ ಆಫ್ ಅಗ್ರೀಮೆಂಟ್‌ನಂತೆ ಅಮೆರಿಕಾದ ಯುದ್ಧ ವಿಮಾನಗಳು ಹಾಗೂ ನೌಕೆಗಳುಭಾರತೀಯ ಸೇನಾ ನೆಲೆಗಳನ್ನುಹಾಗೂ ಭಾರತ ಅಮೇರಿಕಾದ ಸೇನಾ ನೆಲೆಗಳನ್ನು ಬಳಸಲಿದ್ದು, ಇಂಧನ ಮರುತುಂಬಿಸಲು, ದುರಸ್ತಿ ಮತ್ತಿತರ ಉದ್ದೇಶಗಳಿಗೆ ವಾಯುನೆಲೆಗಳನ್ನು ಬಳಸಲಾಗುವುದು.
ಹಿಂದಿನ ಯುಪಿಎ ಸರಕಾರದಲ್ಲಿ ಎಕೆ ಆಂಟನಿ ರಕ್ಷಣಾ ಸಚಿವರಾಗಿದ್ದ ಸಮಯದಲ್ಲಿ ಇಂತಹ ಒಪ್ಪಂದವನ್ನು ವಿರೋಧಿಸಲಾಗಿತ್ತಲ್ಲದೆ ಇಂತಹ ಕ್ರಮಗಳು ಭಾರತದ ವಾಯು ನೆಲೆಗಳ ಸ್ವಾಯತ್ತತೆಯನ್ನು ಬಲಿಗೊಡುವುದೆಂದು ದೂರಲಾಗಿತ್ತು.
ಈ ಒಪ್ಪಂದದಂತೆ ಅಮೆರಿಕಾದಸೇನಾ ಪಡೆಗಳು ಭಾರತೀಯ ನೆಲದಲ್ಲಿ ನೆಲೆಯೂರುವುದಿಲ್ಲವೆಂದು ಪ್ರಸಕ್ತ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಹಾಗೂ ಅವರ ಅಮೆರಿಕಾದ ಸಹೋದ್ಯೋಗಿ ಆಶ್ಟನ್ಕಾರ್ಟರ್ ಸ್ಪಷ್ಟಪಡಿಸಿದ್ದಾರೆ. ಮೇಲಾಗಿ ಅಮೆರಿಕಾ ಭಾರತದ ಸ್ನೇಹಿತ ರಾಷ್ಟ್ರಗಳ ವಿರುದ್ಧ ಯಾವುದೇ ಮಿಲಿಟರಿ ಕಾರ್ಯಾಚರಣೆ ನಡೆಸಿದ ಪಕ್ಷದಲ್ಲಿ ಭಾರತ ಅದಕ್ಕೆ ಬೆಂಬಲ ನೀಡುವುದಿಲ್ಲವೆಂದುಅಧಿಕಾರಿಯೊಬ್ಬರು ತಿಳಿಸಿದರು. ಈ ಒಪ್ಪಂದವು ಕೇವಲ ಮಿಲಿಟರಿ ಸಹಕಾರಕ್ಕೆ ಸೀಮಿತವಾಗಿದ್ದು ಚೀನಾದ ವಿರುದ್ಧ ಮಿಲಿಟರಿ ಮೈತ್ರಿಯ ಉದ್ದೇಶವಿರುವುದಿಲ್ಲವೆಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತಕ್ಕೆ ಕಳೆದ ನಾಲ್ಕು ವರ್ಷಗಳಿಗೂ ಹೆಚ್ಚು ಸಮಯದಿಂದ ಅತ್ಯಧಿಕ ಶಸ್ತ್ರಾಸ್ತ್ರ ಪೂರೈಕೆದಾರ ದೇಶ ಅಮೇರಿಕಾ ಆಗಿದ್ದು ಭಾರತ ಹಾಗೂ ಅಮೇರಿಕಾ ಪ್ರತಿ ವರ್ಷ ಹಲವು ಮಿಲಿಟರಿಕವಾಯತುಗಳನ್ನು ನಡೆಸುತ್ತಿವೆ. ವಿಶ್ವದ ಅತ್ಯಂತ ದೊಡ್ಡಶಸ್ತ್ರಾಸ್ತ್ರ ಆಮದು ದೇಶ ಭಾರತವಾಗಿದ್ದು ಅಮೇರಿಕಾದ ತಾಂತ್ರಿಕ ಸಹಕಾರ ದೊರೆತಲ್ಲಿ ಮುಂದೆ ಭಾರತದಲ್ಲಿಯೇ ಅತ್ಯಾಧುನಿಕ ಶಸ್ತ್ರಾಸ್ತ್ರ ತಯಾರಿಸಿ ಪ್ರಧಾನಿ ಮೋದಿಯ ‘ಮೇಕ್ ಇನ್ ಇಂಡಿಯಾ’ ಅಭಿಯಾನದ ಯಶಸ್ಸಿಗೆ ತನ್ನ ಕಾಣಿಕೆ ನೀಡಲಿದೆ.







